ಬಾಲಿವುಡ್ ನಲ್ಲಿ ಸೆಟ್ಟೇರಲಿದೆ 'ಸುಭಾಷ್ ಚಂದ್ರ ಬೋಸ್' ಸಿನಿಮಾ

By Suneel

'ಭಜರಂಗಿ ಭಾಯ್ ಜಾನ್' ನಂತರ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಟ್ಯೂಬ್ ಲೈಟ್' ಚಿತ್ರ ಬಿಡುಗಡೆಗೂ ಮುನ್ನ ವಿತರಣೆ ಹಕ್ಕು ಮಾರಾಟದಲ್ಲಿ ದಾಖಲೆ ಬರೆದಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ಕಬೀರ್ ಖಾನ್ ತಮ್ಮ ಮಂದಿನ ಪ್ರಾಜೆಕ್ಟ್ ಬಗ್ಗೆ ಬಹಿರಂಗಪಡಿಸಿದ್ದಾರೆ.[ಬಂತು ಬಂತು ಸಲ್ಲುಮೀಯಾ 'ಟ್ಯೂಬ್ ಲೈಟ್' ಫಸ್ಟ್ ಲುಕ್ ಬಂತು...]

'ಟ್ಯೂಬ್ ಲೈಟ್' ನಂತರ ಕಬೀರ್ ಖಾನ್ ಈ ಹಿಂದೆ ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕರು, ಈಗಾಗಲೇ ನಟ-ನಟಿಯೊಂದಿಗೆ ಮಾತುಕತೆ ನಡೆಸಿದ್ದು ಸದ್ಯದಲ್ಲಿ ಈ ಚಿತ್ರ ಬೇಡ ಎಂದಿದ್ದಾರಂತೆ. ಕಬೀರ್ ಆಕ್ಷನ್ ಕಟ್ ಹೇಳಲಿರುವ 'ಸುಭಾಷ್ ಚಂದ್ರ ಬೋಸ್' ರವರ ಜೀವನ ಆಧರಿತ ಚಿತ್ರದ ಬಗೆಗಿನ ಮಾಹಿತಿ ಇಲ್ಲಿದೆ...

'ಸುಭಾಷ್ ಚಂದ್ರ ಬೋಸ್' ಜೀವನ ಆಧರಿತ ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನ

'ಸುಭಾಷ್ ಚಂದ್ರ ಬೋಸ್' ಜೀವನ ಆಧರಿತ ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನ

ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ನಂತರ ಕಬೀರ್ ಖಾನ್ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಾದ 'ಸುಭಾಷ್ ಚಂದ್ರ ಬೋಸ್' ಜೀವನ ಆಧರಿತ ಚಿತ್ರ ನಿರ್ದೇಶನ ಮಾಡಲು ಅಣಿಯಾಗಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರವನ್ನು ಕಬೀರ್ ಖಾನ್ 8 ಭಾಗಗಳಲ್ಲಿ ಮಿನಿ ಸರಣಿಗಳಾಗಿ ನಿರ್ಮಿಸಲು ನಿರ್ಧರಿಸಿದ್ದಾರಂತೆ.

ಚಿತ್ರದ ಟೈಟಲ್ ಏನು?

ಚಿತ್ರದ ಟೈಟಲ್ ಏನು?

ಅಂದಹಾಗೆ ಕಬೀರ್ ಖಾನ್ ನಿರ್ದೇಶನ ಮಾಡಲಿರುವ ನೇತಾಜಿ ಅವರ ಜೀವನ ಆಧರಿತ ಮತ್ತು ಮಿಲಿಟರಿಗೆ ಸಂಬಂಧಿಸಿದ ಸಿನಿಮಾಗೆ 'ದಿ ಫರ್ಗಾಟೆನ್ ಆರ್ಮಿ' ಎಂದು ಟೈಟಲ್ ಸಹ ನೀಡಲಾಗಿದೆ.

ನೇತಾಜಿ ಆರ್ಮಿ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದ ಕಬೀರ್ ಖಾನ್

ನೇತಾಜಿ ಆರ್ಮಿ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದ ಕಬೀರ್ ಖಾನ್

ಕಬೀರ್ ಖಾನ್ ನೇತಾಜಿ ಬಗ್ಗೆ ಸಿನಿಮಾ ಮಾಡುತ್ತಿರುವುದು ಇದೇ ಮೊದಲೇನಲ್ಲ. ಯಾಕಂದ್ರೆ ಈ ಹಿಂದೆ 1999 ರಲ್ಲಿ ಸುಭಾಷ್ ಚಂದ್ರ ಬೋಸ್ ರವರ 'ಇಂಡಿಯನ್ ನ್ಯಾಷನಲ್ ಆರ್ಮಿ' ಕುರಿತ ಸಾಕ್ಷ್ಯಚಿತ್ರವನ್ನು 'ದಿ ಫರ್ಗಾಟೆನ್ ಆರ್ಮಿ' ಟೈಟಲ್ ನಲ್ಲೇ ನಿರ್ಮಾಣ ಮಾಡಿದ್ದರು.

ಸಾಕ್ಷ್ಯಚಿತ್ರದಿಂದ ಫೀಚರ್ ಫಿಲ್ಮ್ ಗೆ ಬದಲಾವಣೆ

ಸಾಕ್ಷ್ಯಚಿತ್ರದಿಂದ ಫೀಚರ್ ಫಿಲ್ಮ್ ಗೆ ಬದಲಾವಣೆ

ಭವಿಷ್ಯದಲ್ಲಿ ಪ್ರಪಂಚದ ಸಿನಿಮಾ ಇಂಟರ್ನೆಟ್ ಸ್ಟ್ರೀಮಿಂಗ್ ಆಧರಿಸಲಿದೆ ಎಂದು ಅಭಿಪ್ರಾಯ ಪಟ್ಟಿರುವ ಕಬೀರ್ ಖಾನ್ 'ದಿ ಫರ್ಗಾಟನ್ ಆರ್ಮಿ' ಸಾಕ್ಷ್ಯಚಿತ್ರವನ್ನು ಫೀಚರ್ ಫಿಲ್ಮ್ ಆಗಿ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಇತರೆ ಚಿತ್ರಗಳಿಗಿಂತ 'ದಿ ಫರ್ಗಾಟೆನ್ ಆರ್ಮಿ' ಚಿತ್ರಕ್ಕೆ ಹೆಚ್ಚು ಮಾಹಿತಿ ಕಲೆಹಾಕಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ತಾರಾಬಳಗ

ಚಿತ್ರದ ತಾರಾಬಳಗ

ಚಿತ್ರದ ಪಾತ್ರಧಾರಿಗಳ ಬಗ್ಗೆ ಕಬೀರ್ ಖಾನ್ ಯಾವುದೇ ಮಾಹಿತಿ ನೀಡಿಲ್ಲ. ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ ಗೆ ಸಂಬಂಧಿಸಿದಂತೆ ಮೂಡಿರಬರಲಿರುವ ಚಿತ್ರಕ್ಕೆ ಹೆಚ್ಚಿನ ಸಂಖ್ಯೆಯ ಕಲಾವಿದರ ಅವಶ್ಯಕತೆಯಂತೂ ಕಂಡಿತ ಇದೆ.

More from Filmibeat

English summary
Kabir Khan who is adding finishing touches to his film Tubelight, is already gearing up for his next project. which is a series on Netaji Subhash Chandra Bose's army.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X