Fighter Box office Day 2: ಮೊದಲ ದಿನ 24 ಕೋಟಿ.. 2ನೇ ದಿನ 'ಫೈಟರ್' ಗಳಿಸಿದ್ದೆಷ್ಟು?
2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಫೈಟರ್' ಜನವರಿ 25ಕ್ಕೆ ರಿಲೀಸ್ ಆಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗಿತ್ತು. ಮೊದಲ ದಿನ ಸಿನಿಮಾಗೆ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸೂಪರ್‌ಸ್ಟಾರ್‌ಗಳೇ ಇರುವ ಸಿನಿಮಾ ಮೊದಲ ದಿನ ಕೇವಲ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದಕ್ಕೆ ಟ್ರೇಡ್ ಎಕ್ಸ್‌ಪರ್ಟ್ಸ್ ಅವರೇಜ್ ಅಂತ ಲೆಕ್ಕ ಕೊಟ್ಟಿದ್ದರು.
ಮೊದಲ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಕಡಿಮೆ ಆಗಿದ್ದರೂ, ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಪಿಕಪ್ ಆಗಿದೆ. ನಿನ್ನೆ (ಜನವರಿ 26) 'ಫೈಟರ್' ಸಿನಿಮಾದ ಗಳಿಕೆಯಲ್ಲಿ ಏರಿಕೆ ಕಂಡಿದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಕಾಂಬಿನೇಷನ್ ಬಿಗ್ ಸ್ಕ್ರೀನ್ ಮೇಲೆ ವರ್ಕ್‌ಔಟ್ ಆಗಿದೆ. ಆಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

ಗಣರಾಜ್ಯೋತ್ಸವ ಹಿನ್ನೆಲೆ ರಜೆ ಇದ್ದಿದ್ದರಿಂದ 'ಫೈಟರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿದೆ. ಈ ಮೂಲಕ ಈ ವಾರಾಂತ್ಯದಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಅನ್ನು ಆರಾಮಾಗಿ ಸೇರಲಿದೆ. ಹಾಗಿದ್ದರೆ, ಎರಡನೇ ದಿನದ ಕಲೆಕ್ಷನ್ ಎಷ್ಟು? ವಿಶ್ವದಾದ್ಯಂತ ಸಿನಿಮಾದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ವಾರ್', 'ಪಠಾಣ್' ಅಂತಹ ಮೆಗಾ ಸಕ್ಸಸ್ ಕೊಟ್ಟ ನಿರ್ದೇಶಕ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳಿದ ಸಿನಿಮಾ 'ಫೈಟರ್'. ಹೀಗಾಗಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಜೊತೆಗೆ ನಿರ್ದೇಶಕರನ್ನೂ ಗಮನದಲ್ಲಿಟ್ಟುಕೊಂಡು ಮೊದಲ ದಿನದ ಕಲೆಕ್ಷನ್ ಲೆಕ್ಕಚಾರ ಹಾಕಲಾಗಿತ್ತು. ಆದರೆ, ಅದು ತಲೆಕೆಳಗಾಗಿತ್ತು. ಆದ್ರೀಗ ಎರಡನೇ ದಿನದಲ್ಲಿ ಏರಿಕೆ ಕಂಡಿದೆ. 'ಫೈಟರ್' ಎರಡನೇ ದಿನದಲ್ಲಿ ಸುಮಾರು 39 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಒಪ್ಪಿಸಿದ್ದಾರೆ.

'ಫೈಟರ್' ಮೊದಲ 24 ಕೋಟಿ ರೂಪಾಯಿ ಗಳಿಸಿದ್ದರೆ, ಎರಡನೇ ದಿನ 39 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಸುಮಾರು 63 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದು ಅಂದಾಜಿನ ಪ್ರಕಾರ, ಈ ವೀಕೆಂಡ್ ಬಳಿಕ 'ಫೈಟರ್' ಸಿನಿಮಾ ಸುಮಾರು 120 ರಿಂದ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಹೇಳಲಾಗುತ್ತಿದೆ.
ಈ ಸಿನಿಮಾವನ್ನು ವಾಯುಸೇನೆಗೆ ಅರ್ಪಣೆ ಮಾಡಿದೆ. ಯುದ್ಧದ ಸಂದರ್ಭದಲ್ಲಿ ವಾಯುಸೇನೆಯ ಪಾತ್ರವನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಹೀಗಾಗಿ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದಿದ್ದರು.
'ಫೈಟರ್' ಹೃತಿಕ್ ರೋಷನ್ ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಹೃತಿಕ್ ನಟಿಸಿದ ಸಿನಿಮಾಗಳಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಪಟ್ಟಿಯಲ್ಲಿ ಇದೂವರೆಗೂ 'ವಾರ್' ಇದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಈ ಸಿನಿಮಾ ಓಪನಿಂಗ್ ಡೇ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 'ಫೈಟರ್' ವೀಕೆಂಡ್‌ನಲ್ಲಿ ಹೆಜ್ಜೆ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











