"ಸಲ್ಮಾನ್ ಖಾನ್ ನನ್ನ ಮಗಳನ್ನು ರೇ*ಪ್ ಮಾಡುವುದಾಗಿ ಬೆದರಿಕೆ ಹಾಕಿದ್ರು"; ನಿರ್ದೇಶಕನಿಂದ ಗಂಭೀರ ಆರೋಪ
ಸಲ್ಮಾನ್ ಖಾನ್ ಹೆಸರು ಒಂದಲ್ಲ ಒಂದು ವಿವಾದದಲ್ಲಿ ಇತ್ತೀಚೆಗೆ ಸೇರಿಕೊಳ್ಳುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ನಟ ಸಲ್ಮಾನ್ ಖಾನ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸಂಚಲನವನ್ನೇ ಸೃಷ್ಟಿಸಿದೆ. ಸಲ್ಮಾನ್ ಖಾನ್‌ಗೆ ಮತ್ತೊಂದು ತಲೆ ನೋವು ಎದುರಾಗಿದೆ.
ಸಲ್ಮಾನ್ ಖಾನ್ ಇಮೇಜ್ ಅನ್ನೇ ಬದಲಿಸಿದ ಹಲವು ಸಿನಿಮಾಗಳಿವೆ. ಅದರಲ್ಲಿ 'ದಬಾಂಗ್' ವಿಶೇಷವಾಗಿ ನಿಲ್ಲುತ್ತೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಲುಕ್‌ನಿಂದ ಹಿಡಿದು ಮ್ಯಾನರಿಸಂವರೆಗೂ ಸಂಪೂರ್ಣವಾಗಿ ಬದಲಾಯಿಸಲಾಗಿತ್ತು. ಪೊಲೀಸ್ ಗೆಟಪ್‌ನಲ್ಲಿ ಮೀಸೆ ಬಿಟ್ಟು ಚುಲ್‌ಬುಲ್ ಪಾಂಡೆ ಅವತಾರದಲ್ಲಿ ಥಿಯೇಟರ್‌ಗಳಿಗೆ ಎಂಟ್ರಿ ಕೊಟ್ಟಿದ್ದ ಸಲ್ಮಾನ್ ಖಾನ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದವು. ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದಿದ್ದು ಇದೇ ನಿರ್ದೇಶಕ ಅಭಿನವ್ ಕಶ್ಯಪ್.

ಅಭಿನವ್ ಕಶ್ಯಪ್ ಬಾಲಿವುಡ್‌ನ ಮತ್ತೊಬ್ಬ ವಿವಾದಾತ್ಮಕ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಹೋದರ. ಇವರು ಕಳೆದ ಕೆಲವು ದಿನಗಳಿಂದ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಈ ಸಂದರ್ಶನದಲ್ಲಿ ಸಲ್ಮಾನ್ ಖಾನ್ ವಿರುದ್ಧ ಹತ್ತು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ತಮ್ಮ ಮಗಳು ಹಾಗೂ ಸಹೋದರಿಯನ್ನು ರೇ*ಪ್ ಮಾಡುವುದಾಗಿ ಬೇದರಿಕೆ ಹಾಕಿದ್ದರೆಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಕಿತ್ತಾಟ-ಆರೋಪ? ಅನ್ನೋದನ್ನು ನೋಡುವುದಾರೇ.
ಅಭಿನವ್ ಕಶ್ಯಪ್ ಹಾಗೂ ಸಲ್ಮಾನ್ ಖಾನ್ ನಡುವೆ 'ದಬಾಂಗ್' ಸಿನಿಮಾದ ವೇಳೆನೇ ಬಿರುಕು ಬಿಟ್ಟಿತ್ತು. ಇನ್ನೇನು 'ದಬಾಂಗ್' ಸಿನಿಮಾ ಮುಗಿಯುತ್ತಿದೆ ಎನ್ನುವಾಗಲೇ ಅಭಿನವ್ ಕಶ್ಯಪ್ ಈ ಸಿನಿಮಾದಿಂದ ಹಾಗೂ ಸಲ್ಮಾನ್ ಖಾನ್‌ರಿಂದ ದೂರ ಉಳಿದಿದ್ದರು. ಅದಕ್ಕೆ ಕಾರಣವನ್ನು ಈಗ ಬಹಿರಂಗ ಪಡಿಸಿದ್ದಾರೆ. 'ದಬಾಂಗ್' ಸಿನಿಮಾ ವೇಳೆ ಸಲ್ಮಾನ್ ಖಾನ್ ಇವರನ್ನು ಮಾರ್ಕೇಟಿಂಗ್‌ನಿಂದ ದೂರ ಇಟ್ಟಿದ್ದರು. ಇದರಿಂದ ಬೇಸರಗೊಂಡು ಆ ಪ್ರಾಜೆಕ್ಟ್ ಕ್ರೆಡಿಟ್ ಕೂಡ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸಂದರ್ಶನಗಳಲ್ಲಿ ಅಭಿನವ್ ಕಶ್ಯಪ್ ನೇರವಾಗಿ ಸಲ್ಮಾನ್ ಖಾನ್‌ರನ್ನು ಎದುರಾಕಿಕೊಂಡಿದ್ದಾರೆ. ಒಂದು ಪಾಡ್‌ಕಾಸ್ಟ್‌ನಲ್ಲಂತೂ ಬಾಲಿವುಡ್ ಸೂಪರ್‌ಸ್ಟಾರ್ ಅನ್ನು 'ಗೂಂಡ' ಎಂದು ಕರೆದಿದ್ದಾರೆ. ಹಾಗೇ ಮತ್ತೊಂದು ಸಂದರ್ಶನದಲ್ಲಿ ಅಭಿನವ್ ಕಶ್ಯಪ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅದೀಗ ಬಾಲಿವುಡ್ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.
ಸಲ್ಮಾನ್ ಖಾನ್ ತನ್ನ ಸಹೋದರಿ ಹಾಗೂ ಮಗಳ ಮೇಲೆ ರೇ*ಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಭಿನವ್ ಕಶ್ಯಪ್ ಆರೋಪಿಸಿದ್ದಾರೆ. ಈ ಆರೋಪ ಇಡೀ ಉದ್ಯಮವನ್ನೇ ನಡುಗಿಸಿದೆ. ಇಂತಹ ಗಂಭೀರ ಆರೋಪ ಇದೂವರೆಗೂ ಸಲ್ಮಾನ್ ಖಾನ್ ಮೇಲೆ ಯಾರೂ ಮಾಡಿರಲಿಲ್ಲ. ಒಂದ್ಕಡೆ ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್‌ಗೀಗ ಈ ಆರೋಪ ಹೊಸ ತಲೆ ನೋವಾಗಿ ಪರಿಣಮಿಸಿದೆ.

ಇಷ್ಟೇ ಅಲ್ಲದೆ, "ನಾನು ಸಲ್ಮಾನ್ ಖಾನ್ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಪಟ್ಟಿದ್ದು, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 2017ರಲ್ಲಿ ನನಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಅದರಲ್ಲಿ ನನ್ನ ತಾಯಿ ಹಾಗೂ ಸಹೋದರಿಯ ಮೇಲೂ ಅತ್ಯಾಚಾರ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು" ಎಂದು ಅಭಿನವ್ ಕಶ್ಯಪ್ ಹೇಳಿಕೊಂಡಿದ್ದಾರೆ. ಹಾಗೇ ಈ ಬೆದರಿಕೆಗಳಿಗೆ "ನಿನ್ನ ಪೂರ್ವಜರ ಬಳಿ ನಿನ್ನನ್ನು ಕಳಿಸುತ್ತೇನೆ" ಎಂದು ತಿರುಗೇಟು ಕೊಟ್ಟಿದ್ದೆ ಎಂದೂ ಹೇಳಿಕೊಂಡಿದ್ದಾರೆ.
ಈ ಬೆದರಿಕೆಗಳ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದು, ಅದನ್ನು ಅವರ ಮುಚ್ಚಿ ಹಾಕಿದರೆಂದು ದೂರಿದ್ದಾರೆ. ಆದರೆ, ಈ ಆರೋಪಗಳಿಗೆ ನೆಟ್ಟಿಗರು ಅಭಿನವ್ ಕಶ್ಯಪ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. "ನೀನು ಹುಚ್ಚನಾಗಿರಬೇಕು. ಬೇಗನೇ ಗುಣಮುಖನಾಗು" ಎಂದು ಹೇಳಿದ್ದಾರೆ. ಮತ್ತೊಬ್ಬರು " ಇಷ್ಟು ದಿನ ಎಲ್ಲಿ ಇದ್ಯಪ್ಪ?" ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











