Fact Check: ಸಲ್ಮಾನ್-ಸೋನಾಕ್ಷಿ ಮದುವೆ ಫೋಟೊ ಹಿಂದಿನ ರಹಸ್ಯವೇನು?

ನಟಿ ಸೋನಾಕ್ಷಿ ಸಿನ್ಹಾರನ್ನು ಬಾಲಿವುಡ್‌ಗೆ ಕರೆದುಕೊಂಡ ಬಂದ ಶ್ರೇಯಸ್ಸು ಸಲ್ಮಾನ್ ಖಾನ್‌ಗೆ ಸಲ್ಲುತ್ತೆ. ಇವರಿಬ್ಬರೂ ಜೋಡಿಯಾಗಿ ನಟಿಸಿದ ಸಿನಿಮಾ 'ದಬಾಂಗ್' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿತ್ತು. ಅಲ್ಲಿಂದ ಈ ಜೋಡಿ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂತ ಅವರ ಅಭಿಮಾನಿಗಳು ಇಷ್ಟ ಪಟ್ಟ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಇಬ್ಬರೂ ಜಂಟಿಯಾಗಿ ನಟಿಸಿದ 'ದಬಾಂಗ್ 3' ಬಾಲಿವುಡ್ ಗಲ್ಲಾಪಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಆದರೂ, ಸಲ್ಮಾನ್ ಹಾಗೂ ಸೋನಾಕ್ಷಿ ಒಟ್ಟಿಗೆ ನಟಿಸಬೇಕು ಅಂತ ಆಸೆ ಪಡುವ ಅಭಿಮಾನಿಗಳು ಬಹಳ ಮಂದಿ ಇದ್ದಾರೆ.

ಇವರಿಬ್ಬರದ್ದೂ ಹಿಟ್ ಜೋಡಿ ಅಂತ ಬಾಲಿವುಡ್‌ ಭಾವಿಸಿದೆ. ಕೆಲವು ದಿನಗಳಿಂದ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹ ಇಬ್ಬರೂ ರಹಸ್ಯವಾಗಿ ಮದುವೆ ಎನ್ನಲಾದ ಫೋಟೊ ಹರಿದಾಡುತ್ತಿದೆ. ಅಸಲಿಗೆ ಈ ಫೋಟೊ ನಿಜವೇ? ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಹೇಗೆ? ಫೋಟೊ ಹಿಂದಿನ ಅಸಲಿ ಕಾರಣವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

 ಸಲ್ಮಾನ್-ಸೋನಾಕ್ಷಿ ಮದುವೆ ಪೋಟೊ ರಹಸ್ಯವೇನು?

ಸಲ್ಮಾನ್-ಸೋನಾಕ್ಷಿ ಮದುವೆ ಪೋಟೊ ರಹಸ್ಯವೇನು?

ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆರಂಭದಲ್ಲಿ ಈ ಫೋಟೊ ನೋಡಿದವರು, ಇದು ಯಾವುದೋ ಸಿನಿಮಾದ ಫೋಟೊವನ್ನು ವೈರಲ್ ಮಾಡುತ್ತಿರಬಹುದು ಎಂದು ಭಾವಿಸಿದ್ದರು. ಆದರೆ, ಈ ಫೋಟೊ ಯಾವುದೇ ಸಿನಿಮಾದ ದೃಶ್ಯ ಆಗಿರಲಿಲ್ಲ. ಹೀಗಾಗಿ ನಿಜವಾಗಿಯೂ ಮದುವೆ ಆಗಿರಬಹುದು ಎಂದೇ ಹಲವರು ನಂಬಿದ್ದರು. ಅಸಲಿಗೆ ಈ ಫೋಟೊ ಸಿನಿಮಾ ದೃಶ್ಯದಿಂದ ತೆಗೆದಿದ್ದು ಅಲ್ಲ. ಆದರೆ, ಅಭಿಮಾನಿಯೊಬ್ಬ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ಫೋಟೊವನ್ನು ಫೋಟೊಶಾಪ್ ಮಾಡಿ, ಸೋಶಿಯಲ್ ಮೀಡಿಯಾಗೆ ಹರಿಬಿಟ್ಟದ್ದಾನೆ. ಅದೇ ಈಗ ವೈರಲ್ ಆಗಿದೆ. ಆದರೆ, ಈ ಫೋಟೊವನ್ನು ನಕಲು ಮಾಡಿ ಸೋನಾಕ್ಷಿ ಅಭಿಮಾನಿಗಳಾ? ಅಥವಾ ಸಲ್ಮಾನ್ ಖಾನ್ ಅಭಿಮಾನಿಗಳಾ ಅನ್ನುವುದು ಗೊತ್ತಾಗಿಲ್ಲ. ಹಾಗಾಗಿ ಈ ಮದುವೆ ಫೋಟೊ ನಕಲಿ.

 ಸಲ್ಮಾನ್ ಜೊತೆ ಸೋನಾಕ್ಷಿ ಹೆಸರು ತಳುಕು

ಸಲ್ಮಾನ್ ಜೊತೆ ಸೋನಾಕ್ಷಿ ಹೆಸರು ತಳುಕು

ಸಲ್ಮಾನ್ ಖಾನ್ ವಯಸ್ಸು 50 ದಾಟಿದರೂ ಮದುವೆ ಬಗ್ಗೆ ಮಾತಾಡುತ್ತಿಲ್ಲ. ಇನ್ನು ಸಲ್ಮಾನ್ ಖಾನ್ ಮದುವೆ ಆಗುವುದೇ ಇಲ್ಲ ಅಂತ ಅವರ ಫ್ಯಾನ್ಸ್‌ಗೂ ಗೊತ್ತಾಗಿದೆ. ಇಷ್ಟು ದಿನ ಸಲ್ಮಾನ್ ಖಾನ್ ಜೊತೆ ಹಲವು ನಟಿಯರ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ತುಂಬಾ ಪ್ರಬಲವಾಗಿ ಕೇಳಿ ಬಂದ ಹೆಸರು ಕತ್ರಿನಾ ಕೈಫ್. ಆದ್ರೀಗ ಕತ್ರಿನಾ ಬಾಲಿವುಡ್ ನಟ ವಿಕ್ಕಿ ಕೌಶಲ್‌ರನ್ನು ವಿವಾಹವಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಅಭಿಮಾನಿಗಳು ನಿರಾಶರಾಗಿದ್ದಾರೆ. ಸಲ್ಮಾನ್ ಖಾನ್ ಕೂಡ ಮದುವೆ ಆಗಬೇಕು ಅಂತ ಬಯಸುತ್ತಿದ್ದಾರೆ. ಸೋನಾಕ್ಷಿ ಸಿನ್ಹಾ ಬಾಲಿವುಡ್ ಸುಲ್ತಾನ್ ಕುಟುಂಬ ತೀರಾ ಹತ್ತಿರವಾಗಿದ್ದಾರೆ. ಈ ಕಾರಣಕ್ಕೆ ಸಲ್ಮಾನ್ ಹೆಸರು ಸೋನಾಕ್ಷಿ ಜೊತೆ ತಳುಕು ಹಾಕಿಕೊಂಡಿರಲು ಸಾಧ್ಯವಿದೆ.

 ಇವರೊಂದಿಗೆ ಕೇಳಿಬಂದಿತ್ತು ಸೋನಾಕ್ಷಿ ಹೆಸರು

ಇವರೊಂದಿಗೆ ಕೇಳಿಬಂದಿತ್ತು ಸೋನಾಕ್ಷಿ ಹೆಸರು

ಕಳೆದ ವರ್ಷ ಸೋನಾಕ್ಷಿ ಸಿನ್ಹಾ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮನೆ ಸೇರುತ್ತಾರೆ. ಸಲ್ಮಾನ್ ಖಾನ್ ಮನೆಯ ಸೊಸೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣ ಸಲ್ಮಾನ್ ಖಾನ್ ಅಲ್ಲ. ಬದಲಾಗಿ ಸಲ್ಮಾನ್ ಖಾನ್ ಅತ್ತಿಗೆ ಸಹೋದರ ಬಂಟಿ ಸಜ್‌ದೇಹ್. ಸಲ್ಮಾನ್ ಸಹೋದರ ಸೊಹೇಲ್ ಖಾನ್ ಪತ್ನಿ ಸೀಮಾ ಸಹೋದರನೇ ಈ ಬಂಟಿ. ಸೆಲೆಬ್ರೆಟಿ ಮ್ಯಾನೇಜರ್ ಆಗಿರುವ ಬಂಟಿ ಜೊತೆ ಸೋನಾಕ್ಷಿ ಸಿನ್ಹಾ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ಸೋನಾಕ್ಷಿ ಸಿನ್ಹಾ ಸಲ್ಮಾನ್ ಖಾನ್ ಮನೆ ಸೇರುತ್ತಾಳೆ ಎಂಬ ಸುದ್ದಿ ಹರಿದಾಡಿತ್ತು. ಇನ್ನು 'ನೋಟ್‌ಬುಕ್' ಸಿನಿಮಾದ ನಟ ಜಾಹೀರ್ ಇಕ್ಬಾಲ್ ಜೊತೆನೇ ಸೋನಾಕ್ಷಿ ಹೆಸರು ತಳುಕು ಹಾಕಿಕೊಂಡಿತ್ತು. ಹೀಗಾಗಿ ಸಲ್ಮಾನ್ ಖಾನ್ ಜೊತೆ ಮದುವೆ ವಿಷಯ ಸುಳ್ಳು.

 ಮದುವೆ ಬಗ್ಗೆ ಸೋನಾಕ್ಷಿ ಹೇಳಿದ್ದೇನು?

ಮದುವೆ ಬಗ್ಗೆ ಸೋನಾಕ್ಷಿ ಹೇಳಿದ್ದೇನು?

ಇತ್ತೀಚೆಗೆ ಸೋನಾಕ್ಷಿ ಸಿನ್ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರವಾಗಿ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದ." ಎಲ್ಲರೂ ಮದುವೆ ಆಗುತ್ತಿದ್ದಾರೆ. ನೀವು ಯಾವಾಗ ಮದುವೆ ಆಗುತ್ತೀರಾ ಎಂದು ಕೇಳಿದ್ದ. ಅದಕ್ಕೆ ಸೋನಾಕ್ಷಿ ಸಿನ್ಹಾ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದರು. ಎಲ್ಲರಿಗೂ ಕೊರೊನಾ ಬರುತ್ತಿದೆ. ನನಗೂ ಕೊರೊನಾ ಬರೆಬೇಕಾ? ಎಂದು ಪ್ರಶ್ನೆ ಮಾಡಿದ್ದರು.

More from Filmibeat

English summary
Fact Check about Salman Khan Sonakshi Sinha secretly marriege viral wedding photo. The truth is that the wedding photo was photo-shopped.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X