Election Result 2024: ರಾವಣನ ಸಂಬಂಧಿ ಊರಲ್ಲಿ ರಾಮಾಯಣದ ರಾಮನಿಗೆ ಗೆಲುವು
2024ರ ಲೋಕಸಭೆ ಚುನಾವಣೆಯಲ್ಲಿಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟ ಅರುಣ್ ಗೋವಿಲ್ ಅವರನ್ನು ಕಣಕ್ಕೆ ಇಳಿಸಿತ್ತು. 72 ವರ್ಷದ ನಟ ಅರುಣ್ ಗೋವಿಲ್ 2021ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮೀರತ್ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಮೂರು ಬಾರಿ ಗೆದ್ದಿರುವ ಎಂಪಿ ರಾಜೇಂದ್ರ ಅಗರ್ವಾಲ್ ಅವರ ಬದಲಿಗೆ ಅರುಣ್ ಗೋವಿಲ್‌ರನ್ನು ಕಣಕ್ಕೆ ಇಳಿಸಿದ್ದರು.
80 ದಶಕದಲ್ಲಿ ಪ್ರಸಾರಾಗಿದ್ದ 'ರಾಮಾಯಣ' ಧಾರಾವಾಹಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತ್ತು. ಈ ಧಾರಾವಾಹಿಯಲ್ಲಿ ರಾಮನಾಗಿ ನಟಿಸಿದ್ದವರು ಇದೇ ಅರುಣ್ ಗೋವಿಲ್. ಇಂದಿಗೂ ನಟ ಅರುಣ್ ಗೋವಿಲ್ ಅವರಲ್ಲಿ ಶ್ರೀ ರಾಮನನ್ನು ಕಾಣುವ ಜನರು ಇದ್ದಾರೆ. ಹೀಗಾಗಿ ಈ ಜನಪ್ರಿಯತೆಯನ್ನು ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿತ್ತು.

ಉತ್ತರ ಪ್ರದೇಶದ ಮೀರತ್‌ನಿಂದ ಬಿಜೆಪಿ ಈ ಬಾರಿ ಅರುಣ್ ಗೋವಿಲ್‌ಗೆ ಟಿಕೆಟ್ ನೀಡಿತ್ತು. ಅಲ್ಲದೆ ಅರುಣ್ ಗೋವಿಲ್ ಮೂಲತ: ಉತ್ತರ ಪ್ರದೇಶದ ಮೀರತ್‌ನವರೇ ಆಗಿದ್ದಾರೆ. ಇತ್ತೀಚೆಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆಯೂ ಅರುಣ್ ಗೋವಿಲ್ ಪ್ರಮುಖ ಆಕರ್ಷಣೆಯಾಗಿದ್ದರು. ಮೀರತ್ ಕ್ಷೇತ್ರದಿಂದ ಅರುಣ್ ಗೋವಿಲ್ ಎದುರಾಳಿಯಾಗಿ ಸಮಾಜವಾದಿ ಪಕ್ಷದಿಂದ ಸುನಿತಾ ವರ್ಮಾ ಸ್ಪರ್ಧಿಸಿದ್ದರು.
ಬಿಜೆಪಿ ಲೆಕ್ಕಾಚಾರ ಫಲಿಸಿದ್ದು ಸಮಾಜವಾದಿ ಪಕ್ಷದ ಸುನಿತಾ ವರ್ಮಾ ಅವರ ವಿರುದ್ಧ ಅರುಣ್ ಗೋವಿಲ್ ಗೆಲುವು ಸಾಧಿಸಿದ್ದಾರೆ. ಸುಮಾರು 11 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅರುಣ್ ಗೋವಿಲ್ ಮೊದಲ ಬಾರಿ ಸ್ಪರ್ಧೆ ಮಾಡಿ ಜಯ ಸಾಧಿಸುವ ಯಶಸ್ವಿಯಾಗಿದ್ದಾರೆ.

ಅರುಣ್ ಗೋವಿಲ್‌ಗೆ ರಾಜಕೀಯ ಹೊಸದೇನು ಅಲ್ಲ. ರಾಮಾಯಣದಲ್ಲಿ ರಾಮನಾಗಿ ನಟಿಸಿದ ಬಳಿಕ ಅರುಣ್ ಗೋವಿಲ್ ಜನಪ್ರಿಯತೆ ಉತ್ತುಂಗದಲ್ಲಿತ್ತು. 1988ರಲ್ಲಿ ಅರುಣ್ ಗೋವಿಲ್ ಕಾಂಗ್ರೆಸ್ ಪಾರ್ಟಿ ಪರ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಚುನಾವಣೆ ಮಾಡಿದ್ದರು. ಅಲಹಾಬಾದ್ ಇಂದು ಪ್ರಯಾಗ್‌ರಾಜ್ ಆಗಿ ಬದಲಾಗಿದೆ.
ಅರುಣ್ ಗೋವಿಲ್ ಅವರಿಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅಂದಿನ ಅಲಹಾಬಾದ್‌ನಿಂದ 88ರಲ್ಲಿ ವಿಪಿ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಸುನೀಲ್ ಶಾಸ್ತ್ರಿ ಸ್ಪರ್ಧೆ ಮಾಡಿದ್ದರು. ಆ ವೇಳೆ ಅರುಣ್ ಗೋವಿಲ್ ರಾಮಯಾಣದಲ್ಲಿ ಕಂಡಂತೆ ರಾಮನ ಅವತಾರದಲ್ಲಿಯೇ ಪ್ರಚಾರ ಮಾಡಿದ್ದರು. ಆದರೂ ಕಾಂಗ್ರೆಸ್ ಅಭ್ಯರ್ಥಿ ಆ ಚುನಾವಣೆಯಲ್ಲಿ ಗೆದ್ದಿಲ್ಲ.
ಇನ್ನು ಈಗಾಗಲೇ ಅರುಣ್ ಗೋವಿಲ್‌ಗೆ 66 ವರ್ಷ. ಹೀಗಾಗಿ ಮುಂದಿನ ಚುನಾವಣೆಗೂ ಅರುಣ್ ಗೋವಿಲ್ ಸ್ಪರ್ಧೆ ಮಾಡುವ ಅವಕಾಶವಿದೆ.


Click it and Unblock the Notifications











