ಯಶ್ ಅಲ್ಲ.. ಹೃತಿಕ್ ಅಲ್ಲ.. ಬಾಲಿವುಡ್‌ಗೆ ಹೊಸ ಡಾನ್ ಸಿಕ್ಕೇಬಿಟ್ಟ? ಶಾರುಖ್ ಫ್ಯಾನ್ಸ್ ಉರಿದುಕೊಂಡಿದ್ದೇಕೆ?
ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ಡಾನ್'. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮೊದಲ ಬಾರಿಗೆ ಡಾನ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಡಾನ್ ಲೆಗಸಿಯನ್ನು ಮುಂದುವರೆಸಿಕೊಂಡು ಹೋಗಿದ್ದು ಶಾರುಖ್ ಖಾನ್. ಆದ್ರೀಗ ಮೂರನೇ ಬಾರಿ ಯಾರು ಡಾನ್ ಆಗ್ತಾರೆ? ಅನ್ನೋದೇ ಪ್ರಶ್ನೆ.
ಬಾಲಿವುಡ್‌ನ ಇಬ್ಬರು ನಿರ್ಮಾಪಕರು 'ಡಾನ್ 3' ಸಿನಿಮಾ ಮಾಡಲೇಬೇಕು ಅಂತ ಹಠ ಹಿಡಿದು ಕೂತಿದ್ದಾರೆ. ಒಂದ್ವೇಳೆ 'ಡಾನ್ 2'ನಲ್ಲಿ ನಟಿಸಿದ್ದ ಶಾರುಖ್ ಖಾನ್ ಒಪ್ಪಿಕೊಂಡಿದ್ದರೆ, ಇಷ್ಟೊಂದು ಸದ್ದು ಆಗುತ್ತಿತ್ತೋ ಇಲ್ವೋ.. ಆದರೆ, ಶಾರುಖ್ ಖಾನ್ 'ಡಾನ್ 3' ನೋ ಎಂದಿದ್ದಾರೆ. ಹೀಗಾಗಿ ಕೆಲವು ದಿನಗಳಿಂದ ಚಿತ್ರತಂಡ ಹೊಸ ಡಾನ್ ಹುಡುಕಾಟದಲ್ಲಿತ್ತು.

ಈ ವೇಳೆ ಒಂದೆರಡು ಹೆಸರುಗಳು ಬಾಲಿವುಡ್‌ನಲ್ಲಿ ಹರಿದಾಡಿದ್ದವು. ಶಾರುಖ್ ಖಾನ್ ಬಳಿಕ ಹೃತಿಕ್ ರೋಷನ್ ಡಾನ್ ಆಗ್ತಾರೆ ಎನ್ನಲಾಗಿತ್ತು. ಆ ಬಳಿಕ ಯಶ್.. ಈಗ ರಣ್‌ವೀರ್ ಸಿಂಗ್ ಬಾಲಿವುಡ್‌ನ ಹೊಸ ಡಾನ್ ಎನ್ನಲಾಗುತ್ತಿದೆ.
ಬಾಲಿವುಡ್‌ನ ಹೊಸ ಡಾನ್ ಯಾರು?
ಇದೂವರೆಗೂ 'ಡಾನ್'ನ ಎರಡು ಸರಣಿಗಳು ಬಂದಿದೆ. 70 ದಶಕದಲ್ಲಿ ಅಮಿತಾಬ್ ಬಚ್ಚನ್ ಆಂಗ್ರಿ ಲುಕ್ ಕೊಟ್ಟು 'ಡಾನ್' ಎನಿಸಿಕೊಂಡಿದ್ದರು. ಈ ಐಕಾನಿಕ್ ಪಾತ್ರವನ್ನು ಯಾರು ಮುಂದುವರೆಸಿಕೊಂಡು ಹೋಗ್ತಾರೆ? ಅನ್ನೋ ಪ್ರಶ್ನೆ ಎದ್ದಾಗ, ಶಾರುಖ್ ಖಾನ್ ಹೆಸರು ಮುನ್ನಲೆ ಬಂದಿತ್ತು. ಆಗಲೂ ಕೆಲ ಸಿನಿಪ್ರಿಯರು ವಿರೋಧ ವ್ಯಕ್ತಪಡಿಸಿದ್ದರು.
ಈ ಬಾರಿ 'ಡಾನ್' ಅಪ್‌ಗ್ರೇಡ್ ಆಗಿದ್ದ. ಹಾಗಾಗಿ ಶಾರುಖ್ ಖಾನ್ ಬಾಲಿವುಡ್‌ನ ಹೊಸ 'ಡಾನ್' ಆಗಿ ಅಖಾಡಕ್ಕೆ ಇಳಿದಿದ್ದರು. ಒಲ್ಲದ ಮನಸ್ಸಿನಿಂದ 'ಡಾನ್ 2' ನೋಡಿದವರು ಮೆಚ್ಚುಕೊಂಡರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈಗ 'ಡಾನ್ 3' ಮಾಡಬೇಕು ಅಂತ ನಿರ್ಮಾಪಕರು ಓಡಾಡುತ್ತಿದ್ದಾರೆ. ಆದರೆ, ಶಾರುಖ್ ಖಾನ್ ನೋ ಎಂದಿದ್ದಾರಂತೆ. ಇದೇ ಕಾರಣಕ್ಕೆ ಮೂರನೇ 'ಡಾನ್' ಹುಡುಕಾಟದಲ್ಲಿದೆ ಚಿತ್ರತಂಡ.

ಯಶ್ ಅಲ್ಲ.. ರಣ್‌ವೀರ್ ಸಿಂಗ್
ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಯಶ್ ಬಾಲಿವುಡ್‌ನ ಹೊಸ 'ಡಾನ್' ಅನ್ನೋ ಸುದ್ದಿ ಹಬ್ಬಿತ್ತು. ಯಶ್ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದ ಕೆಜಿಎಫ್ ಸಿನಿಮಾಗಳನ್ನು ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ನಿರ್ಮಾಣ ಮಾಡಿದ್ದರು. ಹೀಗಾಗಿ ಈ ಬಾರಿ ಯಶ್ ಮೂಲಕ 'ಡಾನ್' ಅನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪರಿಚಯಿಸುತ್ತಿದ್ದಾರೆ ಎಂದೇ ಸುದ್ದಿಯಾಗಿತ್ತು.
ಆದ್ರೀಗ ಯಶ್ ಅಲ್ಲ. 'ಡಾನ್ 3'ನೇ ಸರಣಿಯಲ್ಲಿ ರಣ್‌ವೀರ್ ಸಿಂಗ್ ಅನ್ನು ಆಯ್ಕೆ ಮಾಡಲಾಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ. ಪಾತ್ರ ಬದಲಾವಣೆ ಮಾಡುತ್ತಿರುವುದನ್ನು ಈಗಾಗಲೇ ಶಾರುಖ್ ಖಾನ್‌ಗೆ ಮಾಹಿತಿ ನೀಡಿಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಹೀಗಾಗಿ ಬಹುತೇಕ 'ಡಾನ್' ಪಾತ್ರಕ್ಕೆ ರಣ್‌ವೀರ್ ಪಕ್ಕಾ ಅಂತಲೇ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ.
ಶಾರುಖ್ ಫ್ಯಾನ್ಸ್ ಅಸಮಧಾನ
'ಡಾನ್ 3'ನಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಶಾರುಖ್ ಖಾನ್ ಫ್ಯಾನ್ಸ್ ಗರಂ ಆಗಿದ್ದಾರೆ. ಒಬ್ಬರು " ಇದು ತುಂಬಾನೇ ಕೆಟ್ಟ ನಿರ್ಧಾರ" ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು "ಡಾನ್ 3 ಬಗ್ಗೆ 12 ವರ್ಷಗಳ ಕಾಲ ಕಾದಿದ್ದೆ. ಈ ನಿರ್ಧಾರದಿಂದ ನನಗೆ ಬೇಸರವಾಗಿದೆ. ನನಗೆ 'ಡಾನ್ 2' ಇಷ್ಟ. ಈ ನಿರ್ಧಾರದಿಂದ ನನಗೆ ನಿಜಕ್ಕೂ ಬೇಸರವಾಗಿದೆ" ಎಂದಿದ್ದಾರೆ.
ಮತ್ತೊಬ್ಬರು " ಡಾನ್ 3ನಲ್ಲಿ ರಣ್‌ವೀರ್ ಸಿಂಗ್ ಅನ್ನು ಹಾಕಿಕೊಳ್ಳುವುದಕ್ಕಿಂತ ಚೋಟಾ ಡಾನ್ ಆಯ್ಕೆ ಮಾಡಿ." ಎಂದು ಟ್ವೀಟ್ ಮಾಡಿದ್ದಾರೆ. ರಣ್‌ವೀರ್ ಸಿಂಗ್ ಸದ್ಯ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡಿದ್ದಾರೆ. ಹೀಗಾಗಿ ಬ್ಲಾಕ್ ಬಸ್ಟರ್ ಸಿನಿಮಾವೊಂದರ ಅಗತ್ಯವಿದೆ.


Click it and Unblock the Notifications











