3ನೇ ಮದುವೆಯಾಗಿ ಆಸ್ಪ್ರೇಲಿಯಾಗೆ ತೆರಳಿದ ಆಮಿರ್ ಖಾನ್‌ಗೆ ಸಂಕಷ್ಟ; ಫತ್ವಾ ಹೊರಡಿಸಿದ ಧರ್ಮಗುರು
ಇದೇ ತಿಂಗಳ ಆರಂಭದಲ್ಲಿ (ಜುಲೈ 5) ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ 3ನೇ ಮದುವೆಯಾಗಿದ್ದರು. ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ವಿಶೇಷ ಕಾಯ್ದೆಯಡಿ ಆಪ್ತರ ಸಮ್ಮುಖದಲ್ಲಿಯೇ ಮೂರನೇ ವಿವಾಹವಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರಿಗೆ ಟೀಕೆಯ ಜೊತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಈ ಮದುವೆಯನ್ನು ಲವ್ ಜಿಹಾದ್ ಎಂದು ಬಣ್ಣಿಸಲಾಗಿತ್ತು. ಈಗ ಆಮಿರ್ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಗೌರಿಯೊಂದಿಗೆ 3ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟ ಆಮಿರ್ ಖಾನ್ ಸದ್ಯ ಹನಿಮೂನ್‌ಗೆಂದು ಆಸ್ಟ್ರೇಲಿಯಾಗೆ ಹಾರಿದ್ದಾರೆ. ಇದೇ ವೇಳೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. 2ನೇ ಮದುವೆಯಂತೆಯೇ 3ನೇಯ ಮದುವೆ ಕೂಡ ವಿವಾದಕ್ಕೆ ಸಿಕ್ಕಿಕೊಂಡಿದೆ. ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾದ ಶಾಹಿಯ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಈ ಮದುವೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ನಟನ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

3ನೇ ಮದುವೆ ಆಗಿರೋ ಆಮಿರ್ ಖಾನ್ ಶರಿಯತ್ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಮದುವೆ ಬಳಿಕ ಪತ್ನಿಯೊಂದಿಗೆ ಆಸ್ಟ್ರೇಲಿಯಾಗೆ ಹನಿಮೂನ್‌ಗೆಂದು ತೆರಳಿರೋ ಆಮಿರ್ ಖಾನ್‌ಗೆ ನೆಮ್ಮದಿ ಇಲ್ಲದಂತಾಗಿದೆ. ಸದ್ಯ ಮೌಲಾನಾ ಇಬ್ರಾಹಿಂ ಹುಸೇನ್ ಅವರ ಹೇಳಿಕೆ ವ್ಯಾಪಕವಾಗಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಶರಿಯತ್ ಕಾನೂನಿನ ಪ್ರಕಾರ, ಮುಸ್ಲಿಂ ಪುರುಷನು ಮುಸ್ಲಿಮೇತರ ಮಹಿಳೆಯನ್ನು ಮದುವೆ ಆಗುವುದಕ್ಕೂ ಮುನ್ನ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು. ಒಂದು ವೇಳೆ ಆ ಮಹಿಳೆ ಇಸ್ಲಾಂ ಧರ್ಮವನ್ನು ಸ್ವೀಕರಿಸದ ಹೊರತು ಮದುವೆಯಾಗುವಂತಿಲ್ಲ. ಆದರೆ, ಗೌರಿ ಸ್ಪ್ರ್ಯಾಟ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಲ್ಲ. ಹೀಗಾಗಿ ಇದು ಶರಿಯತ್ ಕಾನೂನಿನ ಉಲ್ಲಂಘನೆಯಾಗಿದ್ದು, ಶರಿಯತ್ ಪ್ರಕಾರ ಆಮಿರ್ ಖಾನ್ ಪಾಪಿಯಾಗುತ್ತಾನೆ ಎಂದು ಮೌಲಾನಾ ಹೇಳಿಕೆ ನೀಡಿದ್ದಾರೆ.


Click it and Unblock the Notifications