twitter
    For Quick Alerts
    ALLOW NOTIFICATIONS  
    For Daily Alerts

    ದೀಪಾವಳಿ ಆಚರಿಸಿದ ಫರ್ಹಾನ್ ಅಖ್ತರ್ ವಿರುದ್ಧ ವಿಷ ಕಾರಿದ ನೆಟ್ಟಿಗರು

    |

    ಸಾಮಾಜಿಕ ಜಾಲತಾಣ ಬಂದ ಬಳಿಕ ಯಾವ ಸೆಲೆಬ್ರಿಟಿಗಳು ಮೂದಲಿಕೆಗಳಿಂದ, ಟ್ರೋಲ್‌ಗಳಿಂದ ತಪ್ಪಿಸಿಕೊಂಡಿಲ್ಲ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಂತೂ ಪ್ರತಿದಿನವೂ ಟ್ರೋಲ್ ದಾಳಿ ಎದುರಿಸುತ್ತಿದ್ದಾರೆ. ನಟ-ನಟಿಯರು ಏನು ಮಾಡಿದರು ಅದರಲ್ಲಿ ತಪ್ಪು ಹುಡುಕಿ ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡುವ ದೊಡ್ಡ ಗುಂಪೇ ಸಾಮಾಜಿಕ ಜಾಲತಾಣದಲ್ಲಿದೆ.

    ಇದೀಗ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ದೀಪಾವಳಿ ಹಬ್ಬ ಆಚರಿಸಿರುವುದು ಹಲವು ನೆಟ್ಟಿಗರ ಕಣ್ಣು ಕೆಂಪಗೆ ಮಾಡದೆ. ಫರ್ಹಾನ್ ಸರ್ವಧರ್ಮ ಪ್ರೇಮವನ್ನು ಕೆಲವು ಕೆಟ್ಟ ಭಾಷೆಯಲ್ಲಿ ಟೀಕಿಸಿದ್ದಾರೆ.

    ಎರಡು ದಿನದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಫರ್ಹಾನ್ ಅಖ್ತರ್ ಹಂಚಿಕೊಂಡಿದ್ದರು. ಚಿತ್ರದಲ್ಲಿ ಫರ್ಹಾನ್ ಅಖ್ತರ್ ಹಣೆಗೆ ಬೊಟ್ಟು ಇಟ್ಟುಕೊಂಡು ಪೂಜೆಯೊಂದರಲ್ಲಿ ಭಾಗಿಯಾಗಿದ್ದರು. ತಮ್ಮ ಪಕ್ಕದಲ್ಲಿ ಕುಳಿತಿರುವ ಮಹಿಳೆಯ ಹಣೆಗೆ ಕುಂಕುಮ ಇಡುತ್ತಿದ್ದಾರೆ. ಈಕೆ ಫರ್ಹಾನ್‌ರ ಗರ್ಲ್‌ಫ್ರೆಂಡ್ ವಿಜೆ ಶಿಬಾನಿ ಎನ್ನಲಾಗುತ್ತಿದೆ.

    Farhan Akhtar Trolled For Celebrating Deepavali

    ಫರ್ಹಾನ್‌ ಅಖ್ತರ್‌ ಹಂಚಿಕೊಂಡಿರುವ ಈ ಚಿತ್ರಕ್ಕೆ ಹಲವರು ಋಣಾತ್ಮಕ ಕಮೆಂಟ್‌ಗಳನ್ನು ಮಾಡಿದ್ದಾರೆ. ''ನೀನು ನಿಜಕ್ಕೂ ಮುಸ್ಲಿಂ ಏನಾ?'' ಎಂದು ಫರ್ಹಾನ್ ಅಖ್ತರ್ ಅನ್ನು ಪ್ರಶ್ನೆ ಮಾಡಿದ್ದಾರೆ. ''ಒಬ್ಬ ಮುಸಲ್ಮಾನನಾಗಿ ಹೀಗೆ ಮಾಡಲು ನಾಚಿಕೆಯಾಗುವುದಿಲ್ಲವೇ?'' ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.

    ''ನಿನ್ನ ತಂದೆ ನೋಡಿದರೆ ಯಾವ ಧರ್ಮದಲ್ಲೂ ನಂಬಿಕೆ ಇರಿಸೊಲ್ಲ, ನೀನು ನೋಡಿದರೆ ಹೀಗೆ ಡ್ರಾಮಾ ಮಾಡುತ್ತಿದ್ದೀಯ'' ಎಂದು ಫರ್ಹಾನ್ ಅಖ್ತರ್‌ರ ತಂದೆ ಜಾವೇದ್ ಅಖ್ತರ್ ಅನ್ನು ಟೀಕಿಸಿದ್ದಾರೆ. ಇನ್ನು ಕೆಲವರು, ''ನಿನ್ನ ಧರ್ಮದವರೇ ನಿನ್ನನ್ನು ಟೀಕಿಸುತ್ತಿದ್ದಾರೆ. ಹಿಂದು ಧರ್ಮಕ್ಕೆ ಬಂದುಬಿಡು'' ಎಂದಿದ್ದಾರೆ. ''ಹಿಂದು ಧರ್ಮಕ್ಕೆ ಅಪಚಾರ ಮಾಡಲೆಂದೇ ಫರ್ಹಾನ್ ಹಬ್ಬ ಆಚರಣೆ ಮಾಡುತ್ತಿದ್ದಾನೆ'' ಎಂದು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.

    ಫರ್ಹಾನ್ ಆಖ್ತರ್, ಜನಪ್ರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರ ಪುತ್ರ. ಜಾವೇದ್ ಅಖ್ತರ್ ಸ್ವತಃ ಧರ್ಮಗಳಲ್ಲಿ ವಿಶ್ವಾಸವಿರಿಸಿಲ್ಲ. ಅವರು ಯಾವ ಧರ್ಮವನ್ನೂ ಪಾಲಿಸುವುದಿಲ್ಲ. ಫರ್ಹಾನ್ ಅಖ್ತರ್ ಸಹ ಯಾವ ಧರ್ಮವನ್ನೂ ಪಾಲಿಸುವುದಿಲ್ಲ. ಆದರೆ ಎಲ್ಲ ಧರ್ಮದ ಹಬ್ಬಗಳನ್ನು ಆಚರಣೆ ಮಾಡುತ್ತಾರೆ.

    ಫರ್ಹಾನ್ ಅಖ್ತರ್ ನಟನೆಯ 'ತೂಫಾನ್' ಸಿನಿಮಾ ಕೆಲವು ತಿಂಗಳ ಹಿಂದೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಇದೀಗ ಹಾಲಿವುಡ್ ಸಿನಿಮಾ 'ಮಿಸ್ಟರ್ ಮಾರ್ವೆಲ್'ನಲ್ಲಿ ಫರ್ಹಾನ್ ಅಖ್ತರ್ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಯುದ್ರ', 'ಫೈರ್', 'ಶರ್ಮಾಜಿ ಕಿ ನಮ್ಕೀನ್' ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. 'ಜೀ ಲೇ ಜರಾ' ಹೆಸರಿನ ಸಿನಿಮಾ ನಿರ್ದೇಶನ ಸಹ ಮಾಡುತ್ತಿದ್ದಾರೆ.

    English summary
    Actor, director Farhan Akhtar trolled on social media for celebrating Deepavali. Farhan Akhtar did not believe in any religion.
    Friday, November 5, 2021, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X