ಶಾರುಖ್ ಖಾನ್ ಪುತ್ರನ ಜೊತೆ ಬ್ರೆಜಿಲ್ ನಟಿ ಡೇಟಿಂಗ್? ಈ ಬ್ಯೂಟಿಯ ಹಿನ್ನೆಲೆಯೇನು?

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ಪ್ರಕರಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ. ದೇಶಾದ್ಯಂತ ಈ ಶಾರುಖ್ ಖಾನ್ ಪುತ್ರ ಸುದ್ದಿಯಾಗಿದ್ದರು. ಅಲ್ಲಿಂದ ಎಲ್ಲರ ಕಣ್ಣು ಶಾರುಖ್ ಖಾನ್ ಪುತ್ರನ ಮೇಲೆ ಇತ್ತು. ಡ್ರಗ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಬಳಿ ಆರ್ಯನ್ ಖಾನ್ ಆಗಾಗ ಪಾರ್ಟಿ, ಏರ್‌ಪೋರ್ಟ್ ಸೇರಿದಂತೆ ಹಲವೆಡೆ ಕಾಣಿಸಿಕೊಳ್ಳುತ್ತಿದ್ದ ಅಷ್ಟೇ.

ಅದು ಬಿಟ್ಟರೆ ಆರ್ಯನ್ ಖಾನ್ ಮಾಧ್ಯಮಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದು ತೀರಾ ವಿರಳ. ಆದ್ರೀಗ ಮತ್ತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದೇಶಾದ್ಯಂತ ಟ್ರೆಂಡಿಂಗ್‌ನಲ್ಲಿದ್ದಾರೆ. ಹಾಗಂತ ಮತ್ಯಾವ ಕೇಸ್‌ನಲ್ಲಿ ಸಿಕ್ಕಿಬಿದ್ದರು ಅಂತ ಭಾವಿಸಬೇಡಿ. ಈ ಬಾರಿ ಸುದ್ದಿಯಲ್ಲಿ ಇರೋದು ಗರ್ಲ್‌ಫ್ರೆಂಡ್ ವಿಷಯಕ್ಕೆ.

Do you know who is Shah Rukh Khan son Aryan Khan rumoured girlfriend Larissa Bonesi

ಹೌದು, ಆರ್ಯನ್ ಖಾನ್ ಬ್ರೆಜಿಲಿಯನ್ ಮಾಡಲ್ ಹಾಗೂ ನಟಿ ಲಾರಿಸ್ಸಾ ಬೊನೆಸಿ ಜೊತೆ ಕಾಣಿಸಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಆರ್ಯನ್ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾನೆ. ಹಾಗಿದ್ರೆ, ಆರ್ಯನ್ ಗರ್ಲ್‌ಫ್ರೆಂಡ್ ಎನ್ನಲಾಗುತ್ತಿರುವ ಆ ನಟಿ ಯಾರು? ಆಕೆಯ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ..

ಅಪ್ಪನಂತೆ ಸೂಪರ್‌ಸ್ಟಾರ್ ಆಗಬೇಕು ಅನ್ನೋ ಕನಸು ಆರ್ಯನ್‌ಗೆ ಇದ್ದಂತೆ ಇಲ್ಲ. ಈ ಹಿಂದೆನೇ ಕಿಂಗ್ ಖಾನ್ ಪುತ್ರ ಹೇಳಿಕೊಂಡಂತೆ ನಿರ್ದೇಶಕನಾಗುವ ಆಸೆ ವ್ಯಕ್ತಪಡಿಸಿದ್ದ. ಇದರೊಂದಿಗೆ ಉದ್ಯಮಿಯಾಗುವ ಮನಸ್ಸು ಕೂಡ ಮಾಡಿದ್ದ. ಈ ಎರಡೂ ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಆರ್ಯನ್ ಈಗಾಗಲೇ ಹೆಜ್ಜೆ ಇಟ್ಟಿದ್ದಾನೆ.

ಇತ್ತೀಚೆಗಷ್ಟೇ ಆರ್ಯನ್ ಖಾನ್ ಡಿ'ಯಾವೋಲ್ ಮತ್ತು ಡಿ'ಯಾವೋಲ್ ಎಕ್ಸ್ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾನೆ. ಈ ಮೂಲಕ ಆರ್ಯನ್ ಉದ್ಯಮಿಯಾಗಿ ಹೆಜ್ಜೆ ಇಟ್ಟಿದ್ದಾನೆ. ಇನ್ನೊಂದು ಕಡೆ ಫಿಲ್ಮ್‌ ಮೇಕರ್ ಆಗಿಯೂ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾನೆ. ಸದ್ಯದಲ್ಲೇ 'ಸ್ಟಾರ್‌ಡಮ್' ಅನ್ನುವ ವೆಬ್‌ ಸೀರಿಸ್ ಅನ್ನು ನಿರ್ದೇಶನ ಮಾಡುತ್ತಿದ್ದಾನೆ.

Do you know who is Shah Rukh Khan son Aryan Khan rumoured girlfriend Larissa Bonesi

ಇದೇ ವೇಳೆ ಆರ್ಯನ್ ಖಾನ್ ಜೊತೆ ಬ್ರೆಜಿಲಿಯನ್ ಮಾಡಲ್ ಕಮ್ ನಟಿ ಲಾರಿಸ್ಸಾ ಬೊನೆಸಿ ಹೆಸರು ತಗಲಾಕಿಕೊಂಡಿದೆ. ಈ ಹಿಂದೆ ಪಾರ್ಟಿಯೊಂದರಲ್ಲಿ ಲಾರಿಸ್ಸಾ ಬೊನೆಸಿ ಜೊತೆ ಆರ್ಯನ್ ಕಾಣಿಸಿಕೊಂಡಿದ್ದ. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿಬಿಟ್ಟಿದೆ. ಇಲ್ಲಿಂದ ಆರ್ಯನ್ ಗರ್ಲ್‌ಫ್ರೆಂಡ್ ಲಾರಿಸ್ಸಾ ಬೊನೆಸಿ ಅಂತ ಸುದ್ದಿ ಹಬ್ಬಿಬಿಟ್ಟಿದೆ. ಹೀಗಾಗಿ ಈ ಬ್ರೆಜಿಲಿಯನ್ ನಟಿ ಯಾರು ಅಂತ ಹುಡುಕುವುದಕ್ಕೆ ಶುರು ಮಾಡಿದ್ದಾರೆ.

ಮಾಡಲ್ ಕಮ್ ನಟಿ ಲಾರಿಸ್ಸಾ ಬೊನೆಸಿ 1990ಯಲ್ಲಿ ಬ್ರೆಜಿಲ್‌ನಲ್ಲಿ ಜನಿಸಿದ್ದಾರೆ. ಆರ್ಯನ್ ಖಾನ್ ಜೊತೆ ಕಾಣಿಸಿಕೊಳ್ಳುವುದಕ್ಕೂ ಮುನ್ನ ಲಾರಿಸ್ಸಾ ಬೊನೆಸಿ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೈಫ್ ಅಲಿಖಾನ್ ನಟಿಸಿದ 'ಗೋ ಗೋವಾ ಗಾನ್' ಸಿನಿಮಾದಲ್ಲಿ ನಟಿಸಿದ್ದರು. ಹಾಗೆಯೇ ಅಕ್ಷಯ್ ಕುಮಾರ್, ಜಾನ್ ಅಬ್ರಾಹಂ ನಟಿಸಿದ 'ದೇಸಿ ಬಾಯ್ಜ್' ಸಿನಿಮಾದಲ್ಲೂ ನಟಿಸಿದ್ದಾರೆ.

ಲಾರಿಸ್ಸಾ ಬೊನೆಸ್ಸಿ ಕೇವಲ ಮಾಡಲಿಂಗ್, ಸಿನಿಮಾದಲ್ಲಿ ಮಾಡಿದ್ದಷ್ಟೇ ಅಲ್ಲ, ವಿಡಿಯೋ ಅಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ಟೈಗರ್ ಶ್ರಾಫ್ ಹಾಗೂ ಸೂರಜ್ ಪಂಚೋಲಿಯ ಮ್ಯೂಸಿಕ್ ಅಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಲಾರಿಸ್ಸಾ ಬೊನೆಸ್ಸಿ ಅತ್ಯುತ್ತಮ ಡ್ಯಾನ್ಸರ್ ಹಾಗೂ ನಟಿ ಕೂಡ ಹೌದು. ಇದರೊಂದಿಗೆ ತೆಲುಗಿನ 'ನೆಕ್ಸ್ಟ್‌ ಅನ್ನಿ' , 'ಥಿಕ್ಕಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Who is Aryan Khan rumoured girlfriend Brazilian actress Larissa Bonesi?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X