'ಸಲಾರ್' ವಿರುದ್ಧ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲುತ್ತಾ 'ಡಂಕಿ'; ಮೊದಲ ದಿನದ ಲೆಕ್ಕಾಚಾರವೇನು?
ಈ ವರ್ಷ 'ಪಠಾಣ್', 'ಜವಾನ್' ಅಂತಹ ಎರಡು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿರೋ ಶಾರುಖ್ ಖಾನ್ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ 'ಡಂಕಿ'. ಬಾಲಿವುಡ್‌ನಲ್ಲಿ ಇದೂವರೆಗೂ ಸೋಲನ್ನೇ ಕಾರಣ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದಾರೆ. ಅದರಲ್ಲೂ ಶಾರುಖ್ ಹಾಗೂ ಹಿರಾನಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರೋ ಮೊದಲ ಸಿನಿಮಾವಿದು.
ಶಾರುಖ್ ನಟಿಸಿದ ಎರಡು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಯ ಗಡಿ ದಾಟಿದಿದೆ. ಹೀಗಾಗಿ ವರ್ಷದ ಕೊನೆಯಲ್ಲಿ ರಿಲೀಸ್ ಆಗಿರುವ 'ಡಂಕಿ' ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡುತ್ತಾ? ಮೊದಲ ದಿನ ಪಠಾಣ್, ಜವಾನ್ ಸಿನಿಮಾದ ದಾಖಲೆಯನ್ನು ಮುರಿಯಬಹುದೇ? ಈ ಎಲ್ಲಾ ಪ್ರಶ್ನೆಗಳಿಗೂ ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಾಚಾರ ಹಾಕಿದ್ದಾರೆ.

'ಡಂಕಿ' ಇಂದು (ಡಿಸೆಂಬರ್ 21) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅದರಲ್ಲೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡೂ ಭಾಗಗಳಲ್ಲೂ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿಯೇ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಮೊದಲ ದಿನ ಕಲೆಕ್ಷನ್ ಹೊಸ ದಾಖಲೆಯನ್ನೇ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.
ಆದರೆ, ಮೊದಲ ದಿನವೇ 'ಡಂಕಿ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಮೇಲೆ ಪ್ರಭಾವ ಬೀರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಡಂಕಿ' ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಮೂರು ಕೋಟಿಯಿಂದ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜು ಮಾಡಿದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಲೆಕ್ಕಾಚಾರ ಆದರೂ, ಹೆಚ್ಚು ಕಡಿಮೆ ಒಂದೇ ರೇಂಜ್‌ನಲ್ಲಿದೆ.
'ಡಂಕಿ' ಸಿನಿಮಾ ಮೊದಲ ದಿನ 38 ರಿಂದ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಫಿಲ್ಮ್ ಕ್ರಿಟಿಕ್ ಹಾಗೂ ಟ್ರೇಡ್ ಎಕ್ಸ್‌ಪರ್ಟ್ ಸುಮಿತ್ ಕಡೆಲ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಮುಂದಿನ ಐದು ದಿನಗಳಲ್ಲಿ ಈ ಸಿನಿಮಾ ಸುಮಾರು 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.

ಆದರೆ, ಮೊದಲ 'ಡಂಕಿ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ನಾಳೆ (ಡಿಸೆಂಬರ್22) ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಸಲಾರ್' ರಿಲೀಸ್ ಆಗುತ್ತಿರೋದ್ರಿಂದ ಬಾಕ್ಸಾಫೀಸ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಆಗುವ ಸಾಧ್ಯತೆಯಿದೆ. ಒಂದ್ವೇಳೆ 'ಸಲಾರ್' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ, 'ಡಂಕಿ' ಕಲೆಕ್ಷನ್ ಡ್ರಾಪ್ ಆಗುವ ಸಾಧ್ಯತೆಯಿದೆ.
'ಡಂಕಿ' ಬಿಡುಗಡೆಗೂ ಮುನ್ನ ಸುಮಾರು 5.58 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ 15.41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ಹಿಂದಿ ಶೋಗಳಿಂದ 15.14 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಸಿನಿಮಾದ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ, ಕೇರಳ, ಆಂಧ್ರ, ಬಿಹಾರ್, ಒಡಿಶಾ ಹಾಗೂ ತಮಿಳು ನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.
ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಸೇರಿದಂತೆ ಬಾಲಿವುಡ್‌ನ ಜನಪ್ರಿಯ ತಾರೆಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲಕ್ಕಿಂತ ಹೆಚ್ಚಾಗಿ ಎರಡು ಸೂಪರ್ ಸಕ್ಸಸ್ ಕೊಟ್ಟಿರೋ ಶಾರುಖ್, ಅದ್ಭುತ ಸಿನಿಮಾಗಳನ್ನು ನೀಡಿರೋ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಇಬ್ಬರ ಕಾಂಬಿನೇಷನ್ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ನಿರೀಕ್ಷೆಯಿದೆ. ನಾಳೆ (ಡಿಸೆಂಬರ್ 22) 'ಡಂಕಿ' ಟೀಮ್ ಅಧಿಕೃತವಾಗಿ ಎಷ್ಟು ಗಳಿಸಿದೆ ಅನ್ನೋದನ್ನು ರಿವೀಲ್ ಮಾಡಬಹುದು.


Click it and Unblock the Notifications











