ಇದೇನಿದು ವಿರುಷ್ಕಾ ಡೈವೋರ್ಸ್?: ಟ್ರೆಂಡ್ ಆಗುತ್ತಿದೆ ಕೊಹ್ಲಿ-ಅನುಷ್ಕಾ ವಿಚ್ಚೇದನದ ಸುದ್ದಿ!
'ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುತ್ತಿರುವ ರಾಷ್ಟ್ರೀಯವಾದಿ. ಹೀಗಾಗಿ ಅವರು ಅನುಷ್ಕಾ ಶರ್ಮಾಗೆ ಡೈವೋರ್ಸ್ ನೀಡಬೇಕು' ಎಂದು ಇತ್ತೀಚೆಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಸಲಹೆ ನೀಡಿದ್ದರು. ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್‌ನಲ್ಲಿ ತಮ್ಮ ಅನುಮತಿ ಇಲ್ಲದೆ ಚಿತ್ರ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದ ಅವರು, ಕೊಹ್ಲಿಗೆ ಈ ಸಲಹೆ ನೀಡಿದ್ದರು. ಇದನ್ನು ಹೆಚ್ಚಿನವರು ತಮಾಷೆಯಾಗಿ ಪರಿಗಣಿಸಿದ್ದರು.
Recommended Video
ಆದರೆ ಶುಕ್ರವಾರ ಸಂಜೆಯಿಂದ ಇದ್ದಕ್ಕಿದ್ದಂತೆ ಟ್ವಿಟ್ಟರ್‌ನಲ್ಲಿ 'ವಿರುಷ್ಕಾ ಡೈವೋರ್ಸ್' ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿರುವುದು ಅನೇಕರಲ್ಲಿ ಅಚ್ಚರಿ ಮತ್ತು ಆಘಾತ ಮೂಡಿಸಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚ್ಚೇದನ ಪಡೆಯುತ್ತಾರಾ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇದು ಯಾರೋ ಕಿಡಿಗೇಡಿಗಳು ಸೃಷ್ಟಿಸಿರುವ ಕಿತಾಪತಿ. ಇದು ಫೇಕ್ ಸುದ್ದಿ ಎನ್ನುವುದು ಅನೇಕರಿಗೆ ಅರ್ಥವಾಗಿಲ್ಲ. ವಾಸ್ತವವಾಗಿ 'ವಿರುಷ್ಕಾ ಡೈವೋರ್ಸ್' ಕುರಿತಂತೆ ಸಾವಿರಾರು ಮೀಮ್ಸ್‌ಗಳು ಸೃಷ್ಟಿಯಾಗಿ ಹರಿದಾಡುತ್ತಿರುವುದೇ ಈ ಟ್ರೆಂಡ್‌ಗೆ ಕಾರಣ. ಈ ತಮಾಷೆಯ ಮೀಮ್‌ಗಳತ್ತ ಒಂದು ನೋಟ...

ಕೊಹ್ಲಿ ರಿಯಾಕ್ಷನ್
ವಿರುಷ್ಕಾ ಡೈವೋರ್ಸ್ ಟ್ರೆಂಡಿಂಗ್ ಅಗುತ್ತಿರುವುದನ್ನು ನೋಡಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ಕ್ರಿಕೆಟ್ ಮೈದಾನದಲ್ಲಿನ ಕೊಹ್ಲಿ ಫೋಟೊಗಳನ್ನು ಜೋಡಿಸಿ ಮೀಮ್ ಮಾಡಲಾಗಿದೆ.

ಕೈ ಮುಗಿದ ಕೊಹ್ಲಿ
ವಿರುಷ್ಕಾ ಡೈವೋರ್ಸ್ ಎಂಬ ಟ್ರೆಂಡ್ ಸೃಷ್ಟಿಸಿದ ಜನರಿಗೆ ವಿರಾಟ್ ಕೊಹ್ಲಿ ಕೈ ಮುಗಿದು 'ಸ್ವಲ್ಪವಾದರೂ ನಾಚಿಕೆಪಡಿ' ಎನ್ನುವ ಮೀಮ್ ವೈರಲ್ ಆಗದೆ.

ವಿದೇಶಿಗರೂ ನಂಬಿದ್ದಾರೆ
ಟ್ವಿಟ್ಟರ್‌ನಲ್ಲಿ 'ವಿರುಷ್ಕಾ ಡೈವೋರ್ಸ್' ಟ್ರೆಂಡ್ ನೋಡಿದ ವಿದೇಶಿಗರೂ ಅದನ್ನು ನಿಜವೆಂದು ತಿಳಿದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಬಾರದಿತ್ತು ಎಂದು ವಿಷಾದಿಸಿದ್ದಾರೆ. ವಿದೇಶಿಗರ ಕಳಕಳಿಯೂ ತಮಾಷೆಯ ಮೀಮ್ ಆಗಿಬಿಟ್ಟಿದೆ.

ಈ ಸುಳ್ಳು ಸುದ್ದಿ ನಿಲ್ಲಿಸಿ
ವಿರುಷ್ಕಾ ಡೈವೋರ್ಸ್ ಒಂದು ಸುಳ್ಳು ಸುದ್ದಿಯಂತೆ ಕಾಣಿಸುತ್ತದೆ. ಈ ಸುದ್ದಿ ನೋಡುವವರೆಲ್ಲರೂ ಹರಡುವುದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಖುಷಿಯಾಗಿದ್ದಾರೆ ಎಂದು ಅನೇಕರು ಈ ಟ್ರೆಂಡ್ ಕೈಬಿಡುವಂತೆ ಸಲಹೆ ನೀಡಿದ್ದಾರೆ.


Click it and Unblock the Notifications











