ರಾಖಿ ಸಾವಂತ್ ಭಾವಿ ಪತಿ ದೋಡಿ ಖಾನ್ ಪಾಕಿಸ್ತಾನದವನಲ್ಲ; ಮತ್ತೆ ಸುಳ್ಳು ಹೇಳಿದಳೇ ವಿವಾದದ ರಾಣಿ

ಬಾಲಿವುಡ್‌ನ ವಿವಾದಾತ್ಮಕ ನಟಿ ರಾಖಿ ಸಾವಂತ್ ಮದುವೆ ಮ್ಯಾಟರ್ ಮತ್ತೆ ಸಂಚಲನ ಸೃಷ್ಟಿಸಿದೆ. ರಾಖಿ ಹಾಗೂ ಆದಿಲ್ ಖಾನ್ ದುರಾನಿ ಮದುವೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿತ್ತು. ರಾಖಿ ಸಾವಂತ್ ಮೈಸೂರಿಗೆ ಬಂದು ಬೀದಿ ರಂಪ ಮಾಡಿದ್ದಳು. ಅಷ್ಟರೊಳಗೆ ಮತ್ತೊಂದು ಮದುವೆ ಸಜ್ಜಾಗಿದ್ದಾಳೆ. ಈ ಬಾರಿ ತನ್ನ ಪ್ರೀತಿ ಭಾರತದ ಗಡಿ ದಾಟಿದೆ ಎಂದು ಹೇಳಿದ್ದಳು.

ರಾಖಿ ಸಾವಂತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೀತಿಸುತ್ತಿರುವ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದರು. ರಾಖಿ ಪ್ರೀತಿಯಲ್ಲಿ ಬಿದ್ದಿರುವ ಆ ಅದೃಷ್ಟವಂತ ಪಾಕಿಸ್ತಾನದ ನಟ ದೋಡಿ ಖಾನ್ ಎಂದು ಹೇಳಿಕೊಂಡಿದ್ದರು. ಪ್ರೀತಿ, ಮದುವೆ ವಿಚಾರದಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ರಾಖಿ ಸಾವಂತ್ 3ನೇ ಬಾರಿಗೆ ದೋಡಿ ಖಾನ್ ಜೊತೆ ಮದುವೆ ಆಗುವುದಕ್ಕೆ ನಿರ್ಧರಿಸಿದ್ದಾಳೆ. ಈ ವಿಷಯವನ್ನು ಕನ್ಫರ್ಮ್ ಕೂಡ ಮಾಡಿದ್ದಾಳೆ.

Exclusive interview Rakhi Sawant s third future husband Dodi Khan is not from Pakistan

ಕಿರಿಕ್ ರಾಣಿ ರಾಖಿ ಸಾವಂತ್ ಹಿನ್ನೆಲೆ ತಿಳಿದು ಪ್ರೀತಿಯಲ್ಲಿ ಬಿದ್ದಿರುವ ನಟ ದೋಡಿ ಖಾನ್ ಪಾಕಿಸ್ತಾನ ಮೂಲದವನು ಎಂದು ಹೇಳಿಕೊಂಡಿದ್ದಳು. ಅಸಲಿಗೆ ದೋಡಿ ಖಾನ್ ಯಾರು? ಆತನ ಮೂಲ ಯಾವುದು? ಇದ್ದಕ್ಕಿದ್ದ ಹಾಗೇ ದೋಡಿ ಖಾನ್ ಜೊತೆ ಮದುವೆ ಆಗುವುದಕ್ಕೆ ಬಯಸಿದ್ದು ಏಕೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಫಿಲ್ಮಿಬೀಟ್ ವರದಿಗಾರ ಜೊತೆ ಸ್ವತ: ರಾಖಿ ಸಾವಂತ ಕೈ ಹಿಡಿಯಲಿರುವ ದೋಡಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಫಿಲ್ಮಿಬೀಟ್ ವರದಿಗಾರ ರಾಖಿ ಸಾವಂತ್ ಭಾವಿ ಪತಿಯ ಬಳಿಕ ಅವರು ಯಾವ ದೇಶದ ಸಿಟಿಜನ್ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ದೋಡಿ ಖಾನ್ ತಾನು ಪಾಕಿಸ್ತಾನದ ನಾಗರೀಕ ಅಲ್ಲ. ತನ್ನ ಬಳಿಕ ನೆದರ್‌ಲ್ಯಾಂಡ್‌ನ ಪೌರತ್ವವಿದೆ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ, ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲಿ ಮದುವೆ ಆಗುತ್ತೀರಿ ಎಂದು ಪ್ರಶ್ನೆಯನ್ನು ಮಾಡಲಾಗಿತ್ತು. ಅದಕ್ಕೆ ರಾಖಿ ಜೀ ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಮದುವೆ ಆಗುತ್ತೇನೆ ಎಂದಿದ್ದಾರೆ.

ರಾಖಿ ಸಾವಂತ್ ಹಾಗೂ ನಿಮ್ಮ ಮದುವೆ ವಿಷಯದಲ್ಲಿ ಸತ್ಯವಿದೆಯಾ? ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾ? ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ದೋಡಿ ಖಾನ್ ಉತ್ತರ ಹೀಗಿದೆ. "ಎಲ್ಲರೂ ಜನಪ್ರಿಯತೆಯನ್ನು ಬಯಸುತ್ತಾರೆ. ಕೆಲವೊಮ್ಮೆ ನಾವು ಅಂತಹ ಜನಪ್ರಿಯತೆಯನ್ನು ಬಯಸುವುದಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಅವು ಸುದ್ದಿಯಾಗಿ ಬಿಡುತ್ತವೆ. ಈ ಹಿಂದೆ ರಾಕಿಗೆ ಏನಾಯ್ತು ಅನ್ನೋದು ನಿಮಗೆ ಗೊತ್ತಿದೆ. ಹೀಗಾಗಿ ನಾನು ರಾಖಿ ಹಾಗೂ ನನ್ನ ಬಗ್ಗೆ ಮಾತ್ರ ಮಾತಾಡುವುದಕ್ಕೆ ಇಷ್ಟ ಪಡುತ್ತೇನೆ" ಎಂದಿದ್ದಾರೆ.

Exclusive interview Rakhi Sawant s third future husband Dodi Khan is not from Pakistan

ರಾಖಿ ಸಾವಂತ್ ವಿವಾಹವಾಗುವುದಕ್ಕೆ ಹೊರಟಿರುವ ದೋಡಿ ಖಾನ್ ಯಾರು? ಅಂತ ನೋಡುವುದಾರೆ, ಇವರೊಬ್ಬ ಬಹುಮುಖ ಪ್ರತಿಭೆ. ವ್ಯಾಪಾರಸ್ಥ ಕುಟುಂಬದಿಂದ ಬಂದಿರುವ ದೋಡಿ ಖಾನ್ ನಟನೆ ಹಾಗೂ ಸಿನಿಮಾಗಳ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದಾರೆ. ಫಿಟ್ನೆಸ್‌ ಬಗ್ಗೆ ಹೆಚ್ಚು ಒಲವು ಇದೆ. ಸದ್ಯ ಇವರಿಬ್ಬರು ಮದುವೆ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ. ಇಬ್ಬರೂ ಇಸ್ಲಾಂ ಸಂಪ್ರದಾಯದಂತೆ ಮದುವೆ ಆಗುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಖಿ ಸಾವಂತ್ ಹಾಗೂ ದೋಡಿ ಖಾನ್ ಪಾಕಿಸ್ತಾನದ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ. ಬಳಿಕ ಭಾರತದಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆಂದು ಹೇಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ದೋಡಿ ಖಾನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಮೆರವಣಿಗೆಯನ್ನು ಭಾರತಕ್ಕೆ ತರಬೇಕಾ? ಇಲ್ಲ ದುಬೈಗೆ ಶಿಫ್ಟ್ ಮಾಡಬೇಕಾ ಎಂದು ರಾಖಿ ಸಾವಂತ್‌ಗೆ ಕೇಳಿದ್ದರು.

More from Filmibeat

English summary
Exclusive interview Rakhi Sawant's third future husband, Dodi Khan, is not from Pakistan;
Read more about: rakhi sawant interview bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X