ಎರಡನೇ ಮದುವೆ ಸಂಭ್ರಮದಲ್ಲಿ ಬಾಲಿವುಡ್‌ ನಟ, ನಿರ್ದೇಶಕ ಫರ್ಹಾನ್ ಅಖ್ತರ್!

ಬಾಲಿವುಡ್‌ನಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ. ಬಾಲಿವುಡ್ ಮದುವೆಗಳು ಅಂದರೆ ಕೊಂಚ ಕುತೂಹಲ ಹೆಚ್ಚೇ ಇರುತ್ತದೆ. ಯಾಕೆಂದರೆ ಬಾಲಿವುಡ್‌ನಲ್ಲಿ ಯಾರು, ಯಾರೊಂದಿಗೆ ಯಾವಾಗ ಮದುವೆ ಆಗುತ್ತಾರೆ ಅನ್ನೋದೆ ಅಚ್ಚರಿಯ ಸಂಗತಿ. ಅದರಲ್ಲಿ ಎರಡನೇಯ ಮದುವೆಯ?, ಮೂರನೆಯಾ ಮದುವೆಯಾ ಎನ್ನುವುದು ಕೂಡ ಮುಖ್ಯ ಆಗುತ್ತೆ. ಈಗ ಎರಡನೇ ಮದುವೆ ಬಗ್ಗೆ ಮಾತನಾಡಲು ಕಾರಣ ಬಾಲಿವುಡ್ ತಾರಾ ಜೋಡಿ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್.

ಹೌದು ಸದ್ಯ ಮದುವೆ ವಿಚಾರವಾಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದ್ದಾರೆ. ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್. ಈ ಜೋಡಿ ಸದಾ ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಲಿತ್ತು. ಇವರ ಮದುವೆ ಯಾವಾಗ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಿ ಟೌನ್‌ನಲ್ಲಿ ಈ ಜೋಡಿಯ ಮದುವೆ ಸಮಾರಂಭ ಕಳೆಗಟ್ಟಿದೆ.

ದೀಪಾವಳಿ ಆಚರಿಸಿದ ಫರ್ಹಾನ್ ಅಖ್ತರ್ ವಿರುದ್ಧ ವಿಷ ಕಾರಿದ ನೆಟ್ಟಿಗರು
ಇತ್ತೀಚೆಗೆ ಫರ್ಹಾನ್ ಅಖ್ತರ್ ಬ್ಯಾಚುರಲ್ ಪಾರ್ಟಿ ಫೊಟೋಗಳನ್ನು ಹಂಚಿಕೊಂಡಿದ್ದರು. ಮುಂಬೈನಲ್ಲಿ ಇರುವ ಫರ್ಹಾನ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಮೆಹೆಂದಿ, ಸಂಗೀತ್ ಕಾರ್ಯಕ್ರಮ ನೆರವೇರಿದೆ. ಹಾಗಿದ್ದರೆ ಈ ಜೋಡಿ ಮದುವೆ ಯಾವಾಗ?, ಇವರ ಪ್ರೇಮ್ ಕಹಾನಿ ಏನು ಎನ್ನುವ ಬಗ್ಗೆ ಮುಂದೆ ಓದಿ....

ಅದ್ದೂರಿಯಾಗಿ ನಡೆದ ಮೆಹೆಂದಿ ಶಾಸ್ತ್ರ!

ಅದ್ದೂರಿಯಾಗಿ ನಡೆದ ಮೆಹೆಂದಿ ಶಾಸ್ತ್ರ!

ಫರ್ಹಾನ್ ಅಖ್ತರ್ ಮತ್ತು ಶಿಬಾನಿ ಮದುವೆಯ ಮೆಹೆಂದಿ ಸಮಾರಂಭ ಮುಂಬೈನಲ್ಲಿ ಗುರುವಾರ (17-2-2022)ನಡೆದಿದೆ. ವಿವಾಹ ಮಹೋತ್ಸವದ ಶುಭ ಕಾರ್ಯಗಳು ಈಗಾಗಲೇ ಪ್ರಾರಂಭ ಆಗಿವೆ.‍ ಮುಂಬೈನಲ್ಲಿರುವ ಫರಾನ್ ಅಖ್ತರ್ ಮನೆಯಲ್ಲೇ ಸಮಾರಂಭ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಶಬಾನಾ ಅಜ್ಮಿ, ಶಿಬಾನಿ ಅವರ ಸಹೋದರಿ ಅನುಷಾ ದಾಂಡೇಕರ್, ರಿಯಾ ಚಕ್ರವರ್ತಿ ಮತ್ತು ಅಮೃತಾ ಅರೋರಾ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.

ಸಂಗೀತ ಕಾರ್ಯಕ್ರಮದಲ್ಲಿ ಕುಣಿದ ಜೋಡಿ!

ಸಂಗೀತ ಕಾರ್ಯಕ್ರಮದಲ್ಲಿ ಕುಣಿದ ಜೋಡಿ!

ಇನ್ನು ಮೆಹೆಂದಿ ಜೊತೆಗೆ ಸಂಗೀತ್ ಕಾರ್ಯಕ್ರಮ ಕೂಡ ನೆರನೇರಿದೆ. ಈ ಸಮಾರಂಭಕ್ಕೆ ಶಿಬಾನಿ, ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ವೇಳೆ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಶಿಬಾನಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ. ಸಿಂಬಾ ಚಿತ್ರದ 'ಆಂಖ್ ಮೇರಿ' ಹಾಡು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ 'ಮೆಹೆಂದಿ ಲಗಾ ಕೆ ರಖನಾ' ಹಾಡಿಗೆ ಅನುಷಾ ದಾಂಡೇಕರ್ ಮತ್ತು ರಿಯಾ ಚಕ್ರವರ್ತಿ ಅವರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಫೆಬ್ರವರಿ 21ಕ್ಕೆ ಫರ್ಹಾನ್ ಅಖ್ತರ್, ಶಿಬಾನಿ ಮದುವೆ!

ಫೆಬ್ರವರಿ 21ಕ್ಕೆ ಫರ್ಹಾನ್ ಅಖ್ತರ್, ಶಿಬಾನಿ ಮದುವೆ!

ಮಾಹಿತಿಯ ಪ್ರಕಾರ ಫರ್ಹಾನ್ ಮತ್ತು ಶಿಬಾನಿ ಫೆಬ್ರವರಿ 21 ಮದುವೆ ಅಗಲಿದ್ದಾರೆ. ಕಾನೂನಾತ್ಮಕವಾಗಿ ಮದುವೆ ಆಗಿದ್ದಾರೆ ಎಂದು ವರದಿ ಆಗಿದೆ. ಫರ್ಹಾನ್ ಅಖ್ತರ್ ಮತ್ತು ಸಿಬಾನಿ ಸತತ ಮೂರು ವರ್ಷಗಳಿಂದ ಪ್ರೀತಿಯಲ್ಲಿ ಇದ್ದಾರೆ. ಈಗ ಮದುವೆ ಅಗುತ್ತಿದ್ದು, ಕೊರೊನಾ ಕಾರಣಕ್ಕೆ ಮದುವೆ ಸಂಭ್ರವನ್ನು ಚಿಕ್ಕದಾಗಿ ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ ಕುಟುಂಬಸ್ಥರು. ಹಾಗಾಗಿ ಮದುವೆ ಕಾರ್ಯಕ್ರಮಗಳನ್ನು ಕೂಡ ಕಡಿಮೆ ಜನರ ಸಮ್ಮುಖದಲ್ಲಿ ಮಾಡಲಾಗುತ್ತಿದೆಂತೆ.

ಇದು ಫರ್ಹಾನ್ ಅಖ್ತರ್ ಎರಡನೇ ಮದುವೆ!

ಇದು ಫರ್ಹಾನ್ ಅಖ್ತರ್ ಎರಡನೇ ಮದುವೆ!

ನಟ, ನಿರ್ದೇಶಕ ಫರ್ಹಾನ್ ಅಖ್ತರ್‌ಗೆ ಇದು ಎರಡನೇ ಮದುವೆ. ಶಿಬಾನಿಗೂ ಮೊದಲು ಫರ್ಹಾನ್ ಅಧುನಾ ಬಬಾನಿ ಜೊತೆಗೆ ಮದುವೆ ಆಗಿದ್ದರು. 2000ರಲ್ಲಿ ಫರಾನ್ ಮೊದಲ ಮದುವೆ ಆಗಿದ್ದರು. ನಂತರ ಅವರು 2017ರಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ನಂತರ 2018 ರಿಂದ ಶಿಬಾನಿ ಜೊತೆಗೆ ಪ್ರೀತಿಯಲ್ಲಿ ಇದ್ದಾರೆ ಫರ್ಹಾನ್. ಈಗ ಕಿರುತೆರೆ ನಟಿ ಶಿಬಾನಿಯನ್ನು ವಿವಾಹ ಆಗುತ್ತಿದ್ದಾರೆ. ಈ ಜೋಡಿ ತಮ್ಮ ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುತ್ತಲಿತ್ತು.

More from Filmibeat

English summary
Farhan Akhtar, Shibani Wedding Celebration Start, Celebrities In Mehendi and Sangeeth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X