ಪ್ರಿಯಾಂಕಾ-ನಿಕ್ ಜೋನಸ್ ಒಟ್ಟು ಆಸ್ತಿ ₹1253 ಕೋಟಿ; ಇದರಲ್ಲಿ ಪ್ರಿಯಾಂಕಾ ಚೋಪ್ರಾಗೆ ಸೇರಿದ್ದೆಷ್ಟು ಗೊತ್ತೇ?
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ವಿಶ್ವದ ಪವರ್‌ಫುಲ್ ಸ್ಟಾರ್ ಜೋಡಿ. ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಸದ್ಯ ಪತಿ ನಿಕ್ ಜೋನಸ್ ಜೊತೆ ಲಾಸ್ ಏಂಜಲೀಸ್ ಜೊತೆ ಸೆಟಲ್ ಆಗಿದ್ದಾರೆ. ಇಬ್ಬರೂ ಬಿಡುವಿಲ್ಲದೆ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ವೆಬ್ ಸೀರಿಸ್ ಅಂತ ಪ್ರಿಯಾಂಕಾ ಬ್ಯುಸಿಯಾಗಿದ್ದರೆ, ನಿಕ್ ಇವೆಂಟ್‌ಗಳಲ್ಲಿ ಓಡಾಡಿಕೊಂಡಿದ್ದಾರೆ.
ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ. ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದಾರೆ. ವಿವಾಹದ ಬಳಿಕ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಆಸ್ತಿಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇಬ್ಬರ ಒಟ್ಟು ಆಸ್ತಿಯನ್ನು ಸೇರಿಸಿದರೆ, ನೂರಾರು ಕೋಟಿ ಅಲ್ಲ. ಸಾವಿರಾರು ಕೋಟಿ ದಾಟುತ್ತೆ.

ಸದ್ಯಕ್ಕೀಗ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಬ್ಬರ ಆಸ್ತಿಯ ಬಗ್ಗೆ ಕೋಯ್‌ಮೋಯ್ ವಿಸೃತ ವರದಿ ಮಾಡಿದೆ. ಈ ಜೋಡಿ ಒಟ್ಟು ಆಸ್ತಿಯಲ್ಲಿ ಪ್ರಿಯಾಂಕಾ ಚೋಪ್ರಾ ಆಸ್ತಿ ಶೇ. 46.6ರಷ್ಟು ಇದೆ ಎಂದು ಹೇಳಲಾಗಿದೆ. ಹಾಗಿದ್ರೆ, ಪ್ರಿಯಾಂಕಾ-ನಿಕ್ ಜೋನಸ್ ಬಳಿ ಇರುವ ₹1253 ಕೋಟಿ ಆಸ್ತಿಯಲ್ಲಿ ಪ್ರಿಯಾಂಕಾಗೆ ಸೇರಿದ್ದೆಷ್ಟು? ನಿಕ್ ಪಾಲು ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಪ್ರಿಯಾಂಕಾ ಚೋಪ್ರಾಗೆ ಮದುವೆ ಬಳಿಕ ಅವಕಾಶಗಳೇನು ಕಮ್ಮಿಯಾಗಿಲ್ಲ. ಬಾಲಿವುಡ್ ಸಿನಿಮಾಗಳನ್ನು ಬಿಟ್ಟು ಹಾಲಿವುಡ್‌ನಲ್ಲಿಯೇ ಪ್ರಿಯಾಂಕಾ ಸೆಟಲ್ ಆದಂತಿದೆ. ಆಗಾಗ ಕುಟುಂಬ ವಿಶೇಷ ಕಾರ್ಯಕ್ರಮಗಳಿಗೆ ಬಂದು ಹೋಗುವ ಪ್ರಿಯಾಂಕಾ ಜೊತೆ ಪತಿ ನಿಕ್ ಜೋನಸ್ ಕೂಡ ಕಾಣಿಸಿಕೊಳ್ಳುತ್ತಾರೆ. ಸದ್ಯ ಲಾಸ್ ಏಂಜಲೀಸ್‌ನಲ್ಲಿ ಈ ಜೋಡಿ 166 ಕೋಟಿ ರೂಪಾಯಿಯ ಬೃಹತ್ ಬಂಗಲೆಯನ್ನೂ ಖರೀದಿ ಮಾಡಿದೆ.

ಈ ಇಬ್ಬರು ಸ್ಟಾರ್ ಜೋಡಿ ಬಳಿ ₹1253 ಕೋಟಿ ಆಸ್ತಿ ಇದೆ ಎಂದು ವರದಿಯಾಗಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಪಾಲು ಶೇ. 46ರರಷ್ಟು ಇದೆ. ಅಂದರೆ, ಸುಮಾರು 70 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಇದನ್ನು ಭಾರತದ ಕರೆನ್ಸಿಗೆ ಕನ್ವರ್ಟ್ ಮಾಡಿದರೆ, ಸುಮಾರು 583 ಕೋಟಿ ರೂಪಾಯಿ ಆಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನೊಂದು ಕಡೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಏನು ಕಮ್ಮಿಯಿಲ್ಲ. ಜೋನಸ್ ಸಹೋದರರಲ್ಲಿ ನಿಕ್ ಅತೀ ಹೆಚ್ಚು ಶ್ರೀಮಂತ. 2006ರಲ್ಲಿ ವೃತ್ತಿ ಬದುಕು ಆರಂಭಿಸಿದ್ದ ನಿಕ್ ಬಳಿ ಈಗ 80 ಮಿಲಿಯನ್ ಡಾಲರ್ ಆಸ್ತಿಯಿದೆ. ಅಂದರೆ, ಭಾರತ ಕರೆನ್ಸಿಯ ಪ್ರಕಾರ ಸುಮಾರು 666 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬಳಿ ದುಬಾರಿ ಆಸ್ತಿಗಳಿವೆ. ಲಾಸ್ ಏಂಜಲೀಸ್‌ನಲ್ಲಿ ಸುಮಾರು 166 ಕೋಟಿ ರೂಪಾಯಿ ಬೆಲೆಯ ಬಂಗಲೆ ಇದೆ. 20 ಸಾವಿರ ಚದರ ಅಡಿಯ ಈ ಬಂಗಲೆಯಲ್ಲಿ 7 ಬೆಡ್ ರೂಮ್, 11 ಬಾತ್ ರೂಮ್‌ಗಳಿವೆ. ಗೆಸ್ಟ್ ವಿಂಗ್, ಸ್ವಿಮ್ಮಿಂಗ್ ಪೂಲ್ ಹಾಗೂ ಮರದ ಮಹಡಿ ಇದೆ. 26 ಕೋಟಿ ರೂಪಾಯಿ ಬೆಲೆ ಬಾಳುವ ಡೈಮಂಡ್ ರಿಂಗ್ ಇದೆ ಎನ್ನಲಾಗಿದೆ. ಗೋವಾದಲ್ಲಿ ಸುಮಾರು 20 ಕೋಟಿ ರೂಪಾಯಿ ಬೆಲೆಯ ಬಂಗಲೆ ಇದೆ ಎನ್ನಲಾಗಿದೆ.


Click it and Unblock the Notifications











