ಬಿಪಾಶಾ ಒಳ ಉಡುಪು ಕಚ್ಚಿ ಎಳೆದು ಪೋಸ್ ಕೊಟ್ಟ.. ಭುಗಿಲೆದ್ದಿತ್ತು ವಿವಾದ; ರಮ್ಯಾ ಸಿನಿಮಾದ ಹೀರೋ ಹೇಳಿದ್ದೇನು?
90ರ ದಶಕದ ಕೊನೆಯಲ್ಲಿ ಬಾಲಿವುಡ್‌ನಲ್ಲಿ ಒಬ್ಬ ನಟನ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿತ್ತು. ಅದುವೇ ಡಿನೋ ಮೋರಿಯ. ಮೋಹಕತಾರೆ ರಮ್ಯಾ ನಟಿಸಿದ ಕನ್ನಡದ 'ಜೂಲಿ' ಸಿನಿಮಾದ ಹೀರೋ. 99ರಲ್ಲಿ 'ಪ್ಯಾರ್ ಮೇ ಕಭಿ ಕಭಿ' ಎನ್ನುವ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಈ ನಟ ಬಹುಬೇಗನೇ ಸಿನಿಮಾ ಮಂದಿಯ ಫೇವರಿಟ್ ಆಗಿದ್ದರು. ಹೈಟ್, ಲುಕ್, ಬಾಡಿ ಎಲ್ಲವೂ ಬಾಲಿವುಡ್ ಮಂದಿ ಬಯಸಿದಂತೆ ಇತ್ತು.
ಇಂಡಿಯನ್ ಸಿನಿಮಾದಲ್ಲಿ ಎಷ್ಟು ಬೇಗ ಮಿಂದರೋ ಅಷ್ಟೇ ಬೇಗ ಪಾತಾಳಕ್ಕೆ ಹೋಗಿದ್ದು ಇವರ ಚರಿತ್ರೆಯ ಕರಾಳ ಪುಟಗಳಲ್ಲೊಂದು. ತನ್ನ ವೃತ್ತಿ ಬದುಕಿನಲ್ಲಿ ಇದೂವರೆಗೂ ಈ ನಟ ಕೊಟ್ಟಿದ್ದು ಒಂದೇ ಒಂದು ಹಿಟ್ ಸಿನಿಮಾ ಅದು 'ರಾಝ್' (RAAZ). ಈ ಸಿನಿಮಾ ಬಳಿಕ ನಟಿಸಿದ ಯಾವುದೇ ಸಿನಿಮಾವೂ ಡಿನೋ ಮೋರಿಯಗೆ ಹಿಟ್ ಕೊಡಲಿಲ್ಲ.

'ರಾಝ್' ಸಿನಿಮಾ ಡಿನೋ ಮೋರಿಯಗೆ ಸದಾ ನೆನೆಪಿನಲ್ಲಿ ಉಳಿಯುವ ಸಿನಿಮಾ. ಅದಕ್ಕೆ ಕಾರಣ ಬಾಲಿವುಡ್ ನಟಿ ಬಿಪಾಶಾ ಬಸು. ಈ ಸಿನಿಮಾ ಮಾಡುವುದಕ್ಕೂ ಮೊದಲೇ ಡಿನೋ ಮೋರಿಯ ಹಾಗೂ ಬಿಪಾಶಾ ಬಸು ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ಸಿನಿಮಾದ ಶೂಟಿಂಗ್ ನಡೆಯುತ್ತಿರುವಾಗಲೇ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದರು. ಆ ವಿಷಯವನ್ನು ಡಿನೋ ಮೊರಿಯ ಈಗ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದ್ಯಾಕೆ ಅಂತ ನೋಡುವುದಕ್ಕೂ ಮುನ್ನ ಈ ಜೋಡಿ ಅಂಡರ್‌ವೇರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದು ದೇಶಾದ್ಯಂತ ಹಲ್‌ಚಲ್ ಎಬ್ಬಿಸಿತ್ತು. ಇಬ್ಬರನ್ನು ಅರೆಸ್ಟ್ ಮಾಡುವ ಮಟ್ಟಕ್ಕೆ ಹೋಗಿತ್ತು. ಆ ಜಾಹೀರಾತು ವಿವಾದ ಸೃಷ್ಟಿಸಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ರಾ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.
90ರ ದಶಕದಲ್ಲಿ ಬಿಪಾಶಾ ಬಸು ಹಾಗೂ ಡಿನೋ ಮೋರಿಯಾ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಅಲ್ಲಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. 1996 ರಲ್ಲಿ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಮಾಡಲಿಂಗ್‌ನಲ್ಲಿ ಸದ್ದು ಮಾಡಿದ್ದ ಈ ಜೋಡಿ ವಿದೇಶದ ಅಂಡರ್‌ವೇರ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು.

ಈ ಜಾಹೀರಾತು ಅಷ್ಟೊಂದು ವಿವಾದವನ್ನು ಹುಟ್ಟಾಕುವುದಕ್ಕೆ ಕಾರಣವಿತ್ತು. ಬಿಪಾಶಾ ಬಸು ಧರಿಸಿದ ಒಳ ಉಡುಪನ್ನು ಡಿನೋ ಮೋರಿಯ ಕಚ್ಚಿ ಎಳೆಯುವಂತೆ ಪೋಸ್ ಕೊಟ್ಟಿದ್ದರು. ಆ ಫೋಟೊ ಕೆಲವರ ನಿದ್ದೆ ಕೆಡಿಸಿತ್ತು. ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಡಿನೋ ಮೋರಿಯ ಹಾಗೂ ಬಿಪಾಶಾ ಬಸು ಇಬ್ಬರ ಮೇಲೆ ದೂರು ದಾಖಲಾಗಿತ್ತು. ಆ ವೇಳೆ ಈ ನಟ ಸಿಕ್ಕಾಪಟ್ಟೆ ಹೆದರಿ ಕೊಂಡಿದ್ದಾಗಿ ಪಿಂಕ್ ವಿಲ್ಲಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ನ್ಯೂಸ್‌ಪೇಪರ್‌ಗಳು ಹಾಗೂ ಪೊಲೀಸ್ ನಮ್ಮ ಹಿಂದೆ ಬಿದ್ದಿದ್ದವು. ಅದು ಇದು ಅಂತ ಶುರುವಾಗಿತ್ತು. ನನಗೆ ಇದೇನಾಗುತ್ತಿದೆ ಅಂತ ಅನಿಸಿತ್ತು. ನಾವು ಇನ್ನೇನು ದುಬೈನಲ್ಲಿ ಲಾಂಡ್ ಆಗಬೇಕು, ಆಗ ವಿಮಾನದಲ್ಲಿ ನ್ಯೂಸ್ ಪೇಪರ್ ಅನ್ನು ಓದುತ್ತಿದ್ದೆ. ಅದರಲ್ಲಿ ಚಿಕ್ಕದಾಗಿ ಬಿಪಾಶಾ ಹಾಗೂ ನನಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಬಹುದು ಎಂದು ಬರೆಯಲಾಗಿತ್ತು. ನಾವು ಇನ್ನೇನು ಲಾಂಡ್ ಆಗುತ್ತಿದ್ವಿ, ಆಗ ನನಗೆ ಏರ್ಪೋರ್ಟ್‌ಗೆ ಏನಾದರೂ ರೀಚ್ ಆಗುತ್ತೇವಾ ಅಂತ ಅನಿಸೋಕೆ ಶುರುವಾಗಿತ್ತು. ಮುಂದೇನಾಗುತ್ತೆ ಅನ್ನೋ ಪ್ರಶ್ನೆ ಕಾಡಿತ್ತು. ಆ ವೇಳೆ ನಿಜಕ್ಕೂ ನಾವು ಗಾಬರಿಯಾಗಿದ್ವಿ. ಆದರೆ, ಕೊನೆಯಲ್ಲಿ ಅಂತಹದ್ದೇನು ಆಗಲಿಲ್ಲ." ಎಂದು ನಟ ಡಿನೋ ಮೋರಿಯಾ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಬಿಪಾಶಾ ಬಸು ಜೊತೆ ಬ್ರೇಕಪ್ ಮಾಡಿಕೊಂಡಿದ್ದರ ಬಗ್ಗೆ ಡಿನೋ ಮೋರಿಯ ಮಾತಾಡಿದ್ದಾರೆ. ಇಬ್ಬರೂ 'ರಾಝ್' ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ವೇಳೆಗಾಗಲೇ ಇಬ್ಬರೂ ಡೇಟಿಂಗ್ ಮಾಡುವುದಕ್ಕೆ ಶುರು ಮಾಡಿ ಎರಡು ಮೂರು ವರ್ಷಗಳು ಆಗಿದ್ದವು. ಇದು ಬಾಲಿವುಡ್ ಮಂದಿಗೆ ಗೊತ್ತಾಗಿತ್ತು. ಈ ಜೋಡಿ ಇನ್ನೇ ಮದುವೆನೂ ಆಗುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಅಷ್ಟರಲ್ಲೇ ಡಿನೋ ಮೊರಿಯ ಹಾಗೂ ಬಿಪಾಶಾ ಬಸು ಇಬ್ಬರೂ ಬ್ರೇಕಪ್ ಮಾಡಿಕೊಂಡು ಬೇರೆ ಹಾದಿ ಹಿಡಿದಿದ್ದರು.
"ರಾಝ್ ಸಿನಿಮಾ ಮಾಡುವಾಗ ನಾವು ಬ್ರೇಕಪ್‌ಗೆ ಮುಂದಾಗಿದ್ವಿ. ನಿಜ ಹೇಳಬೇಕು ಅಂದರೆ, ನಾನು ಬಿಪಾಶಾ ಬಸುಯಿಂದ ಬ್ರೇಕಪ್ ಮಾಡಿಕೊಂಡಿದ್ದು. ಯಾಕಂದ್ರೆ ನಮ್ಮ ಬಳಿ ತುಂಬಾನೇ ಸಮಸ್ಯೆಗಳು ಇದ್ದವು. ಇದು ಬಿಪಾಶಾ ಬಸುಗೆ ತುಂಬಾನೇ ಕಷ್ಟ ಆಗಿತ್ತು. ಅವರು ಪ್ರತಿ ದಿನ ಸೆಟ್ಟಿನಲ್ಲಿ ತುಂಬಾನೇ ಕಷ್ಟ ಪಡುತ್ತಿದ್ದರು. ಅದು ನನಗೆ ಗೊತ್ತಾಗುತ್ತಿತ್ತು. ಅವರು ತುಂಬಾನೇ ಅಪ್‌ಸೆಟ್ ಆಗಿದ್ದರು. ನನಗೆ ಇದನ್ನು ನೋಡುವುದಕ್ಕೆ ತುಂಬಾ ಅಂದ್ರೆ ತುಂಬಾನೇ ಕಷ್ಟ ಆಗುತ್ತಿತ್ತು. ಯಾಕಂದ್ರೆ, ನಾನು ಅವರನ್ನು ಅಷ್ಟು ಕೇರ್ ಮಾಡುತ್ತಿದ್ದೆ." ಎಂದು ಡಿನೋ ಮೋರಿಯಾ ಹೇಳಿದ್ದಾರೆ.
ಡಿನೋ ಮೊರಿಯ ಹಾಗೂ ಬಿಪಾಶಾ ಅದಾಗಲೇ ಫೇಮಸ್ ಆಗಿದ್ದರು. ಹಾಗೇ ಇವರ ಬ್ರೇಕಪ್ ಸ್ಟೋರಿ ಕೂಡ ಅಷ್ಟೇ ಸದ್ದು ಮಾಡಿತ್ತು. ಈ ಜೋಡಿ ನಡುವೆ ಬಿರುಕು ಬಿಟ್ಟಿತ್ತು. ಮತ್ತೆಂದೂ ಒಂದಾಗ ಬಾರದೆಂದು ಇಬ್ಬರೂ ನಿರ್ಧರಿಸಿದ್ದರು. "ನಾವು ಅದಾಗಲೇ ಬೇರೆ ಬೇರೆ ದಾರಿಯನ್ನು ಹಿಡಿದಿದ್ದೆವು. ನಮ್ಮಲ್ಲಿರುವ ವೈಮನಸ್ಸನ್ನು ಸರಿ ಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿದ್ವಿ. ಆದರೆ, ಅದು ಸರಿ ಹೋಗುತ್ತಿರಲಿಲ್ಲ. ಹೀಗಾಗಿ ನಾನು ಅಲ್ಲಿಂದ ಹೊರ ಬಂದೆ" ಎಂದು ಡಿನೋ ಮೋರಿಯ ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಡಿನೋ ಮೋರಿಯ ಹಾಗೂ ಬಿಪಾಶಾ ಬಸು ಇಬ್ಬರು 2001ರಲ್ಲಿ ಬ್ರೇಕಪ್ ಮಾಡಿಕೊಂಡಿರು. ಆ ವೇಳೆ ಇಬ್ಬರಲ್ಲೂ ದ್ವೇಷ, ಸಿಟ್ಟು, ಕೋಪ ಎಲ್ಲವೂ ಇತ್ತು. ಆದರೆ, ನಂತರ ದಿನಗಳಲ್ಲಿ ಇಬ್ಬರೂ ಉತ್ತಮ ಸ್ನೇಹಿತರಾಗಿ ಮುಂದುವರೆದಿದ್ದರು. ಇಂದಿಗೂ ಬಾಲಿವುಡ್‌ನಲ್ಲಿ ಉತ್ತಮ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. "ಕೆಲವು ದಿನಗಳ ಬಳಿಕ ನಾವು ಉತ್ತಮ ಗೆಳೆಯರಾದೆವು. ಆ ಘಳಿಗೆ ತುಂಬಾನೇ ಕಷ್ಟಕರವಾಗಿತ್ತು. ಕೋಪ, ಭಾವುಕತೆ ಎಲ್ಲವೂ ಇದ್ದವು. ಆದರೆ, ಸಮಯ ಎಲ್ಲವನ್ನೂ ಅರ್ಥ ಮಾಡಿಸುತ್ತವೆ." ಎಂದು ಹೇಳಿದ್ದಾರೆ.
ಡಿನೋ ಮೊರಿಯ ಇದನ್ನು ಕೇವಲ ಬಾಯಿ ಮಾತಿಗೆ ಹೇಳಿಲ್ಲ. ಬಿಪಾಶಾ ಬಸು 2016ರಲ್ಲಿ ನಟ ಕರಣ್ ಗ್ರೋವರ್ ಅವರನ್ನು ವಿವಾಹವಾದಾಗ ಮದುವೆಗೆ ಡಿನೋ ಮೋರಿಯಾ ಹೋಗಿದ್ದರು. ಈ ಮೂಲಕ ಹಳೆಯದ್ದನ್ನೆಲ್ಲ ಮದುವೆ ನಾವಿಬ್ಬರೂ ಸ್ನೇಹಿತರಾಗಿದ್ದೇವೆ ಎಂದು ಸಾರಿದ್ದರು. ಬಿಪಾಶಾ ಬಸು ಮದುವೆಯಲ್ಲಿ ಹಾಲಿ ಹಾಗೂ ಮಾಜಿ ಒಟ್ಟಿಗೆ ಕಾಣಿಸಿಕೊಂಡಿದ್ದು ಕೂಡ ಅಷ್ಟೇ ಚರ್ಚೆಯಾಗಿತ್ತು.
ಈ ಬಾಲಿವುಡ್ ನಟ ಬೆಂಗಳೂರಿನಲ್ಲಿಯೇ ಬೆಳೆದಿದ್ದು, ಶಿಕ್ಷಣವನ್ನು ಮುಗಿಸಿದ್ದು ಇಲ್ಲಿಯೇ. ಈಗ ಮುಂಬೈನಲ್ಲಿ ನೆಲೆಸಿದ್ದರೂ, ಅವರಿಗೆ ಕನ್ನಡ ಮಾತಾಡುವುದಕ್ಕೆ ಬರುತ್ತೆ. ಈ ವಿಷಯವನ್ನು ಇದೇ ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮೋಹಕತಾರೆ ರಮ್ಯಾ ನಟಿಸಿದ 'ಜೂಲಿ' ಸಿನಿಮಾ ಮೂಲಕ ಡಿನೋ ಮೋರಿಯ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಸದ್ಯ ಬಹುತಾರಾಗಣದ 'ಹೌಸ್‌ಫುಲ್ 5' ಸಿನಿಮಾದಲ್ಲಿ ನಟಿಸುತ್ತಿದ್ದು, ಇನ್ನೇನು ಬಿಡುಗಡೆಯಾಗಬೇಕಿದೆ.


Click it and Unblock the Notifications











