ಅಬ್ಬಬ್ಬಾ ಪ್ರಿಯಾಂಕಾ ಚೋಪ್ರಾ ತೊಟ್ಟ ಅತ್ಯಂತ ದುಬಾರಿ ಬಟ್ಟೆ ಇದು: ಸರಳ ಉಡುಪಿಗೆ ಇಷ್ಟೊಂದಾ ಖರ್ಚು?

ಸಿನಿಮಾ ತಾರೆಯರು ಅಂದ್ಮೇಲೆ ಅವರ ಲುಕ್, ಸ್ಟೈಲ್ ಎಲ್ಲದರಲ್ಲೂ ವಿಶೇಷತೆ ಇರುತ್ತೆ. ವಿಶೇಷತೆಗಿಂತಲೂ ಹೆಚ್ಚಾಗಿ ಅವರು ಉಪಯೋಸುವ ವಸ್ತುಗಳ ಬೆಲೆಯ ಬಗ್ಗೆ ಅವರಿಗೆ ಹೆಚ್ಚು ಗಮನ ಇರುತ್ತದೆ. ಅದರಲ್ಲೂ ಫ್ಯಾಷನ್ ಲೋಕದಲ್ಲಿ ನಟಿ ಮಣಿಯರದ್ದೇ ಕಾರು ಬಾರು. ನಟಿ ಪ್ರಿಯಾಂಕಾ ಚೋಪ್ರಾ ಅತ್ಯಂತ ದುಬಾರಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದಾರೆ.

ಸಿನಿಮಾ ತಾರೆಯರು ತಮ್ಮ ಔಟ್‌ಫಿಟ್‌ಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಧಿಕ ಬೆಲೆಯ ಬಟ್ಟೆ ತೊಡುವುದು ಕೂಡ ಅವರಿಗೆ ಪ್ರತಿಷ್ಠೆಯ ವಿಚಾರ. ಹಾಗಾಗಿ ನಟಿಯರು ಆಗಾಗ ತಮ್ಮ ದುಬಾರಿ ಬಟ್ಟೆಗಳ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಅದರಲ್ಲಿ ಬಾಲಿವುಡ್, ಹಾಲಿವುಡ್‌ನಲ್ಲಿ ಬ್ಯುಸಿ ಇರುವ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು.

ನಟ ಹೃತಿಕ್ ರೋಷನ್, ಸಬಾ ಮದುವೆ ಸುದ್ದಿ: ರಹಸ್ಯ ಬಿಚ್ಚಿಟ್ಟ ಫ್ಯಾಮಿಲಿ ಫೋಟೊ!
ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಒಂದಷ್ಟು ದುಬಾರಿ ಬಟ್ಟೆಗಳು ಗಮನ ಸೆಳೆದಿವೆ. ಪ್ರಿಯಾಂಕ ಅವರ ಬಟ್ಟೆಗಳ ಬೆಲೆ ಕೇಳಿದ್ರೆ ಶಾಕ್ ಆಗದೆ ಇದರು. ಯಾಕೆಂದರೆ ಸರಳವಾಗಿ ಕಾಣುವ ಬಟ್ಟೆಗಳಿಗೂ ಕೂಡ ಲಕ್ಷ, ಲಕ್ಷ ಬೆಲೆ ಹೊಂದಿಗೆ. ಅದರಲ್ಲಿ ಅಚ್ಚರಿಗೊಳಿಸುವ ಕೆಲವು ಧಿರಿಸುಗಳು ಇಲ್ಲಿವೆ. ಮುಂದೆ ಓದಿ...

ಪ್ರಿಯಾಂಕಾ ಸರಳ ಮ್ಯಾಕ್ಸಿ ಡ್ರೆಸ್ ಬೆಲೆ 4 ಲಕ್ಷಕ್ಕೂ ಹೆಚ್ಚು!

ಪ್ರಿಯಾಂಕಾ ಸರಳ ಮ್ಯಾಕ್ಸಿ ಡ್ರೆಸ್ ಬೆಲೆ 4 ಲಕ್ಷಕ್ಕೂ ಹೆಚ್ಚು!

2021ರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಡೆದಾಗಿ ತೊಟ್ಟ ಅತಿ ದುಬಾರಿ ಬಗ್ಗೆ ಎಂದರೆ ಮ್ಯಾಕ್ಸೀ ಡೆಸ್. ಇದು ಸರಳವಾದ ಹಳದಿ ಬಣ್ಣದ ಮ್ಯಾಕ್ಸೀ ಡ್ರೆಸ್. ಗಾಢ ಹಳದಿ ಬಣ್ಣ ಈ ಉಡುಪಿನ ವೈಶಿಷ್ಟ್ಯ. ಈ ಉಡುಪನ್ನು ಐಷಾರಾಮಿ ಡಿಸೈನರ್ ಬ್ರ್ಯಾಂಡ್ ಆದ ಎಮಿಲಿಯೊ ಪುಸಿಯ ರೆಸಾರ್ಟ್ ವಿನ್ಯಾಸಗೊಳಿಸಿದ ಇದು 2021 ಕಲೆಕ್ಷನ್. ಇದರ ಬೆಲೆ ಸುಮಾರು 4 ಲಕ್ಷದ 45 ಸಾವಿರದ 120 ರೂ. ಆಗಿದೆ ಎಂದು ವರದಿ ಆಗಿದೆ.

1 ಲಕ್ಷಕ್ಕೂ ಅಧಿಕ ಬೆಲೆಯ ಬಟ್ಟೆ ತೊಟ್ಟ ಪಿಗ್ಗಿ!

1 ಲಕ್ಷಕ್ಕೂ ಅಧಿಕ ಬೆಲೆಯ ಬಟ್ಟೆ ತೊಟ್ಟ ಪಿಗ್ಗಿ!

ಇನ್ನು ನಟಿ ಪ್ರಿಯಾಂಕ ಕಳೆದ ವರ್ಷ ತಮ್ಮ ಪತಿಯ ಜೊತೆಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಆಗ ಹೆಚ್ಚಾಗಿ ಗಮನ ಸೆಳೆದಿದ್ದು, ಪ್ರಿಯಾಂಕ ಉಡುಪು. ನಟಿ ಪ್ರಿಯಾಂಕ ತೊಟ್ಟ ಕೋ ಆರ್ಡ್ ಡ್ರೆಸ್ ಗಮನ ಸೆಳೆದಿತ್ತು. ಕೋ ಆರ್ಡ್ ಎಂದರೆ ಶರ್ಟ್, ಪ್ಯಾಂಟ್, ಸ್ಕರ್ಟ್, ಬ್ಲೇಸರ್ ಒಂದೇ ರೀತಿಯ ಬಣ್ಣ, ಚಿತ್ರ ಹೊಂದಿರುತ್ತದೆ. ಸಿಂಪಲ್ ಆಗಿ ಕಾಣುವ ಈ ಬಟ್ಟೆಯ ಬೆಲೆ 1,20,400 ಲಕ್ಷ ರೂ. ಇದನ್ನು ಬಿಟ್ಟರೆ ಡಿಸೈನರ್ ಗ್ರೇಟಾ ಕಾನ್ಸ್ಟಂಟೈನ್ ಅವರ ಹಾಲ್ಟರ್-ನೆಕ್, ಎ-ಲೈನ್ ಡ್ರೆಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. 2021 ರ ಆಸ್ಕರ್‌ಗೆ ಇದೇ ಉಡುಪಿನಲ್ಲಿ ಪಿಗ್ಗಿ ಹಾಜರಾಗಿದ್ದರು. ಈ ಉಡುಪಿನ ಬೆಲೆ ಸುಮಾರು 1 ಲಕ್ಷದ 76 ಸಾವಿರದ 914 ರೂ.

ಔತಣ ಕೂಟಕ್ಕೂ ಲಕ್ಷ, ಲಕ್ಷ ಬೆಲೆಯ ಬಟ್ಟೆ!

ಔತಣ ಕೂಟಕ್ಕೂ ಲಕ್ಷ, ಲಕ್ಷ ಬೆಲೆಯ ಬಟ್ಟೆ!

ಇನ್ನು ನಟಿ ಪ್ರಿಯಾಂಕಾ ಕೇವಲ ಕಾರ್ಯಕ್ರಮಗಳಿಗೆ ಮಾತ್ರ ಅಲ್ಲ, ಔತಣ ಕೂಟಗಳಿಗೂ ಕೂಡ ಲಕ್ಷ, ಲಕ್ಷ ಬೆಲೆಯುಳ್ಳ ಬಟ್ಟೆಗಳನ್ನು ಧರಿಸುತ್ತಾರೆ. ಆಕೆಯ ಸರಳ ಲುಕ್‌ನ ಶರ್ಟ್, ಪ್ಯಾಂಟ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ. ಪಟ್ಟೆಯುಳ್ಳ ನೀಲಿ ಬಣ್ಣದ ಈ ಶರ್ಟ್ ಬೆಲೆ 88,700 ರೂ. ಮತ್ತು ಗಾಢವಾದ ಹಳದಿ ಬಣ್ಣದ ಅಗಲವಾದ ರೆಟ್ರೋ ಮಾದರಿ ಪ್ಯಾಂಟ್ ಬೆಲೆ ₹90,326. ಆಕೆಯ ಸಂಪೂರ್ಣ ಈ ಉಡುಪಿನ ಬೆಲೆ 1ಲಕ್ಷದ 79 ಸಾವಿರದ 26 ರೂ ಅಂತೆ. ತನ್ನ ಆಪ್ತ ಗೆಳತಿ ಸೋನಾ ಆಯೋಜಿಸಿದ್ದ ಔತಣ ಕೂಟಕ್ಕೆ ಪ್ರಿಯಾಂಕಾ ಅವರು ಈ ಬಟ್ಟೆ ಧರಿಸಿದ್ದರು.

42 ಲಕ್ಷ ಬೆಲೆಯ ಸೀರೆಯುಟ್ಟ ಪ್ರಿಯಾಂಕಾ!

42 ಲಕ್ಷ ಬೆಲೆಯ ಸೀರೆಯುಟ್ಟ ಪ್ರಿಯಾಂಕಾ!

ಕೆಲವ ಮಾಡ್ರನ್, ವೆಸ್ಟರ್ನ್ ಬಟ್ಟೆಗಳು ಮಾತ್ರ ಅಲ್ಲ. ಪ್ರಿಯಾಂಕಾ ಉಡುವ ಸೀರೆಗಳು ಕೂಡ ಲಕ್ಷ, ಲಕ್ಷ ಬೆಲೆ ಹೊಂದಿವೆ. ನೀಲಿ ಬಣ್ಣದ ಬನಾರಸ್ ಸೀರೆ ಇದು. ಈ ಸೀರೆಯ ಬೆಲೆ 42 ಲಕ್ಷ ರೂ. ಎನ್ನಲಾಗಿದೆ. ಇನ್ನು ಪ್ರಿಯಾಂಕಾ ಫೋಟೋ ಶೂಟ್‌ಗಾಗಿ ತೊಡುವ ಬಟ್ಟೆಗಳು ಕೂಡ ದುಬಾರಿ ಬೆಲೆಯುಳ್ಳವು. ಫ್ಯಾಷನ್ ಮ್ಯಾಗಜೀನ್ ವೋಗ್‌ನ ಕವರ್ ಶೂಟ್‌ಗಾಗಿ, ಪ್ರಿಯಾಂಕಾ ಅವರು 6.74 ಲಕ್ಷ ರೂಪಾಯಿ ಮೌಲ್ಯದ ಅಪ್ಪು ಬಿಳುಪು ಬಣ್ಣದ ಡ್ರೆಸ್ ತೊಟ್ಟಿದ್ದರು. ಮತ್ತು 12.8 ಲಕ್ಷ ರೂಪಾಯ ಗುಲಾಬಿ ಬಣ್ಣದ ಉಲ್ಲನ್ ಗೌನ್ ಧರಿಸಿದ್ದರು. ಇವು ಪ್ರಿಯಾಂಕಾ ಚೋಪ್ರಾ 2021ರಲ್ಲಿ ತೊಟ್ಟ ಅತ್ಯಂತ ದುಬಾರಿ ಬೆಲೆಯ ಉಡುಪುಗಳು.

More from Filmibeat

English summary
Do You Know Priyanka Chopra's Costliest Dress, She Spent Lakhs For Simple Dress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X