STD ಬೂತ್‌ನಲ್ಲಿ ಕೆಲಸ ಮಾಡುವಾಗ 500 ರೂ. ಸಂಬಳ; ಶೋ ಆರಂಭಿಸಿದ ಮೇಲೆ ಗಳಿಸಿದ್ದೆಷ್ಟು ಕೋಟಿ?

'ದಿ ಕಪಿಲ್ ಶರ್ಮಾ ಶೋ' ಭಾರತದಾದ್ಯಂತ ಫೇಮಸ್ ಆಗಿತ್ತು. ವೀಕೆಂಡ್ ಬಂತು ಅಂದರೆ ಸಾಕು ಈ ಶೋ ನೋಡುವುದಕ್ಕೆ ಭಾರತದ ಉದ್ದಗಲಕ್ಕೂ ವೀಕ್ಷಕರು ಕಾದು ಕೂರುತ್ತಿದ್ದರು. ಕಳೆದ ಹಲವು ವರ್ಷಗಳಿಂದ 'ದಿ ಕಪಿಲ್ ಶರ್ಮಾ ಶೋ' ಬೇರೆ ಬೇರೆ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳಲ್ಲಿ ಪ್ರಸಾರ ಆಗಿದೆ. ಈಗ ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಮೂಲಕ ಮತ್ತೆ ವೀಕ್ಷಕರನ್ನು ನಗಿಸುವುದಕ್ಕೆ ಬರುತ್ತಿದ್ದಾರೆ.

ಕಪಿಲ್ ಶರ್ಮಾ ಆರಂಭದಲ್ಲಿ ಕಲರ್ಸ್‌ ಟಿವಿಯಲ್ಲಿ 'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಶೋ ನಡೆಸಿಕೊಡುತ್ತಿದ್ದರು. ಬಳಿಕ ಸೋನಿ ಟಿವಿನಲ್ಲಿ 'ದಿ ಕಪಿಲ್ ಶರ್ಮಾ ಶೋ' ಮೂಲಕ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದರು. ಈ ಶೋಗೆ ಭಾರತದಾದ್ಯಂತ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಕಳೆದ ವರ್ಷವಷ್ಟೇ ಈ ಶೋಗೆ ಸೋನಿ ಟಿವಿ ಅಂತ್ಯ ಹಾಡಿತ್ತು.

Do you know how much Kapil sharma earned from The Kapil Sharma Show

ಒಂದಿಷ್ಟು ಸಕ್ಸಸ್‌ಫುಲ್ ಜರ್ನಿ ಜೊತೆ ವಿವಾದಕ್ಕೂ ಸಿಕ್ಕಿಕೊಂಡಿದ್ದೂ ಇದೆ. ಆರಂಭದಲ್ಲಿ ಇದ್ದ ಕೆಲವರು ಕಪಿಲ್ ಶರ್ಮಾ ಶೋ ಬಿಟ್ಟು ಹೋಗಿದ್ದೂ ಇದೆ. ಆದರೆ, 2016 ರಿಂದ 2023ರವರೆಗೆ ಕಪಿಲ್ ಶರ್ಮಾ ಈ ಶೋನಿಂದ ದುಡಿದಿದ್ದು ಎಷ್ಟು ಗೊತ್ತೇ? ನೆಟ್‌ಫ್ಲಿಕ್ಸ್‌ನಲ್ಲಿ ಹೊಸದಾಗಿ ಶುರುವಾಗ್ತಿರೋ ಶೋಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಅದನ್ನೆಲ್ಲ ತಿಳಿಯಲು ಮುಂದೆ ಓದಿ..

ಕಪಿಲ್ ಶರ್ಮಾ ಕಾಮಿಡಿಯನ್ ಆಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನ ಟೆಲಿಫೋನ್ ಬೂತ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ 500 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇಲ್ಲಿಂದ ಕಪಿಲ್ ಶರ್ಮಾ ದುಡಿಯುವುದಕ್ಕೆ ಶುರು ಮಾಡಿದ್ದರು. ಅದ್ಯಾವಾಗ ಕಾಮಿಡಿ ಶೋ ನಡೆಸಿಕೊಡುವುದಕ್ಕೆ ಆರಂಭ ಮಾಡಿದರೋ ಅಂದಿನಿಂದ ಅವರ ಅದೃಷ್ಟವೇ ಬದಲಾಗಿತ್ತು. ಒಂದೊಂದು ಎಪಿಸೋಡ್‌ಗೆ ಲಕ್ಷ ಲೆಕ್ಕದಲ್ಲಿ ದುಡಿಯಲು ಆರಂಭಿಸಿದ್ದರು.

Do you know how much Kapil sharma earned from The Kapil Sharma Show

ಕಲರ್ಸ್ ಟಿವಿಯಿಂದ ಸೋನಿಗೆ ಕಪಿಲ್ ಶರ್ಮಾ ಶಿಫ್ಟ್ ಆದಲ್ಲಿಂದ ಕಪಿಲ್ ಶರ್ಮಾ ಗಳಿಸಿದ್ದು ಎಷ್ಟು ಅನ್ನೋದನ್ನು ಕೊಯ್‌ಮೊಯ್ ವೆಬ್‌ಸೈಟ್ ಹಂಚಿಕೊಂಡಿದೆ. ಸೋನಿಯಲ್ಲಿ ದಿ ಕಪಿಲ್ ಶರ್ಮಾ ಶೋ ಪ್ರಸಾರ ಆರಂಭ ಆದ ಕ್ಷಣದಿಂದ ಪ್ರತಿ ಎಪಿಸೋಡ್‌ಗೆ 35 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು. ಒಟ್ಟು 130 ಎಪಿಸೋಡ್‌ಗಳಿಗೆ ಸುಮಾರು 45.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ಅದೇ ಸೀಸನ್ 2ಗೆ 125 ಎಪಿಸೋಡ್‌ಗಳಿಗೆ 43.75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಎರಡು ಸೀಸನ್‌ಗಳಿಂದ ಒಟ್ಟು ಸುಮಾರು 89.25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಶೋ ಸಕ್ಸಸ್ ಕಂಡ ಬಳಿಕ ಮೂರನೇ ಸೀಸನ್‌ಗೆ ಕಪಿಲ್ ಶರ್ಮಾ ಶೇ.42ರಷ್ಟು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು ಎನ್ನಲಾಗಿದೆ. ಕಪಿಲ್ ಶರ್ಮಾ ಪ್ರತಿ ತಿಂಗಳು 5 ಕೋಟಿ ರೂಪಾಯಿ ದುಡಿಯುತ್ತಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಮೂಲಗಳ ಪ್ರಕಾರ, ಸೀಸನ್ 4ರಲ್ಲಿ ಕಪಿಲ್ ಶರ್ಮಾ 80 ಎಪಿಸೋಡ್‌ಗಳಿಗೆ 48 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ.

ಕಪಿಲ್ ಶರ್ಮಾ 2016 ರಿಂದ 2023ರವರೆಗೆ ತನ್ನ ಕಾಮಿಡಿ ಶೋಗಳಿಂದ ಸುಮಾರು 231 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈಗ ನೆಟ್‌ಫ್ಲಿಕ್ಸ್‌ನ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಆರಂಭ ಆಗುತ್ತಿದೆ. ಈ ಶೋಗಳಿಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋದು ಇನ್ನು ರಿವೀಲ್ ಆಗಬೇಕಿದೆ. ಸದ್ಯ ಈ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ.

More from Filmibeat

English summary
Kapil Sharma earnings from his comedy show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X