ನಿಜಕ್ಕೂ ಆಕಾಶದ ತಾರೆಯಾದ ಸುಶಾಂತ್ ಸಿಂಗ್ ರಜಪೂತ್!

ಸಿನಿಮಾ ತಾರೆಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಈಗ ಆಕಾಶದಲ್ಲಿ ಮಿನುಗುವ ತಾರೆಯಷ್ಟೇ. ಸುಶಾಂತ್ ಸಾವಿನ ಬಳಿಕ ಅವರಿನ್ನು ತಾರಾಮಂಡಲದ ಕೋಟ್ಯಂತರ ನಕ್ಷತ್ರಗಳ ಮಧ್ಯೆ ಒಬ್ಬರಾಗಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದರು. ಅದನ್ನು ಮಹಿಳಾ ಅಭಿಮಾನಿಯೊಬ್ಬರು ನಿಜ ಮಾಡಿದ್ದಾರೆ.

Recommended Video

ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

ನಕ್ಷತ್ರವೊಂದಕ್ಕೆ ಸುಶಾಂತ್ ಸಿಂಗ್ ರಜಪೂತ್ ಅವರ ಹೆಸರು ಇಟ್ಟಿರುವ ಅಭಿಮಾನಿಯೊಬ್ಬರು ಅದನ್ನು ಇಂಟರ್‌ನ್ಯಾಷನಲ್ ಸ್ಟಾರ್ ರಿಜಿಸ್ಟ್ರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದಾರೆ.

ಸಂಸ್ಥೆಯಿಂದ ನೋಂದಣಿ ಪ್ರಮಾಣಪತ್ರವನ್ನು ಹಂಚಿಕೊಂಡಿರುವ ರಕ್ಷಾ ಎಂಬ ಅಭಿಮಾನಿ, ಸುಶಾಂತ್ ತಾರಾಮಂಡಲದ ಅಭಿಮಾನಿ. ಅವರು ಯಾವಾಗಲೂ ನಕ್ಷತ್ರಗಳನ್ನು ನೋಡುತ್ತಿದ್ದರು. ಅದಕ್ಕಾಗಿ ಈ ರೀತಿ ನಕ್ಷತ್ರಕ್ಕೆ ಸುಶಾಂತ್ ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

ಸುಶಾಂತ್ ಮೇಲಿನ ಅಭಿಮಾನಕ್ಕಾಗಿ ಇದನ್ನು ಮಾಡಲಾಗಿದೆ. ಇದನ್ನು ಯಾವುದೇ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ...

ಸುಶಾಂತ್ ಹೆಸರು ಹಕ್ಕುಸ್ವಾಮ್ಯ

ಸುಶಾಂತ್ ಹೆಸರು ಹಕ್ಕುಸ್ವಾಮ್ಯ

ಖಗೋಳವಿಜ್ಞಾನದ ಆರ್‌ಎ 22.121 ಸ್ಥಿತಿಯಲ್ಲಿ 10.14 ಇಳಿಜಾರಿನಲ್ಲಿ ಇರುವ ನಕ್ಷತ್ರವೊಂದಕ್ಕೆ ಜೂನ್ 25ರಂದು ಸುಶಾಂತ್ ಸಿಂಗ್ ರಜಪೂತ್ ಎಂದು ಹೆಸರಿಡಲಾಗಿದೆ. ಈ ಹೆಸರನ್ನು ರಿಜಿಸ್ಟ್ರಿಯ ದಾಖಲೆಯಲ್ಲಿ ಕಾಯಂ ಆಗಿ ನಮೂದಿಸಲಾಗಿದೆ. ಮತ್ತು ಇದನ್ನು ಸ್ಟಾರ್ ರಿಜಿಸ್ಟರ್ ನಲ್ಲಿ ಹಕ್ಕುಸ್ವಾಮ್ಯ ಹೊಂದಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ನಕ್ಷತ್ರಕ್ಕೆ ಹೆಸರು ಇಡುವ ಕಂಪೆನಿ

ನಕ್ಷತ್ರಕ್ಕೆ ಹೆಸರು ಇಡುವ ಕಂಪೆನಿ

ಸ್ಟಾರ್ ರಿಜಿಸ್ಟ್ರಿಯು ಅಮೆರಿಕದ ಇಲ್ಲಿನೊಯಿಸ್ ಮೂಲದ ಕಂಪೆನಿಯಾಗಿದ್ದು, ಜನರು ತಾವು ಬಯಸಿದ ನಕ್ಷತ್ರಕ್ಕೆ ಹೆಸರು ಇಟ್ಟು ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡುತ್ತದೆ. ಇದಕ್ಕೆ ಜನರು ತಕ್ಕಷ್ಟು ಹಣ ಕೂಡ ಪಾವತಿಸಬೇಕು. ಒಂದು ನಕ್ಷತ್ರಕ್ಕೆ ಹೆಸರು ಇರಿಸಲು 48 ಡಾಲರ್ ನೀಡಬೇಕಾಗುತ್ತದೆ.

ಅವರು ಸದಾ ಮಿನುಗಲಿ

ಅವರು ಸದಾ ಮಿನುಗಲಿ

'ಸುಶಾಂತ್ ಅವರಿಗೆ ನಕ್ಷತ್ರಗಳ ಬಗ್ಗೆ ವಿಪರೀತ ವ್ಯಾಮೋಹ ಇತ್ತು. ಹೀಗಾಗಿ ನಕ್ಷತ್ರವೊಂದಕ್ಕೆ ಅವರ ಹೆಸರು ಇರಿಸುವುದು ಸೂಕ್ತ ಎನಿಸಿತು. ಅಷ್ಟು ಸುಂದರ ಮತ್ತು ಮಹಾನ್ ಚೇತನವನ್ನು ಕಂಡಿರುವುದು ನಮ್ಮ ಪುಣ್ಯ ಎಂದು ನನಗೆ ಅನಿಸುತ್ತದೆ. ಹೀಗಾಗಿ ಅವರು ಪ್ರಕಾಶಮಾನವಾಗಿ ಮಿನುಗುವುದು ಮುಂದುವರಿಯಬೇಕು' ಎಂದಿದ್ದಾರೆ ರಕ್ಷಾ.

ಕಂಗಳಲ್ಲಿ ತಾರಾಮಂಡಲ

ಕಂಗಳಲ್ಲಿ ತಾರಾಮಂಡಲ

'ಸುಶಾಂತ್ ಸಿಂಗ್ ರಜಪೂತ್. ನಿಮ್ಮನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಯುಗಗಳು ಬಂದರೂ ನಿಮ್ಮ ಹೆಸರನ್ನು ನಾವು ಸಂಭ್ರಮಿಸುತ್ತೇವೆ ಮತ್ತು ಸ್ಮರಿಸುತ್ತೇವೆ. ನಿಮ್ಮ ಕಂಗೊಳಿಸುವ ಕಣ್ಣುಗಳು ಅವುಗಳಲ್ಲಿನ ಸಂಪೂರ್ಣ ತಾರಾಮಂಡಲವನ್ನು ಪ್ರತಿಫಲಿಸುತ್ತಿದ್ದವು. ಚಂದ್ರನಲ್ಲಿಗೆ ಮತ್ತು ಅದರಾಚೆಗೆ ನಿಮ್ಮನ್ನು ಪ್ರೀತಿಸುತ್ತೇವೆ. ನೀವು ಅಪಾರ ಮೆಚ್ಚಿಕೊಳ್ಳುವ ತಾರೆಗಳ ನಡುವೆ ನೀವು ಅತಿ ಹೆಚ್ಚು ಪ್ರಕಾಶಮಾನವಾಗಿ ಬೆಳಗುವುದನ್ನು ಮುಂದುವರಿಸಿ' ಎಂದು ಪ್ರಮಾಣಪತ್ರದ ಕೆಳಭಾಗದಲ್ಲಿ ಸುಶಾಂತ್ ಅವರನ್ನು ನಕ್ಷತ್ರಮಂಡಲಕ್ಕೆ ಹೋಲಿಸುವ ಸುದೀರ್ಘ ವಿವರಣೆ ಬರೆಯಲಾಗಿದೆ.

More from Filmibeat

English summary
A Fan Of Sushant Singh Rajput named a star after him. The Star Registry has registered his name to a star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X