Ratan Tata|ಬಾಲಿವುಡ್ ನಟಿಯ ಪ್ರೀತಿಯಲ್ಲಿ ಬಿದ್ದಿದ್ರು ರತನ್ ಟಾಟಾ; ಮದುವೆ ಹಂತಕ್ಕೆ ಹೋಗಿದ್ದ ಪ್ರೀತಿ ಮುರಿದು ಬಿದ್ದಿದ್ದೇಕೆ?
ರತನ್ ಟಾಟಾ ಭಾರತ ದೇಶ ಕಂಡ ಅತ್ಯಂತ ಸರಳ, ಸಜ್ಜನಿಕೆ ಹಾಗೂ ಯಶಸ್ವಿ ಉದ್ಯಮಿ. ಇವರು ಕೇವಲ ಉದ್ಯಮದಲ್ಲಷ್ಟೇ ಯಶಸ್ಸು ಕಂಡಿಲ್ಲ. ಇಡೀ ಭಾರತದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಒಂದು ಕಡೆ ಉದ್ಯಮಿಯಾಗಿದ್ದರೆ, ಇನ್ನೊಂದು ಕಡೆ ಬಡವರ ಪರವಾಗಿ ಸಮಾಜ ಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು.
86 ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ರತನ್ ಟಾಟಾ ನಿನ್ನೆ (ಅಕ್ಟೋಬರ್ 9) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ರತನ್ ಟಾಟಾ ಉದ್ಯಮದಲ್ಲಿ ಯಶಸ್ಸು ಕಂಡಿದ್ದರೂ, ಪ್ರೀತಿ, ಮದುವೆ ವಿಚಾರದಲ್ಲಿ ಸಕ್ಸಸ್ ಸಿಗಲಿಲ್ಲ. ಎರಡೆರಡು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರೂ ರತನ್ ಟಾಟಾಗೆ ಅದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ. ತನ್ನ ಕೊನೆಯ ದಿನಗಳಲ್ಲಿ ರತನ್ ಟಾಟಾಗೆ ಒಂಟಿಯಾಗಿದ್ದೇನೆ ಅಂತಾನೂ ಅನಿಸಿತ್ತು. ಈ ವಿಷಯವನ್ನು ಹಿಂದೊಮ್ಮೆ ಹೇಳಿಕೊಂಡಿದ್ದರು. ಅಷ್ಟಕ್ಕೂ ರತನ್ ಟಾಟಾ ಮನಸ್ಸು ಕದ್ದಿದ್ದ ಆ ಬಾಲಿವುಡ್ ನಟಿ ಯಾರು? ಆ ಪ್ರೀತಿ ಯಾಕೆ ಯಶಸ್ಸು ಕಾಣಲಿಲ್ಲ. ತಿಳಿಯಲು ಮುಂದೆ ಓದಿ.
ಪೂರ್ಣ ಆಗದ ರತನ್ ಲವ್ ಸ್ಟೋರಿ
ರತನ್ ಟಾಟಾ ಯಶಸ್ವಿ ಉದ್ಯಮಿಯಾಗಿದ್ದರು. ಆರಂಭಿಸಿದ ಉದ್ಯಮವೆಲ್ಲ ಕೈ ಹಿಡಿದಿತ್ತು. ಒಂದರ ಹಿಂದೊಂದು ಉದ್ಯಮ, ಸಕ್ಸಸ್ ಎಲ್ಲವೂ ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಇಷ್ಟೊಂದು ಸಕ್ಸಸ್‌ಫುಲ್ ಉದ್ಯಮಿಯನ್ನು ಪ್ರೀತಿಸುವವರಿಗೇನು ಕಮ್ಮಿಯಿರಲಿಲ್ಲ. ಆ ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೂ ರತನ್ ಟಾಟಾ ಹೆಚ್ಚು ಕಷ್ಟ ಪಡಬೇಕಿರಲಿಲ್ಲ. ಆದರೆ, ಅದ್ಯಾಕೋ ಪ್ರೀತಿ, ಪ್ರೇಮ ಇವರ ಕೈ ಹಿಡಿಯಲಿಲ್ಲ.

ಹಾಗಂತ ರತನ್ ಟಾಟಾಗೆ ಮದುವೆ ಆಗಬೇಕು ಅನ್ನೋ ಆಸೆ ಇರಲಿಲ್ಲ ಅಂತಲ್ಲ. ವಿದೇಶದಲ್ಲಿ ಇರುವಾಗಲೇ ರತನ್ ಟಾಟಾಗೆ ಲವ್ ಆಗಿತ್ತು. ಲಾಸ್ ಏಂಜಲೀಸ್‌ನಲ್ಲಿ ವಿದ್ಯಾಬ್ಯಾಸ ಮಾಡುವಾಗಲೇ ರತನ್ ಟಾಟಾ ಪ್ರೀತಿ ಹುಟ್ಟಿತ್ತು. ಆಕೆಯನ್ನೇ ಮದುವೆ ಆಗುವುದಾಗಿ ನಿರ್ಧರಿಸಿದ್ದರು. ಆದರೆ, ಅಮೆರಿಕದ ಹುಡುಗಿ ಭಾರತದಲ್ಲಿ ನೆಲೆಸಲು ಹಿಂದೇಟು ಹಾಕಿದ್ದರು. ಈ ಕಾರಣಕ್ಕೆ ಮದುವೆವರೆಗೂ ಹೋಗಿದ್ದ ಪ್ರೀತಿ ಮುರಿದು ಬಿದ್ದಿತ್ತು ಎಂಬ ವರದಿಗಳಿವೆ.
ಬಾಲಿವುಡ್ ನಟಿ ಮೇಲೆ ಲವ್
70 ಹಾಗೂ 80ರ ದಶಕದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟಿಯ ಮೇಲೆ ರತನ್ ಟಾಟಾಗೆ ಕ್ರಶ್ ಆಗಿತ್ತು. ಆ ನಟಿ ಮತ್ಯಾರೂ ಅಲ್ಲಿ ಸಿಮಿ ಗರೆವಾಲ್. ಇದೇ ನಟಿ ಭಾರತದ ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಅವರ ಮನಸ್ಸು ಗೆದ್ದಿದ್ದರು. ಈ ಜೋಡಿ ಕೆಲವು ದಿನ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದರು ಅನ್ನೋ ಸುದ್ದಿನೂ ಇತ್ತು. ರತನ್ ಟಾಟಾ ಹಾಗೂ ಸಿಮಿ ಗರೆವಾಲ್ ಇಬ್ಬರೂ ಮದುವೆ ಹಂತಕ್ಕೂ ಬಂದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಈ ಪ್ರೀತಿ ಕೂಡ ಮುರಿದು ಬಿದ್ದಿತ್ತು. ರತನ್ ಟಾಟಾ ನಿಧನದ ಈ ಸಂದರ್ಭದಲ್ಲಿ ಸಿಮಿ ಗರೆವಾಲ್ ಗೆಳನಿಗೆ ವಿದಾಯ ಹೇಳಿದ್ದಾರೆ.
ರತನ್ ಟಾಟಾಗೆ ಲವ್ ಸ್ಟೋರಿ ಮತ್ತೊಂದು ಬ್ರೇಕ್ ಆಗಿತ್ತು. ಅವರ ಜೀವನದ ಉದ್ದಕ್ಕೂ ಸಂಗಾತಿಯನ್ನು ಹುಡುಕುತ್ತಲೇ ಇದ್ದರು. ಆದರೆ, ಅವರಿಗೆ ಪ್ರೇಯಸಿ ಸಿಗಲಿಲ್ಲ ಅನ್ನೋದು ಮಾತ್ರ ನಿಜ. ಹಿಂದೊಮ್ಮೆ ನನಗೆ ಹೆಂಡತಿ ಮಕ್ಕಳು ಇಲ್ಲ ಕಾರಣ ಕೆಲವೊಮ್ಮೆ ಒಂಟಿತನ ಕಾಡುತ್ತೆ. ನಾನು ಕೆಲಸ ಅಂತ ಮಗ್ನನಾಗಿದ್ದೆ. ಹಲವು ಬಾರಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದೆ. ಆದರೆ, ಅದೂ ಕೈ ಗೂಡಲಿಲ್ಲ" ಎಂದು ರತನ್ ಟಾಟಾ ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications











