ಛತ್ರಪತಿ ಶಿವಾಜಿ ಕಾಲದಲ್ಲಿ ಬಲ್ಬ್ ಕಂಡುಹಿಡಿದಿದ್ಯಾರು? ಅಕ್ಷಯ್ ಕುಮಾರ್ ವಿರುದ್ಧ ನೆಟ್ಟಿಗರ ಕೆಂಗಣ್ಣು!

ಬಾಲಿವುಡ್‌ ಸಿನಿಮಾಗಳ ವಿರುದ್ಧ ನೆಟ್ಟಿಗರು ಟ್ರೋಲ್ ಮಾಡೋದನ್ನು ಮುಂದುವರೆಸಿದ್ದಾರೆ. ಅದರಲ್ಲೂ ಅಕ್ಷಯ್ ಕುಮಾರ್ ಸಿನಿಮಾಗಳು ಟ್ರೋಲ್ ಆಗೋದು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅಭಿನಯದ ಮರಾಠಿ ಸಿನಿಮಾದ ಶೂಟಿಂಗ್ ಆರಂಭ ಆಗಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಶೌರ್ಯವನ್ನು ಸಾರುವ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಅದುವೇ 'ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್'. ಈ ಸಿನಿಮಾ ಶೂಟಿಂಗ್ ಆರಂಭ ಆಗಿದೆ ಅಂತ ಅಕ್ಷಯ್ ಕುಮಾರ್ ಅನೌನ್ಸ್ ಮಾಡಿದ್ದಷ್ಟೇ. ನೆಟ್ಟಿಗರು ಈ ಸಿನಿಮಾವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ 'ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್' ಸಿನಿಮಾದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದರು. ಅದೇ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ನೆಟ್ಟಿಗರು ಈ ಸಿನಿಮಾದ ಫಸ್ಟ್ ಲುಕ್ ಅನ್ನು ಟ್ರೋಲ್ ಮಾಡುತ್ತಿರೋದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಕ್ಷಯ್ ಕುಮಾರ್ ಶಿವಾಜಿ ಗೆಟಪ್ ಹೇಗಿದೆ?

ಅಕ್ಷಯ್ ಕುಮಾರ್ ಶಿವಾಜಿ ಗೆಟಪ್ ಹೇಗಿದೆ?

ಮಂಗಳವಾರ (ಡಿಸೆಂಬರ್ 06) ಅಕ್ಷಯ್ ಕುಮಾರ್ ಸಿನಿಮಾ 'ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್' ಶೂಟಿಂಗ್ ಶುರುವಾಗಿದ್ದನ್ನು ಅನೌನ್ಸ್ ಮಾಡಿದ್ದರು. ಆದರೆ, ಅದ್ಯಾಕೋ ಅಭಿಮಾನಿಗಳು ಇಷ್ಟ ಆದಂತೆ ಕಾಣುತ್ತಿಲ್ಲ. ಅಲ್ಲದೆ ಅಕ್ಷಯ್ ಕುಮಾರ್ ಬದಲು ಮತ್ತೊಬ್ಬ ನಟನ ಹೆಸರನ್ನು ಸೂಚಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರತಂಡ ಬಿಟ್ಟ ಫಸ್ಟ್ ಲುಕ್ ನೋಡಿ ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಫಸ್ಟ್ ಲುಕ್‌ನಲ್ಲಿ ಬಲ್ಬ್.. ಹೆವೀ ಟ್ರೋಲ್!

ಫಸ್ಟ್ ಲುಕ್‌ನಲ್ಲಿ ಬಲ್ಬ್.. ಹೆವೀ ಟ್ರೋಲ್!

ಅಕ್ಷಯ್ ಕುಮಾರ್ ಶಿವಾಜಿ ಅವತಾರದ ಫಸ್ಟ್ ಲುಕ್ ರಿವೀಲ್ ಆಗುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಅದಕ್ಕೆ ಬಲವಾದ ಕಾರಣವೂ ಇದೆ. ಈ ಸಿನಿಮಾ ಫಸ್ಟ್ ಲುಕ್‌ನಲ್ಲಿ ಅಕ್ಷಯ್ ಕುಮಾರ್ ನಡೆದು ಬರುತ್ತಿದ್ದಂತೆ ಕೊನೆಯಲ್ಲಿ ಲೈಟ್ ಬಲ್ಬ್‌ಗಳು ಕಾಣಿಸುತ್ತವೆ. ಇದನ್ನೇ ಮಾರ್ಕ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. "ಶಿವಾಜಿ ಮಹಾರಾಜ್ 1674 to 1680ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದರು. ಥಾಮಸ್ ಎಡಿಸನ್ 1880ರಲ್ಲಿ ಬಲ್ಬ್ ಕಂಡು ಹಿಡಿದಿದ್ದಾನೆ. ಇದು ಅಕ್ಷಯ್ ಕುಮಾರ್ ನಟಿಸುತ್ತಿರುವ ಶಿವಾಜಿ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಶಿವಾಜಿ ಕಾಲದಲ್ಲಿ ಬಲ್ಬ್ ಇತ್ತಾ?

ಶಿವಾಜಿ ಕಾಲದಲ್ಲಿ ಬಲ್ಬ್ ಇತ್ತಾ?

ಛತ್ರಪತಿ ಶಿವಾಜಿ ಚರಿತ್ರೆಯನ್ನಾಧರಿಸಿದ ಸಿನಿಮಾದ ಫಸ್ಟ್ ಲುಕ್‌ನಲ್ಲಿ ಲೈಟ್ ಬಲ್ಬ್ ಕಾಣಿಸಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. " ಛತ್ರಪತಿ ಶಿವಾಜಿ ಮಹಾರಾಜ್ ಕಾಲಘಟ್ಟದಲ್ಲಿ ಥಾಮಸ್ ಎಡಿಸನ್ ಬಲ್ಬ್ ಕಂಡುಹಿಡಿದಿದ್ದ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಕ್ರಿಯಾತ್ಮಕ ಸ್ವಾತಂತ್ರವನ್ನು ಸ್ವಲ್ಪ ಹೆಚ್ಚಾಗಿಯೇ ಬಳಸಿಕೊಂಡಿದ್ದಾರೆ" ಎಂದು ಮತ್ತೊಬ್ಬ ನೆಟ್ಟಗರು ಕಿಡಿ ಕಾರಿದ್ದಾರೆ.

ಅಕ್ಷಯ್‌ಗಿಂತ ಶರದ್ ಬೆಸ್ಟ್

ಅಕ್ಷಯ್‌ಗಿಂತ ಶರದ್ ಬೆಸ್ಟ್

ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರವನ್ನು ಆಕ್ಷಯ್ ಕುಮಾರ್ ಮಾಡುತ್ತಿರುವುದೂ ಕೂಡ ನೆಟ್ಟಿಗರಿಗೆ ಸಮಾಧಾನವಿಲ್ಲ. ಅಕ್ಷಯ್ ಕುಮಾರ್‌ಗಿಂತ ಮರಾಠಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಶರದ್ ಕೆಲ್ಕರ್ ಉತ್ತಮ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಪಾತ್ರಕ್ಕೆ ನ್ಯಾಯ ವದಗಿಸುತ್ತಾರೆಂದು ನಂಬಿದ್ದೇನೆ. ಆದರೆ, ಶರದ್ ಕೆಲ್ಕರ್ ಈ ಪಾತ್ರಕ್ಕೆ ಸೂಕ್ತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಮೊದಲ ಹಂತದಲ್ಲೇ ಅಕ್ಷಯ್ ಕುಮಾರ್ ಸಿನಿಮಾಗೆ ಹಿನ್ನೆಡೆಯಾಗಿದೆ.

More from Filmibeat

English summary
Fans Found Light Bulbs In Akshay Kumar Starrer Chatrapati Shivaji Maharaj First Look, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X