»   » ಬಂತು ಬಂತು ಸಲ್ಲುಮೀಯಾ 'ಟ್ಯೂಬ್ ಲೈಟ್' ಫಸ್ಟ್ ಲುಕ್ ಬಂತು...

ಬಂತು ಬಂತು ಸಲ್ಲುಮೀಯಾ 'ಟ್ಯೂಬ್ ಲೈಟ್' ಫಸ್ಟ್ ಲುಕ್ ಬಂತು...

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಚಿತ್ರ ಬಾಕ್ಸಾಫೀಸ್ ನಲ್ಲಿ ಕೋಟಿ-ಕೋಟಿ ಬಾಚಿಕೊಂಡ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಾದ ನಂತರ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಹೊಸ ಚಿತ್ರ 'ಟ್ಯೂಬ್ ಲೈಟ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಅಂದಹಾಗೆ ಇದೀಗ 'ಟ್ಯೂಬ್ ಲೈಟ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಭಾರಿ ಕುತೂಹಲ ಮೂಡಿಸುತ್ತಿದೆ. 'ಭಜರಂಗಿ ಬಾಯ್ ಜಾನ್' ನಂತರ ಮಗದೊಮ್ಮೆ ನಿರ್ದೇಶಕ ಕಬೀರ್ ಖಾನ್ ಅವರು ಸಲ್ಲುಮೀಯಾ ಅವರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಭಾರತದಲ್ಲಿ ಸುಲ್ತಾನ್ ಕಲೆಕ್ಷನ್ ಮಾಡಿದ ಒಟ್ಟು ಮೊತ್ತ ಇಷ್ಟು.!]

Salman Khan's Hindi Movie 'Tubelight' first look released

'ಟ್ಯೂಬ್ ಲೈಟ್' ಚಿತ್ರದ ಪೋಸ್ಟರ್ ನೋಡುತ್ತಿದ್ದರೆ, ಈ ಬಾರಿ ಸಲ್ಮಾನ್ ಖಾನ್ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಅನ್ನೋ ಸಣ್ಣ ಸುಳಿವು ಸಿಕ್ಕಿದೆ. 1962ರಲ್ಲಿ ನಡೆದ ಚೀನಾ ಮತ್ತು ಭಾರತ ಯುದ್ಧವನ್ನು ಕಥಾವಸ್ತುವಾಗಿ 'ಟ್ಯೂಬ್ ಲೈಟ್' ಚಿತ್ರದ ಮೂಲಕ ಕಬೀರ್ ಖಾನ್ ಅವರು ತೋರಿಸಲಿದ್ದಾರಂತೆ.

ನಿರ್ದೇಶಕ ಕಬೀರ್ ಖಾನ್ ಮತ್ತು ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಏಕ್ ಥಾ ಟೈಗರ್' ಮತ್ತು 'ಭಜರಂಗಿ ಭಾಯ್ ಜಾನ್' ಚಿತ್ರಗಳು ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿವೆ. ಆದ್ದರಿಂದ ಈ ಚಿತ್ರದ ಬಗ್ಗೆ ಕೂಡ ಸಲ್ಲು ಅಭಿಮಾನಿಗಳಿಗೆ ಸಾಮಾನ್ಯವಾಗಿ ಕೊಂಚ ಕುತೂಹಲ ಜಾಸ್ತಿ ಇದೆ.[ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

Salman Khan's Hindi Movie 'Tubelight' first look released

ಈ ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಚೀನಾ ಬೆಡಗಿ Zhu Zhu (ಜೂಹು ಜೂಹು) ಅವರು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ದೂರದ ಲಡಾಕ್ ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

'ಟ್ಯೂಬ್ ಲೈಟ್' ಚಿತ್ರದ ಫಸ್ಟ್ ಲುಕ್ಕನ್ನು ನಿರ್ದೇಶಕ ಕಬೀರ್ ಖಾನ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಇಲ್ಲಿದೆ ನೋಡಿ...

Happy Independence Day from the team of #tubelight #Ladakh

A photo posted by Kabir Khan (@kabirkhankk) on Aug 15, 2016 at 1:40am PDT

English summary
After creating history at the box office with 'Sultan,' Actor Salman Khan is back to work and is shooting for his next Kabir Khan's 'Tubelight' in the scenic locations of Leh and Ladakh. Kabir took to Instagram to share Salman's first look of 'Tubelight,' which shows him dressed as a rugged soldier.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada