ಈ ಬಾಲಿವುಡ್ ನಟಿಯ ಪತಿಯ ಒಟ್ಟು ಆಸ್ತಿ 53 ಸಾವಿರ ಕೋಟಿ; ಯಾರೀ ನಟಿ? ಈಗ ಸುದ್ದಿಯಾಗ್ತಿರೋದೇಕೆ?

ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಹೀರಾಮಂಡಿ' ವೆಬ್ ಸೀರಿಸ್ ಚರ್ಚೆಯಲ್ಲಿದೆ. ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ. ಪಕ್ಕದ ಪಾಕಿಸ್ತಾನದಲ್ಲೂ 'ಹೀರಾಮಂಡಿ' ವೆಬ್ ಸೀರಿಸ್ ಸಂಚಲನ ಸೃಷ್ಟಿಸಿದೆ. ಯಾಕಂದ್ರೆ, ಈ ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲೇ ಇದ್ದ ಈಗ ಪಾಕಿಸ್ತಾನದಲ್ಲಿರುವ ಲಾಹೋರ್‌ನ ಕಥೆ.

ಅಸಲಿಗೆ ವೆಬ್‌ ಸೀರಿಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆಸ ವ್ಯಕ್ತವಾಗಿದ್ದರೂ, ಕೆಲವು ನಟಿಯರು ಗಮನ ಸೆಳೆದಿದ್ದಾರೆ. ಬಾಲಿವುಡ್‌ನ ನಟಿಯರ ದೊಡ್ಡ ಗುಂಪು ಈ ವೆಬ್ ಸೀರಿಸ್‌ನಲ್ಲಿ ನಟಿಸಿದೆ. ಮನಿಷಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ ಹೀಗೆ ಹೆಸರುಗಳ ಪಟ್ಟಿ ದೊಡ್ಡದಿದೆ. ಆದರೆ, ದಕ್ಷಿಣ ಭಾರತದವರಿಗೆ ಚಿರಪರಿಚಿತವಲ್ಲದ ನಟಿಯೊಬ್ಬರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Do you know this Heeramandi web series actress husband s family net worth is 53 thousand crore rupees

ಹಾಗಂತ ಈ ನಟಿಯನ್ನು ಅಷ್ಟು ಸುಲಭಕ್ಕೆ ತಿರಸ್ಕಾರ ಮಾಡುವಂತಿಲ್ಲ. 'ಹೀರಾಮಂಡಿ'ಯಲ್ಲಿ ಈ ನಟಿಯ ಪಾತ್ರಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೂ, ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಆ ನಟಿಯೇ ಶರ್ಮಿನ್ ಸೆಗಲ್ ಮೆಹ್ತಾ. ಯಾಕಿಷ್ಟು ಚರ್ಚೆಯಲ್ಲಿದ್ದಾರೆ ಅಂದ್ರೆ, ಈ ನಟಿ ಈ ವೆಬ್‌ ಸೀರಿಸ್‌ನಲ್ಲಿ ನಟಿಸಿದ ಎಲ್ಲಾ ನಟಿಯರಿಗಿಂತಲೂ ಶ್ರೀಮಂತೆ.

ಶರ್ಮಿನ್ ಸೆಗಲ್ ಪತಿ ಭಾರತದ ಶ್ರೀಮಂತ ಉದ್ಯಮಿ. 31 ವರ್ಷದ ಈ ನಟಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಲಿಯನೆರ್ ಉದ್ಯಮಿ ಸಮೀರ್ ಮೆಹ್ತಾ ಪುತ್ರ ಅಮನ್ ಮೆಹ್ತಾರನ್ನು ವಿವಾಹವಾಗಿದ್ದರು. ಅಮನ್ ಮೆಹ್ತಾ ಭಾರತದ ಶ್ರೀಮಂತ ಸಂಸ್ಥೆ ಟೊರೆಂಟ್ ಗ್ರೂಪ್ ಅನ್ನು ಮುನ್ನೆಡೆಸುತ್ತಾರೆ. ಅಮನ್ ಮೆಹ್ತಾ ಅವರ ತಂದೆಯ ಒಟ್ಟು ಆಸ್ತಿಯ ಮೌಲ್ಯ 53,800 ಕೋಟಿ ರೂಪಾಯಿ.

ಶರ್ಮಿನ್ ಸೆಗಲ್ ಪತಿ ಅಮನ್ ಮಹ್ತಾ ಕಂಪನಿ ಔಷದಿ, ಪವರ್, ಗ್ಯಾಸ್ ಹಾಗೂ ಡಯಾಗ್ನೋಸ್ಟಿಕ್ ಇಂಡಸ್ಟ್ರಿಯನ್ನು ಮುನ್ನೆಡೆಸುತ್ತಿದ್ದಾರೆ. ಹೀಗಾಗಿ ಈ ಬಾಲಿವುಡ್ ನಟಿ ಶೆರ್ಮಿನ್ ಸೆಗಲ್ ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು. ಅಂದ್ಹಾಗೆ, ಈ ನಟಿ ಇದೇ 'ಹೀರಾಮಂಡಿ' ವೆಬ್ ಸೀರಿಸ್‌ನ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿಯ ಸಂಬಂಧಿ ಕೂಡ ಹೌದು.

Do you know this Heeramandi web series actress husband s family net worth is 53 thousand crore rupees

ಶರ್ಮಿನ್ ಸೆಹಲ್ ತಂದೆ ದೀಪಕ್ ಸೆಗಲ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಹಾಗೆ ತಾಯಿ ಬೆಲಾ ಸೆಗಲ್ ಸಿನಿಮಾದ ಎಡಿಟರ್ ಆಗಿದ್ದರು. ಈಗ ಅವರ ತಂದೆ ಭಾರತ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಅಪ್ಲೌಸ್ ಎಂಟರ್‌ಟೈನ್ಮೆಂಟ್‌ನ ಮುಖ್ಯಸ್ಥರು. ಈ ನಟಿಯ ತಾಯಿ ಬೆಲಾ ಸೆಗಲ್, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ, 'ಕಾಮೋಶಿ', 'ದೇವದಾಸ್', 'ಬ್ಲ್ಯಾಕ್' ಅಂತಹ ಸಿನಿಮಾಗಳಿಗೆ ಎಡಿಟರ್ ಕೆಲಸ ಮಾಡಿದ್ದಾರೆ.

ಶರ್ಮಿನ್ ಸೆಗಲ್ 18 ವರ್ಷಕ್ಕೆ ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದ 'ಗೋಲಿಯೋಂಕಿ ರಾಸ್‌ಲೀಲಾ ರಾಮ್- ಲೀಲಾ' ಸಿನಿಮಾದಲ್ಲಿ ಸಹಾಯಕಳಾಗಿ ಕೆಲಸ ಮಾಡಿದ್ದರು. ಹಾಗೇ 'ಮೆರಿ ಕೂಮ್', 'ಬಾಜಿರಾವ್ ಮಸ್ತಾನಿ', 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. 2019ರಲ್ಲಿ 'ಮಲಾಲ್' ಸಿನಿಮಾ ಮೂಲಕ ನಟನೆಗೆ ಇಳಿದಿದ್ದರು. 'ಹೀರಾಮಂಡಿ' ಶರ್ಮಿನ್ ಸೆಗಲ್ ನಟನೆಯ ಮೊದಲ ವೆಬ್ ಸೀರಿಸ್.

More from Filmibeat

English summary
Bollywood actess Sharmin Segal Mehta's husdand is billionaire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X