ಅಜಯ್ ದೇವಗನ್ ಜೊತೆ ಹೇಮಾ ಮಾಲಿನಿ ಪುತ್ರಿ ಅಫೇರ್; ಕೊನೆಗೂ ಬಾಯ್ಬಿಟ್ಟ ನಟಿ!
ಬಾಲಿವುಡ್ ದಿಗ್ಗಜರಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಅಪ್ಪ-ಅಮ್ಮನಂತೆ ಇವರಿಗೆ ಚಿತ್ರರಂಗದಲ್ಲಿ ಸಕ್ಸಸ್ ಸಿಗಲಿಲ್ಲ. ಈಕೆ ನಟಿಸಿದ ಬೆರಳೆಣಿಕೆಯಷ್ಟು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು ಬಿಟ್ಟರೆ, ಬಹುತೇಕ ಸಿನಿಮಾಗಳು ಸೋತಿವೆ. ಹೀಗಾಗಿ ಬಹುಬೇಗನೇ ಚಿತ್ರರಂಗದಿಂದ ಕಾಣೆಯಾಗಿದ್ದರು.
ಸಿನಿಮಾಗಳಲ್ಲಿ ಯಶಸ್ಸು ಸಿಗದ ಬೆನ್ನಲ್ಲೇ ಭರತ್ ತಖ್ತಾನಿ ಜೊತೆ ಇಶಾ ಡಿಯೋಲ್ ವಿವಾಹವಾಗಿದ್ದರು. ಆದರೆ, ಮದುವೆಯಾದ 11 ವರ್ಷಗಳ ಬಳಿಕ ಇಶಾ ಡಿಯೋಲ್ ವಿವಾಹ ಮುರಿದುಬಿದ್ದಿತ್ತು. ಇದು ಬಾಲಿವುಡ್ ಮಂದಿಗಷ್ಟೇ ಅಲ್ಲ. ಧರ್ಮೇಂದ್ರ, ಹೇಮಾ ಮಾಲಿನಿಯಂತಹ ಮೇರು ಕಲಾವಿದರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ವಿಚ್ಛೇದನದ ಬಳಿಕ ಇಶಾ ಡಿಯೋಲ್ ಮತ್ತೆ ವೃತ್ತಿ ಬದುಕಿನ ಕಡೆಗೆ ಮುಖ ಮಾಡಿದ್ದಾರೆ.

ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ವೃತ್ತಿ ಬದುಕಿನ ಆರಂಭದಲ್ಲಿ ಆಗಾಗ ಸುದ್ದಿಯಲ್ಲಿ ಇರುತ್ತಿದ್ದರು. ಸುಮಾರು ಎರಡು ದಶಕಗಳ ಹಿಂದೆ ಇಶಾ ಡಿಯೋಲ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಸಮಯದಲ್ಲಿ ಇಶಾ ಡಿಯೋಲ್ ಹೆಸರು ಬಾಲಿವುಡ್‌ನ ಹಲವು ಸ್ಟಾರ್ ಹೀರೋಗಳ ಜೊತೆ ಕೇಳಿ ಬಂದಿತ್ತು. ಅದರಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದು ಸ್ಟಾರ್ ನಟ ಅಜಯ್ ದೇವಗನ್. ಇವರಿಬ್ಬರ ನಡುವೆ ಅಫೇರ್ ಇದೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.
ಇಶಾ ಡಿಯೋಲ್ ಇತ್ತೀಚೆಗೆ ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಹಾಗೂ ಅಜಯ್ ದೇವಗನ್ ನಡುವಿನ ಡೇಟಿಂಗ್ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇಶಾ ಹಾಗೂ ಅಜಯ್ ದೇವಗನ್ ಇಬ್ಬರೂ 'ಯುವ', 'ಮೈನ್ ಐಸಾ ಹೀ ಹೂನ್', 'ಕಾಲ್', 'ಇನ್ಸಾನ್', 'ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್' ಹಾಗೂ 'ಕ್ಯಾಶ್' ಅಂತಹ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಹೀಗಾಗಿ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೀಗ ಈ ಸಂದರ್ಶನದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.
ದಿ ಕ್ವಿಂಟ್‌ನೊಂದಿಗಿನ ಸಂದರ್ಶನದಲ್ಲಿ ಇಶಾ ಡಿಯೋಲ್ ಅವರು ಅಜಯ್ ದೇವಗನ್ ಅವರೊಂದಿಗೆ ಡೇಟಿಂಗ್ ವದಂತಿಗಳ ಬಗ್ಗೆ ಚರ್ಚಿಸಿದ್ದಾರೆ. "ಆ ವೇಳೆ ನನ್ನನ್ನು ಹಲವು ನಟರೊಂದಿಗೆ ತಳುಕು ಹಾಕಲಾಗಿತ್ತು. ಇವುಗಳಲ್ಲಿ ಕೆಲವು ನಿಜವಾಗಿರಬಹುದು. ಆದರೆ, ಬಹಳಷ್ಟು ಸುಳ್ಳು ಹೇಳಲಾಗಿತ್ತು. ಇದೇ ವೇಳೆ ಅಜಯ್ ದೇವಗನ್ ಜೊತೆ ನಾನು ಡೇಟಿಂಗ್ ಮಾಡುತ್ತಿದ್ದೇನೆ. ಅಫೇರ್ ಇಟ್ಟುಕೊಂಡಿದ್ದೇನೆ ಎಂದು ಹೇಳುವುದಕ್ಕೆ ಪ್ರಯತ್ನಿಸಿದರು" ಎಂದು ಇಶಾ ಡಿಯೋಲ್ ಬೇಸರ ವ್ಯಕ್ತಪಡಿಸಿದ್ದರು.

90ರ ದಶಕದ ಆರಂಭದಲ್ಲಿ ಅಜಯ್ ದೇವಗನ್ ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು. 2000ರ ಹೊತ್ತಿಗಾಗಲೇ ಚಿತ್ರರಂಗದಲ್ಲಿ ಸ್ಟಾರ್ ಆಗಿಬಿಟ್ಟಿದ್ದರು. ಇದೇ ವೇಳೆ ಇಶಾ ಡಿಯೋಲ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇಬ್ಬರೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರಿಂದ ಅಜಯ್ ದೇವಗನ್ ಜೊತೆ ಸಹಜವಾಗಿ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಇದೇ ಸಂದರ್ಶನದಲ್ಲಿ ಅಜಯ್ ದೇವಗನ್ ಜೊತೆ ಇಶಾ ಡಿಯೋಲ್ ಬಾಂಧವ್ಯದ ಬಗ್ಗೆನೂ ಇಶಾ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಇಶಾ ಡಿಯೋಲ್ "ನಮ್ಮಿಬ್ಬರ ನಡುವೆ ಅಫೇರ್ ಇದೆಯೆಂದು ಅನೇಕ ಕಥೆಗಳನ್ನು ಸೃಷ್ಟಿಸಿದ್ದರು. ಬಹುಶಃ ನಾವು ಆಗ ಒಟ್ಟಿಗೆ ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದರಿಂದ ಇದು ನಡೆದಿರಬಹುದು" ಎಂದೂ ಅವರು ಹೇಳಿದ್ದಾರೆ. ಇನ್ನು ವಿವಾಹದ ಬಳಿಕ ಇಶಾ ಡಿಯೋಲ್ ಸಿನಿಮಾಗಳಿಂದ ವಿರಾಮವನ್ನು ತೆಗೆದುಕೊಂಡಿದ್ದರು. ಈಗ 14 ವರ್ಷಗಳ ನಂತ್ರ 'ತುಮ್ಕೋ ಮೇರಿ ಕಸಮ್' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.


Click it and Unblock the Notifications











