ಸೌತ್ ಸಿನಿಮಾ Vs ಬಾಲಿವುಡ್: "ಸಿನಿಮಾಗಳನ್ನು ಬೇರೆ ಬೇರೆ ಮಾಡಿ ನೋಡುವುದು ಒಳ್ಳೆಯದಲ್ಲ" ಎಂದ ಸಂಜಯ್ ದತ್
ಬಾಲಿವುಡ್‌ನ ಎಲ್ಲಾ ಸ್ಟಾರ್‌ಗಳು ದಕ್ಷಿಣ ಭಾರತದಲ್ಲಿ ಗೆದ್ದಿಲ್ಲ. ದಕ್ಷಿಣ ಭಾರತದ ಎಲ್ಲಾ ಸ್ಟಾರ್‌ಗಳಿಗೂ ಹಿಂದಿ ಬೆಲ್ಟ್‌ಗಳಲ್ಲಿ ಸಕ್ಸಸ್ ಸಿಕ್ಕಿಲ್ಲ. ಆದರೆ, ಕೆಲವೇ ಕೆಲವು ಬಾಲಿವುಡ್ ನಟರು ದಕ್ಷಿಣ ಭಾರತದಲ್ಲೂ ಸಿನಿಪ್ರಿಯರ ಮನ ಗೆದ್ದಿದ್ದಾರೆ. ಅಂತಹವರಲ್ಲಿ ಸಂಜಯ್ ದತ್ ಕೂಡ ಒಬ್ಬರು. 'ಕೆಜಿಎಫ್ 2' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಸಂಜಯ್ ದತ್ ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದಾರೆ.
ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲೂ ಸದ್ದು ಮಾಡುತ್ತಿದ್ದಂತೆ ಸೌತ್ ಸಿನಿಮಾ Vs ಬಾಲಿವುಡ್ ಎಂಬ ಚರ್ಚೆಗಳು ಆರಂಭ ಆಗಿದ್ದವು. ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಸೋಲು ಕಾಣುತ್ತಿದ್ದವು ಇನ್ನೊಂದು ಕಡೆ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದವು. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ದಕ್ಷಿಣ ಭಾರತದ ಸಿನಿಮಾ ಗ್ರೇಟ್, ಬಾಲಿವುಡ್ ಸಿನಿಮಾ ಗ್ರೇಟ್ ಅನ್ನೋ ಚರ್ಚೆ ಶುರುವಾಗಿತ್ತು. ಈ ಬಗ್ಗೆ ಸಂಜಯ್ ದತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾರಂಗವನ್ನು ಬೇರೆ ಮಾಡಿ ನೋಡುವುದು ಒಳ್ಳೆಯದಲ್ಲ
ಮಾಧ್ಯಮಗಳು ಸಂಜಯ್ ದತ್‌ಗೆ ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾಗಳ ಬಗ್ಗೆ ಎದ್ದಿರುವ ಚರ್ಚೆ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. ಆಗ ಸಂಜಯ್ ದತ್ ಸಿನಿಮಾರಂಗವನ್ನು ಬೇರೆ ಬೇರೆ ಮಾಡಿ ನೋಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. " ದಕ್ಷಿಣ ಮತ್ತು ಬಾಲಿವುಡ್, ಉತ್ತರ ಅಥವಾ ಪೂರ್ವ ಅಂತ ನೋಡುವುದಿಲ್ಲ. ಈ ದೇಶದಲ್ಲಿ ನಿರ್ಮಾಣಗೊಳ್ಳುವ ಪ್ರತಿಯೊಂದು ಸಿನಿಮಾನೂ ಒಂದೇ ಸಿನಿಮಾ. ಅದು ಭಾರತೀಯ ಸಿನಿಮಾ. ಅದು ಹಾಗೇ ಇರಬೇಕು. ಅದು ಬಿಟ್ಟು ಬೇರೆ ಏನೂ ಇಲ್ಲ." ಎಂದು ಸಂಜಯ್ ದತ್ ಹೇಳಿದ್ದಾರೆ.
" ನಾವೆಲ್ಲರೂ ಒಂದೇ ದೇಶದವರು. ಒಂದೇ ತಂಡ. ಸಿನಿಮಾವನ್ನು ಬೇರೆ ಮಾಡಿ ನೋಡುವುದು ಒಳ್ಳೆಯದಲ್ಲ. ಇದೊಂದು ಇಡೀ ಚಿತ್ರರಂಗ ಹಾಗೂ ಒಂದು ದೊಡ್ಡ ಕುಟುಂಬ. ಇದು ಭಾರತೀಯ ಚಿತ್ರರಂಗಕ್ಕೆ ತುಂಬಾನೇ ಒಳ್ಳೆಯದು. ನಾವೆಲ್ಲರೂ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತೇವೆ. ದಕ್ಷಿಣ, ಪೂರ್ವ, ಉತ್ತರ ಅನ್ನೋದರ ಮೇಲೆ ನಂಬಿಕೆ ಇಡಬೇಡಿ." ಎಂದು ಸಂಜಯ್ ದತ್ ಅಭಿಪ್ರಾಯ ಪಟ್ಟಿದ್ದಾರೆ.
'ಪಠಾಣ್', 'RRR' ಸಿನಿಮಾ ಗೆದ್ದಿದ್ದು ಖುಷಿಯಿದೆ
ಇದೇ ಸಂದರ್ಭದಲ್ಲಿ ತಂತ್ರಜ್ಞಾನ, ಇತ್ತೀಚೆಗೆ ಗೆಲುವು ಕಂಡ ಸಿನಿಮಾಗಳ ಬಗ್ಗೆ ಸಂಜಯ್ ದತ್ ಮನಬಿಚ್ಚಿ ಮಾತಾಡಿದ್ದಾರೆ. " ಸಿನಿಮಾಗಳಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆಯೋ ಆ ಬಗ್ಗೆ ನನಗೆ ಖುಷಿಯಿದೆ. ತಂತ್ರಜ್ಙಾನವನ್ನು ಬಿಟ್ಟು ನಾವು ಇರಲು ಸಾಧ್ಯವಿಲ್ಲ. ಬಾಕ್ಸಾಫೀಸ್‌ನಲ್ಲಿ 'ಪಠಾಣ್', RRR ಅಂತಹ ಸಿನಿಮಾಗಳು ಧೂಳೆಬ್ಬಿಸುತ್ತಿರುವುದು ಸಿಕ್ಕಾಪಟ್ಟೆ ಖುಷಿಕೊಟ್ಟಿದೆ. ಇವೆಲ್ಲವೂ ಅದ್ಭುತ ಸಿನಿಮಾಗಳು. ಇಂತಹ ಸಿನಿಮಾಗಳು ಗೆಲ್ಲಬೇಕು." ಎಂದು ಸಂಜಯ್ ದತ್ ಹೇಳಿದ್ದಾರೆ.

ಸಂಜಯ್ 'ಕೆಜಿಎಫ್ 2' ದಕ್ಷಿಣದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲೂ ಕೆಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸನ್ನಿ ಡಿಯೋಲ್, ಜಾಕಿ ಶ್ರಾಫ್ ಮತ್ತು ಮಿಥುನ್ ಚಕ್ರವರ್ತಿ ಜೊತೆ 'ಬಾಪ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ ದಕ್ಷಿಣ ಭಾರತದ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಕೆಜಿಎಫ್ 2' ಬಳಿಕ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ'ಯಲ್ಲೂ ನಟಿಸುತ್ತಿದ್ದಾರೆ. ಎರಡೂ ಕಡೆಗಳಲ್ಲೂ ಅಧೀರ ಬ್ಯುಸಿಯಾಗಿರೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ.


Click it and Unblock the Notifications











