'ಡಂಕಿ' ಮಾಡಿದವರು ಹೀಗೆಲ್ಲ ಯೋಚಿಸ್ತಾರೆ ಅಂತ ಅನಿಸುತ್ತಿಲ್ಲ, ಇದು ಕ್ರಿಕೆಟ್ ಮ್ಯಾಚ್ ಅಲ್ಲ": ಪ್ರಶಾಂತ್ ನೀಲ್
2023 ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಷ್ಟೇ. ಸಿನಿಮಾ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ಲಕ್ಕಿ ಅನ್ನೋದು ಹಿಂದಿನಿಂದಲೂ ಇರುವ ನಂಬಿಕೆ. ಹಾಗಾಗಿ ಈ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಫಿಲ್ಮ್ ಮೇಕರ್ಸ್ ತಯಾರಿ ಮಾಡಿಕೊಳ್ಳುತ್ತಾರೆ. ಇದೇ ಕೆಲವೊಮ್ಮೆ ಬಾಕ್ಸಾಫೀಸ್ ಯುದ್ಧವಾಗಿ ಬದಲಾಗಿ ಬಿಡುತ್ತೆ.
ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾದ ಎರಡು ಸೂಪರ್‌ಸ್ಟಾರ್ ಸಿನಿಮಾಗಳು ಕಥೆ ಕೂಡ ಅದೇನೆ. ಒಂದು ದಿನದ ಅಂತರದಲ್ಲಿ ಶಾರುಖ್ ಖಾನ್ ನಟನೆಯ 'ಡಂಕಿ' ಹಾಗೂ ಪ್ರಭಾಸ್ ಸಿನಿಮಾ 'ಸಲಾರ್' ರಿಲೀಸ್ ಆಗಿತ್ತು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಗೆ ಸೆಣೆಸಾಡುತ್ತವೆ ಅನ್ನೋದನ್ನು ನೋಡುವುದಕ್ಕೆ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿತ್ತು.

ಒಂದು ಶಾರುಖ್ ಫ್ಯಾನ್ಸ್, ಇನ್ನೊಂದು ಕಡೆ ಪ್ರಭಾಸ್ ಫ್ಯಾನ್ಸ್ ಇಬ್ಬರೂ ಕಾದಾಟಕ್ಕೆ ಇಳಿದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಸ್ಟಾರ್ ಗ್ರೇಟ್, ಈ ಸಿನಿಮಾ ಉತ್ತಮ ಅಂತೆಲ್ಲ ಡಿಬೆಟ್ ಮಾಡುವುದಕ್ಕೆ ಶುರು ಮಾಡಿದ್ದರು. ಅಸಲಿಗೆ ಬಾಕ್ಸಾಫೀಸ್‌ನಲ್ಲಿ ಯುದ್ಧ ಮಾಡಲೇ ಬೇಕು ಅಂತ 'ಡಂಕಿ' ಜೊತೆ 'ಸಲಾರ್' ರಿಲೀಸ್ ಮಾಡಿದ್ರಾ? " ಇದು ಕ್ರಿಕೆಟ್ ಮ್ಯಾಚ್ ಅಲ್ಲ" ಅಂತ ಪ್ರಶಾಂತ್ ನೀಲ್ ಹೇಳಿದ್ದೇಕೆ? ತಿಳಿಯಲು ಮುಂದೆ ಓದಿ.
'ಡಂಕಿ' ಹಾಗೂ 'ಸಲಾರ್' ಎರಡು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೆಣೆಸಾಡಿದ್ದಂತೂ ನಿಜ. ಒಂದೊಂದೇ ಸಿನಿಮಾ ರಿಲೀಸ್ ಆಗಿದ್ದರೆ, ಎರಡೂ ಸಿನಿಮಾಗಳಿಗೂ ಲಾಭ ಅಂತೂ ಕೊಂಚ ಮಟ್ಟಿಗೆ ಹೆಚ್ಚೇ ಸಿಗುತ್ತಿತ್ತೋ ಏನೋ? ಇನ್ನೊಂದು ಕಡೆ 'ಡಂಕಿ' Vs 'ಸಲಾರ್' ಎಂದವರಿಗೆ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ನಾವಿಲ್ಲ ಒಬ್ಬರಿಗೊಬ್ಬರು ಪೈಪೋಟಿ ಮಾಡೋಕೆ ಬಂದಿಲ್ಲ. ನಾವಿಬ್ಬರೂ ಒಟ್ಟಿಗೆ ಗೆಲ್ಲಬೇಕಿದೆ. ನಾನು ಇಂತಹ ಫ್ಯಾನ್ಸ್ ವಾರ್‌ನ ಭಾಗವಾಗುವುದಕ್ಕೆ ಇಷ್ಟ ಪಡುವುದಿಲ್ಲ. ತುಂಬಾ ಕೆಟ್ಟದಾಗಿ ಮಾತಾಡಿಕೊಳ್ಳುತ್ತಿದ್ದಾರೆ ಅಂತ ಕೇಳಿದ್ದೇನೆ. ಈ ಇಬ್ಬರೂ ಸ್ಟಾರ್‌ಗಳು ಕೂಡ ಭಾರತೀಯ ಸಿನಿಮಾ ರಂಗದ ದೊಡ್ಡ ತಾರೆಯರೇ. ಅವರಿಗೆ ಗೌರವ ಸಲ್ಲಲೇ ಬೇಕು." ಎಂದು ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ 'ಡಂಕಿ' ಹಾಗೂ 'ಸಲಾರ್' ನಡುವೆ ಯುದ್ಧ ನಡೆಯುತ್ತಿದೆ ಅನ್ನೋದನ್ನು ಎರಡು ನಿರ್ಮಾಣ ಸಂಸ್ಥೆಗಳೇ ಯೋಚನೆ ಮಾಡಿರಲ್ಲ. ಯುದ್ಧ ಅಂತ ಹೇಳುವುದಕ್ಕೆ ಇದು ಕ್ರಿಕೆಟ್ ಮ್ಯಾಚ್ ಅಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. "ಡಂಕಿ ಹಾಗೂ ಸಲಾರ್ ನಡುವೆ ಯುದ್ಧ ಅನ್ನೋದನ್ನು ನಾವಿಬ್ಬರೂ ಯೋಚನೆ ಮಾಡಿಲ್ಲ. ಡಂಕಿ ಸಿನಿಮಾ ಮೇಕರ್ಸ್ ಹೀಗೆಲ್ಲೆ ಯೋಚನೆ ಮಾಡುತ್ತಾರೆ ಅಂತ ಅನಿಸುತ್ತಿಲ್ಲ. ಹಾಗೇ ಸಲಾರ್ ಮೇಕರ್ಸ್ ಕೂಡ ಹಾಗೇ ಯೋಚನೆ ಮಾಡುವುದಿಲ್ಲ. ನಾವಿಲ್ಲಿ ವೀಕ್ಷಕರ ಗಮನ ಸೆಳೆಯುವುದಕ್ಕೆ ಇದ್ದೇವೆ. ಜನರು ಮೆಚ್ಚಿಸುವುದಕ್ಕೆ ಇದ್ದೇವೆ. ನಮ್ಮ ನಮ್ಮ ನಡುವೆ ಸ್ಪರ್ಧೆ ಮಾಡುವುದಕ್ಕೆ ಅಲ್ಲ. ಇದು ಕ್ರಿಕೆಟ್ ಮ್ಯಾಚ್ ಅಲ್ಲ" ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
ಹಾಗೇ ಈ ಸಂದರ್ಶನದಲ್ಲಿ ಇಷ್ಟೆಲ್ಲ ಚರ್ಚೆ ಯಾಕೆ ಆಗುತ್ತಿದೆ ಅನ್ನೋದನ್ನೂ ಹೇಳಿದ್ದಾರೆ. "ಡಂಕಿ ಮಾತ್ರ ರಿಲೀಸ್ ಆಗಿದ್ದರೆ, ಇಲ್ಲ ಸಲಾರ್ ಮಾತ್ರ ರಿಲೀಸ್ ಆಗಿದ್ದರೆ, ಇಂತಹ ಪ್ರಶ್ನೆ ಬರುತ್ತಿರಲಿಲ್ಲ. ನನಗೆ ಪ್ರೇಕ್ಷಕರು ಮೂರ್ಖರಲ್ಲ ಅಂತ ಅನಿಸುತ್ತೆ. ನೆಗೆಟಿವ್ ವಿಷಯವನ್ನೇ ಹೆಚ್ಚು ಕೇಳಲು ಬಯಸುತ್ತಾರೆ ಅಂದರೆ, ಅದೊಂದು ದಿನ ಅವರು ಕೆಳಗೆ ಬರಲೇಬೇಕು." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.


Click it and Unblock the Notifications











