ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ದೋಚಿದ 'ಚುಪ್' ಹಾಗೂ 'ಬ್ರಹ್ಮಾಸ್ತ್ರ': ಎಷ್ಟು ಕಲೆಕ್ಷನ್?

ಸೋತು ಸುಣ್ಣವಾಗಿದ್ದ ಬಾಲಿವುಡ್‌ಗೆ ಎರಡು ಸಿನಿಮಾಗಳು ಆಸರೆಯಾಗಿ ನಿಂತಿವೆ. ಮೂರು ವಾರಗಳ ಹಿಂದೆ ತೆರೆಕಂಡಿರೋ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ಇನ್ನೂ ತನ್ನ ಓಟವನ್ನು ಮುಂದುವರೆಸಿದೆ. ಇನ್ನೊಂದು ಕಡೆ ಹೊಸ ಸಿನಿಮಾ 'ಚುಪ್' ಕೂಡ ಮೋಡಿ ಮಾಡುತ್ತಿದೆ.

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಈ ಎರಡೂ ಸಿನಿಮಾಗಳಿಗೆ 'ನ್ಯಾಷನಲ್ ಸಿನಿಮಾ ಡೇ' ನೆರವಾಗಿದೆ. ಮಲ್ಟಿಪ್ಲೆಕ್ಸ್ ಹಮ್ಮಿಕೊಂಡಿದ್ದ ಈ ದಿನದಂದು ಸಿನಿಮಾ ಟಿಕೆಟ್ ದರವನ್ನು 75 ರೂಪಾಯಿಗೆ ಇಳಿಸಲಾಗಿತ್ತು. ಹೀಗಾಗಿ ವೀಕೆಂಡ್‌ನಲ್ಲಿ ಜನರು ಮುಗಿಬಿದ್ದು ಸಿನಿಮಾ ನೋಡಿ ಬಂದಿದ್ದಾರೆ.

ಫ್ಯಾಮಿಲಿ ಸಮೇತ ಸಿನಿಮಾ ನೋಡಿದ್ದರ ಪರಿಣಾಮ ಬಾಲಿವುಡ್‌ನ ಎರಡು ಸಿನಿಮಾಗಳಿಗೆ ಲಾಭ ಆಗಿದೆ. ಸದ್ಯ ಟಿಕೆಟ್ ದರ ಕಡಿಮೆ ಆಗಿದ್ದು ರಣ್‌ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾಗೆ ಹೆಚ್ಚು ಲಾಭ ಆಗಿದೆ. ಇನ್ನು ಭಾನುವಾರ (ಸೆಪ್ಟೆಂಬರ್ 25) ರಂದು ಕೂಡ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ.

ರಣ್‌ಬೀರ್ ಸಿನಿಮಾ 'ಬ್ರಹ್ಮಾಸ್ತ್ರ'

ರಣ್‌ಬೀರ್ ಸಿನಿಮಾ 'ಬ್ರಹ್ಮಾಸ್ತ್ರ'

'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆದಲ್ಲಿಂದ ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣಿತ್ತು. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಮೂರನೇ ವಾರವೂ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಉತ್ತಮವಾಗಿದ್ದು, ವೀಕೆಂಡ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ. ನ್ಯಾಷನಲ್ ಸಿನಿಮಾ ಡೇ ಬಳಿಕ ಟಿಕೆಟ್ ದರ ಮತ್ತೆ ಹೆಚ್ಚಾಗಿದೆ. ಹೀಗಾಗಿ ಥಿಯೇಟರ್‌ಗೆ ಬರೋರ ಸಂಖ್ಯೆ ಕಡಿಮೆ ಎನಿಸಿದ್ದರೂ, 'ಬ್ರಹ್ಮಾಸ್ತ್ರ' ವೀಕೆಂಡ್ ಕಲೆಕ್ಷನ್ ಚೆನ್ನಾಗಿಯೇ ಇದೆ. ಸದ್ಯ ಈ ಸಿನಿಮಾ ಕೇವಲ ಭಾರತದಲ್ಲಿ 238 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಅತೀ ಶೀಘ್ರದಲ್ಲಿಯೇ 250 ಕೋಟಿ ರೂ. ಕಲೆಕ್ಷನ್ ಮಾಡುತ್ತೆ ಎಂದು ಟ್ರೇಡ್ ಅನಲಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ.

'ಚುಪ್'ದ ಬಾಕ್ಸಾಫೀಸ್ ಕಲೆಕ್ಷನ್

'ಚುಪ್'ದ ಬಾಕ್ಸಾಫೀಸ್ ಕಲೆಕ್ಷನ್

ಕಳೆದ ಶುಕ್ರವಾರ ರಿಲೀಸ್ ಆಗಿರೋ ಮತ್ತೊಂದು ಬಾಲಿವುಡ್ ಸಿನಿಮಾ 'ಚುಪ್'. ಸನ್ನಿ ಡಿಯೋಲ್, ದುಲ್ಖರ್ ಸಲ್ಮಾನ್, ಪೂಜಾ ಭಟ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದೆ ಹೋದರೂ ಬಾಕ್ಸಾಫೀಸ್‌ನಲ್ಲಿ ಗಳಿಕೆ ಚೆನ್ನಾಗಿದೆ. ಈ ಸಿನಿಮಾ ಕೂಡ ನ್ಯಾಷನಲ್ ಸಿನಿಮಾ ಡೇಯಂದು ಸುಮಾರು 3 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಶನಿವಾರ ಎರಡು ಕೋಟಿ ರೂ. ಗಳಿಸಿದೆ. ಈ ಎರಡು ದಿನಗಳಲ್ಲಿ 5.13 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಭಾನುವಾರ (ಸೆಪ್ಟೆಂಬರ್ 25) ಕಲೆಕ್ಷನ್ ಮೇಲೆ ಸಿನಿಮಾದ ಭವಿಷ್ಯ ನಿಂತಿದೆ.

ದುಲ್ಖರ್ ಸಲ್ಮಾನ್ 3ನೇ ಬಾಲಿವುಡ್ ಚಿತ್ರ

ದುಲ್ಖರ್ ಸಲ್ಮಾನ್ 3ನೇ ಬಾಲಿವುಡ್ ಚಿತ್ರ

'ಚುಪ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಲಯಾಳಂ ನಟ ದುಲ್ಖರ್ ಸಲ್ಮಾನ್ ನಟಿಸಿದ್ದಾರೆ. ಇದು ದುಲ್ಖರ್ ಅಭಿನಯದ ಮೂರನೇ ಬಾಲಿವುಡ್ ಸಿನಿಮಾ. ಈ ಹಿಂದೆ ತರೆಕಂಡ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಆ ಮಟ್ಟಿಗೆ ಮೋಡಿ ಮಾಡಿರಲಿಲ್ಲ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಬಾಲಿವುಡ್‌ ಬಿಗ್ ಬಿ ಅಮಿತಾಬ್ ಬಚ್ಚನ್ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಿನಿಪ್ರಿಯರಿಗೆ ಸರ್ಪ್ರೈಸ್ ಕೊಟ್ಟಿದೆ.

ಇದು ಆರ್ ಬಾಲ್ಕಿ ಸಿನಿಮಾ

ಇದು ಆರ್ ಬಾಲ್ಕಿ ಸಿನಿಮಾ

ಆರ್.ಬಾಲ್ಕಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ವಿಶಿಷ್ಟವಾಗಿ ನಿಲ್ಲುವ ನಿರ್ದೇಶಕ. ಬಾಲ್ಕಿ ನಿರ್ದೇಶಿಸಿದ ಬಹುತೇಕ ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್‌ಗೊಂದು ಪಾತ್ರ ಇದ್ದೇ ಇರುತ್ತೆ. 'ಚೀನಿ ಕಮ್', 'ಪಾ', 'ಶಮಿತಾಬ್', 'ಕಿ & ಕಾ', 'ಪ್ಯಾಡ್ ಮ್ಯಾನ್' ಅಂತಹ ವಿಶಿಷ್ಟ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ತಾನೇ ರಿಲೀಸ್ ಆಗಿರೋ ಚುಪ್ ಕೂಡ ಟಿಪಿಕಲ್ ಆರ್ ಬಾಲ್ಕಿ ಸಿನಿಮಾ. ಹೀಗಾಗಿ ಸಿನಿಪ್ರಿಯರಿಗೆ ಈ ಸಿನಿಮಾ ಕಂಡಿತಾ ಇಷ್ಟ ಆಗುತ್ತೆ.

More from Filmibeat

English summary
Dulquer Salmaan Chup And Ranbir Kapoor Brahmastra Box Office Collection Report. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X