100 ಕೋಟಿ ಕ್ಲಬ್ ಸೇರಿದ ದೀಪಿಕಾ ಪಡುಕೋಣೆಯ 9ನೇ ಸಿನಿಮಾ; 4ನೇ ದಿನದ 'ಫೈಟರ್' ಕಲೆಕ್ಷನ್ ಎಷ್ಟು?
ಬಾಲಿವುಡ್‌ನ ದುಬಾರಿ ಸಿನಿಮಾ 'ಫೈಟರ್' ರಿಲೀಸ್ ಆಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಬಾಲಿವುಡ್ ದಿಗ್ಗಜರ ಈ ಸಿನಿಮಾ ಕಳೆದ ನಾಲ್ಕು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿದೆ. ಆದರೆ, ನಿರೀಕ್ಷೆ ಮಾಡಿದ್ದಷ್ಟು ಕಲೆಕ್ಷನ್ ಮಾಡಿಲ್ಲ. ಇದು ಬಾಲಿವುಡ್ ಮಂದಿಗೆ ಲೆಕ್ಕ ಸಿಗುತ್ತಿಲ್ಲ.
ಬಾಲಿವುಡ್ ದಿಗ್ಗಜರೇ ಸೇರಿ ಮಾಡಿರುವ 'ಫೈಟರ್' ಸಿನಿಮಾಗೆ ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಲೆಕ್ಕಚಾರದ ಪ್ರಕಾರ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಜೆಯ ದಿನಗಳಲ್ಲೂ ದೊಡ್ಡ ಚಮತ್ಕಾರ ಮಾಡಿಲ್ಲ. ಹಾಗಂತ ಕಲೆಕ್ಷನ್‌ನಲ್ಲೂ ಹಿಂದೆ ಬಿದ್ದಿಲ್ಲ. ಈ ನಾಲ್ಕು ದಿನಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಈ ಹಿಂದೆ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅದನ್ನು ಮುಂದಿಟ್ಟುಕೊಂಡು ನೋಡುವುದಾದರೆ, 'ಫೈಟರ್' ಕಮ್ಮಿ ಅಂದರೂ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಹೃತಿಕ್ ರೋಷನ್, ದೀಪಿಕಾ ಪಡುಕೋಣೆಯಂತಹ ಸ್ಟಾರ್ ನಟರು ಇದ್ಮೇಲೆ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಬೇಕಿತ್ತು ಅನ್ನೋದ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.
ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆಯ 'ಫೈಟರ್' ಸಿನಿಮಾ ನಾಲ್ಕನೇ ದಿನ (ಜನವರಿ 28) 28.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಚ್ಚರಿ ಪಡುವ ಸಂಗತಿ ಏನಂದ್ರೆ, 'ಫೈಟರ್'ಗೆ ಚೆನ್ನೈನಲ್ಲಿ ಉತ್ತರ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು ಶೇ.63.75ರಷ್ಟು ಥಿಯೇಟರ್‌ಗಳೂ ಫುಲ್ ಆಗಿವೆ. ಈ ಮೂಲಕ ಉತ್ತರ ಭಾರತದ ನಗರಗಳಿಗಿಂತ ಚೆನ್ನೈನಲ್ಲಿ ಹೆಚ್ಚು ಮಂದಿ ಸಿನಿಮಾ ನೋಡಿದ್ದಾರೆ. ಅದು ಬಿಟ್ಟರೆ, ಜೈಪುರದಲ್ಲಿ ಶೇ.39ರಷ್ಟು ಸಿನಿಮಾ ವೀಕ್ಷಿಸಿದ್ದಾರೆ.
ಸಂಜೆ ಶೋಗಳಿಗೆ ಹೆಚ್ಚಾಗಿ ತುಂಬುತ್ತಿವೆ. ಈ ಕಾರಣಕ್ಕೆ 'ಫೈಟರ್' ಕಲೆಕ್ಷನ್ ದಾಖಲೆ ಬರುವ ಮಟ್ಟಿಗೆ ಆಗುತ್ತಿಲ್ಲ ಎಂಬುದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಮೊದಲ ದಿನ ಗುರುವಾರ (ಜನವರಿ 25) 24 ಕೋಟಿ ರೂಪಾಯಿ, ಶುಕ್ರವಾರ (ಜನವರಿ 26) 31.56 ಕೋಟಿ ರೂಪಾಯಿ, ಶನಿವಾರ (ಜನವರಿ 27) 27.5 ಕೋಟಿ ರೂಪಾಯಿ ಹಾಗೂ ಭಾನುವಾರ 28.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಟ್ಟು 118.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಭಾನುವಾರ ಹಿಂದಿ ಬೆಲ್ಟ್‌ನಲ್ಲಿ ಶೇ.31.56ರಷ್ಟು ಮಂದಿ ಮಾತ್ರ 'ಫೈಟರ್' ನೋಡಿದ್ದಾರೆ. ಇದು ರಜೆಯ ದಿನಗಳಲ್ಲಿ ಕೊಂಚ ಕಡಿಮೆ ಅಂತಾನೇ ಟ್ರೇಡ್ ಎಕ್ಸ್‌ಪರ್ಟ್ ಅಭಿಪ್ರಾಯ ಪಟ್ಟಿದ್ದಾರೆ. ಚೆನ್ನೈ, ಜೈಪುರ, ಮುಂಬೈ, ಕೊಲ್ಕತ್ತಾ, ಪೂನಾ, ಬೆಂಗಳೂರು, ಚಂಢೀಘಡ್, ದೆಹಲಿ, ಅಹಮದಾಬಾದ್ ಸೇರಿದಂತೆ ಹಲವೆಡೆ 'ಫೈಟರ್'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇನ್ನು ವಿಶ್ವದಾದ್ಯಂತ 'ಫೈಟರ್' ಬಾಕ್ಸಾಫೀಸ್ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದೆ. ಮೊದಲನೇ ದಿನ 36.04 ಕೋಟಿ ರೂಪಾಯಿ, 2ನೇ ದಿನ 64.57 ಕೋಟಿ ರೂಪಾಯಿ, 3ನೇ ದಿನ 56.19 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇನ್ನೂ ಮೂರನೇ ದಿನಕ್ಕೆ ವಿಶ್ವದಾದ್ಯಂತ 156.80 ಕೋಟಿ ರೂಪಾಯಿ ಕೆಲಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಂದು ವಿಶೇಷ ಅಂದರೆ, 'ಫೈಟರ್' 100 ಕೋಟಿ ಕ್ಲಬ್ ಸೇರುವ ದೀಪಿಕಾ ಪಡುಕೋಣೆಯ 9ನೇ ಸಿನಿಮಾ ಆಗಿದೆ. ಅದೇ ಇನ್ನೊಂದು ಕಡೆ ಹೃತಿಕ್ ರೋಷನ್ ಅವರ 14ನೇ ಸಿನಿಮಾ ಎನಿಸಿಕೊಂಡಿದೆ.


Click it and Unblock the Notifications











