For Quick Alerts
  ALLOW NOTIFICATIONS  
  For Daily Alerts

  ನಟ ಹೃತಿಕ್ ರೋಷನ್, ಸಬಾ ಮದುವೆ ಸುದ್ದಿ: ರಹಸ್ಯ ಬಿಚ್ಚಿಟ್ಟ ಫ್ಯಾಮಿಲಿ ಫೋಟೊ!

  |

  ಬಾಲಿವುಡ್​ನ ಮೋಸ್ಟ್​ ಹ್ಯಾಂಡ್​ಸಮ್​, ಗ್ರೀಕ್​ ಗಾಡ್ ಅಂತಲೇ ಕರೆಸಿಕೊಳ್ಳುವ​ ಹೃತಿಕ್​ ರೋಷನ್ ​ ಬಗ್ಗೆ ಇದೀಗ ಹೆಚ್ಚಾಗಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಮತ್ಯಾರು ಅಲ್ಲ, ಹೃತಿಕ್ ರೋಷನ್ ಹೊಸ ಗರ್ಲ್‌ಫ್ರೆಂಡ್. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇಬ್ಬರೂ ಸುತ್ತಾಡುತ್ತಾ ಇರುವುದು ಬಹಿರಂಗ ಆಗಿದೆ.

  ಇದು ಕೇವಲ ಗಾಸಿಪ್ ಎಂದು ಸುದ್ದಿ ಆಗುತ್ತಿತ್ತು. ಅದರೆ ಹೃತಿಕ್ ರೋಷನ್ ತನ್ನ ಹೊಸ ಹುಡುಗಿ ಜೊತೆ ನೇರವಾಗಿ ಕ್ಯಾಮೆರಾ ಕಣ್ಣಿಗೆ ಹಲವು ಬಾರಿ ಬಿದ್ದು ಬಿಟ್ಟಿದ್ದಾರೆ. ಹಾಗಾಗಿ ಇವರು ಪ್ರೀತಿಯಲ್ಲಿ ಇರೋ ವಿಷ್ಯ ಕೇವಲ ಗಾಳಿ ಸುದ್ದಿ ಆಗಿ ಮಾತ್ರ ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

  ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಹೃತಿಕ್ ರೋಷನ್: ಹೊಸ ಗರ್ಲ್‌ಫ್ರೆಂಡ್ ಹಿನ್ನೆಲೆಯೇನು?
  ಇದೆ ಬೆನ್ನಲ್ಲೇ ಈಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಲಿದೆ. ಹೃತಿಕ್ ರೋಷನ್ ತೆರೆಮರೆಯಲ್ಲಿ ಎರಡನೆ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸಬಾ ಆಜಾದ್ ಹೃತಿಕ್ ಕುಟುಂಬದ ಜೊತೆಗೆ ಕಾಣಿಸಿಕೊಂಡಿರುವುದು.

  ಹೃತಿಕ್ ರೋಷನ್ ಪತ್ನಿಯ ಹೊಸ ಬಾಯ್‌ಫ್ರೆಂಡ್: ಏನಿದು ಕತೆ? ಹೃತಿಕ್ ರೋಷನ್ ಪತ್ನಿಯ ಹೊಸ ಬಾಯ್‌ಫ್ರೆಂಡ್: ಏನಿದು ಕತೆ?

  ಬಾಲಿವುಡ್‌ನಲ್ಲಿ ಜೋರಾಯ್ತು ಹೃತಿಕ್ ರೋಷನ್, ಸಬಾ ಮದುವೆ ಸುದ್ದಿ!

  ಬಾಲಿವುಡ್‌ನಲ್ಲಿ ಜೋರಾಯ್ತು ಹೃತಿಕ್ ರೋಷನ್, ಸಬಾ ಮದುವೆ ಸುದ್ದಿ!

  ಈಗ ಹೃತಿಕ್ ರೋಷನ್ ಜೊತೆ ಸಬಾ ಆಜಾದ್ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಮಾತು ಹೇಳಿ ಬರುತ್ತಿದೆ. ಅಲ್ಲದೆ ಇವರು ಡೇಟಿಂಗ್ ಮಾಡುತ್ತಿರುವ ವಿಚಾರ ಕೂಡ ಬಹಿರಂಗ ಆಗಿದೆ. ಹಾಗಂತಾ ಸಬಾ ಹೃತಿಕ್ ಕುಟುಂಬದಿಂದ ದೂರ ಏನು ಇಲ್ಲಾ. ಸದಾ ಹೃತಿಕ್ ಕುಟುಂಬದೊಂದಿಗೆ ತುಂಬಾನೆ ಆಪ್ತವಾಗಿ ಇದ್ದಾರೆ. ಹಾಗಾಗಿ ಹೃತಿಕ್, ಸಬಾ ಪ್ರೀತಿ, ಪ್ರೇಮದ ವಿಚಾರ ಹೃತಿಕ್ ಮನೆಯಲ್ಲೂ ಗೊತ್ತಿದೆ. ಹಾಗಾಗಿ ಈ ಜೋಡಿ ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ.

  ಹೃತಿಕ್ ಕುಟುಂಬದೊಂದಿಗೆ ಸಮಯ ಕಳೆದ ಸಬಾ!

  ಇನ್ನು ಸಬಾ ಕೇವಲ ಹೃತಿಕ್ ಜೊತೆಗೆ ಡೇಟಿಂಗ್ ಸಮಯದಲ್ಲಿ ಸಿಕ್ಕಿ ಬಿದ್ದು, ಸುದ್ದಿಯಾಗಿದ್ದು ಮಾತ್ರ ಅಲ್ಲ. ಈಗ ಸಬಾ ಹೃತಿಕ್ ಕುಟುಂಬದ ಜೊತೆಗೆ ಕಾಲಕಳೆದಿದ್ದಾರೆ. ಭಾನುವಾರವನ್ನು ಹೃತಿಕ್ ಕುಟುಂಬದೊಂದಿಗೆ ಕಳೆದ ಸಬಾ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಸಬಾ ಹೃತಿಕ್ ಕುಟುಂಬಕ್ಕೂ ಹತ್ತಿರ ಆಗಿದ್ದಾರೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ. ಸಬಾ ಹೃತಿಕ್ ಕುಟುಂಬದೊಂದಿಗಿನ ಫೋಟೊ ಹಂಚಿಕೊಂಡ ಹೃತಿಕ್ ಚಿಕ್ಕಪ್ಪ ರಾಜೇಶ್ ರೋಷನ್ "ಸಂತಸ ಸದಾ ಜೊತೆಗಿದೆ, ವಿಶೇಷವಾಗಿ ಭಾನುವಾರದ ಊಟದ ಸಮಯ." ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಸಿದ ಸಬಾ 'ಅತ್ಯುತ್ತಮವಾದ ಭಾನುವಾರ' ಎಂದು ಕಮೆಂಟ್ ಮಾಡಿದ್ದಾರೆ.

  ಸಬಾ ಜೊತೆ ಎರಡನೇ ಮದುವೆ ಆಗ್ತಾರ ಹೃತಿಕ್ ರೋಷನ್!

  ಸಬಾ ಜೊತೆ ಎರಡನೇ ಮದುವೆ ಆಗ್ತಾರ ಹೃತಿಕ್ ರೋಷನ್!

  ನಟ ಹೃತಿಕ್ ರೋಷನ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿವೆ. ಈಗ ಹೃತಿಕ್ ಹೆಸರು ಸಬಾ ಜೊತೆಗೆ ಕೇಳಿ ಬರುತ್ತಿದೆ. ಅತ್ತ ಸಬಾ ಕೂಡ ಹೃತಿಕ್ ಕುಟುಂಬಕ್ಕೆ ಹತ್ತಿರ ಆಗಿದ್ದಾರೆ. ಅಲ್ಲದೇ ಹೃತಿಕ್ ಕುಟುಂಬದ ಹಿರಿಯರೇ ಸಬಾ ಜೊತೆಗೆ ಫೋಟೊ ಹಂಚಿಕೊಂಡಿದ್ದಾರೆ. ಹಾಗಾಗಿ ತೆರೆಮರೆಯಲ್ಲಿ ಹೃತಿಕ್ ರೋಷನ್ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ. ಜೊತೆಗೆ ಈ ಜೋಡಿ ಸದ್ಯದ ಯಾವ ಗಾಸಿಪ್‌ಗಳಿಗೂ ಬ್ರೇಕ್ ಹಾಕುವ ಪ್ರಯತ್ನ ಮಾಡಿಲ್ಲ. ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇವರು ಮದುವೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  ಡಿನ್ನರ್ ಡೇಟ್‌ ವೇಳೆ ಕ್ಯಾಮೆರಾ ಕಣ್ಣುಗೆ ಬಿದ್ದಿದ ಜೋಡಿ!

  ಡಿನ್ನರ್ ಡೇಟ್‌ ವೇಳೆ ಕ್ಯಾಮೆರಾ ಕಣ್ಣುಗೆ ಬಿದ್ದಿದ ಜೋಡಿ!

  ಸಬಾ ಹಾಗೂ ಹೃತಿಕ್ ಡೇಟಿಂಗ್ ಗಾಸಿಪ್‌ಗೆ ಜೀವ ಬಂದಿದ್ದು, ಅವರ ಡಿನ್ನರ್ ಡೇಟಿಂಗ್ ವೇಳೆ ಕ್ಯಾಮೆರಾಗಳ ಕಣ್ಣಿಗೆ ಬಿದ್ದಾಗ. ಒಮ್ಮೆ ಹೃತಿಕ್ ರೋಷನ್ ಮುಂಬೈನ ಬಾಂದ್ರಾದ ಜಪಾನೀಸ್ ರೆಸ್ಟೋರೆಂಟ್‌ನಿಂದ ರಂಗಭೂಮಿ ನಟಿ ಸಬಾ ಆಜಾದ್ ಅವರೊಂದಿಗೆ ಹೊಟೇಲ್‌ನಿಂದ ಹೊರಬಂದಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಹಬ್ಬಿದೆ. ಮತ್ತೊಮ್ಮೆ ಮುಂಬೈನ ಕೆಫೆಯೊಂದಕ್ಕೆ ಭೇಟಿ ನೀಡಿದ್ದರು. ಆಗಲೂ ಅವರ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದರು.

  English summary
  Hrithik Roshan And Saba Azad Preparing For Marriage, Saba Azad Spending Time With Hrithik Family
  Monday, February 21, 2022, 17:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X