For Quick Alerts
  ALLOW NOTIFICATIONS  
  For Daily Alerts

  ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ ಸಿನಿಸ್ಟಾರ್ಸ್

  |

  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ಮುಖರ್ಜಿ ಕೊನೆಯುಸಿರೆಳೆದಿದ್ದಾರೆ. ಭಾರತ ರತ್ನ ಪುರಸ್ಕೃತರ ಅಗಲಿಕೆ ಹಿನ್ನೆಲೆ ಕೇಂದ್ರ ಸರ್ಕಾರವೂ ಏಳು ದಿನಗಳ ಕಾಲ ದೇಶದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಇನ್ನು ಪ್ರಣಬ್ ಮುಖರ್ಜಿ ಸಾವಿಗೆ ಭಾರತೀಯ ಚಿತ್ರರಂಗ ಮರುಗಿದೆ. ಬಾಲಿವುಡ್, ಮಲಯಾಳಂ, ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...

  ಬೇರೆ ಯುಗದ ರಾಜಕಾರಣಿ

  ಬೇರೆ ಯುಗದ ರಾಜಕಾರಣಿ

  ''5 ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ವಿಶಿಷ್ಟ ರಾಜಕೀಯ ಪ್ರಯಾಣದಲ್ಲಿ ಪ್ರಣಬ್ ಮುಖರ್ಜಿ, ವಿದೇಶಿ, ರಕ್ಷಣಾ, ವಾಣಿಜ್ಯ ಮತ್ತು ಹಣಕಾಸು ಸಚಿವರಾಗಿದ್ದರು. ನಂತರ ಭಾರತದ 13ನೇ ರಾಷ್ಟ್ರಪತಿ ಆಗಿದ್ದರು. ಅವರು ಬೇರೆ ಯುಗದ ರಾಜಕಾರಣಿ. ರಾಜಕೀಯವೇ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ'' ಎಂದು ತಮಿಳು ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

  ಮಾಜಿ ರಾಷ್ಟ್ರಪತಿ, ಪ್ರಣಬ್ ಮುಖರ್ಜಿ ವಿಧಿವಶ

  ಪ್ರಣಬ್ ಜೀ ಕೊಡುಗೆಯನ್ನು ದೇಶ ಸ್ಮರಿಸುತ್ತದೆ

  ಪ್ರಣಬ್ ಜೀ ಕೊಡುಗೆಯನ್ನು ದೇಶ ಸ್ಮರಿಸುತ್ತದೆ

  'ಪ್ರಣಬ್ ಜಿ ಅವರ ಕೊಡುಗೆಗಳನ್ನು ಭಾರತ ದೇಶವೂ ಯಾವಾಗಲೂ ನೆನಪಿಸಿಕೊಳ್ಳುತ್ತದೆ' ಎಂದು ಮಲಯಾಳಂ ನಟ ಮೋಹನ್ ಲಾಲ್ ಸಂತಾಪ ಸೂಚಿಸಿದ್ದಾರೆ.

  ಒಬ್ಬ ಮುತ್ಸದ್ದಿ ರಾಜಕಾರಣಿ

  ಒಬ್ಬ ಮುತ್ಸದ್ದಿ ರಾಜಕಾರಣಿ

  ''ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಒಬ್ಬ ಮುತ್ಸದ್ದಿ ಮಾತ್ರವಲ್ಲದೆ ಅನುಕರಣೀಯ ವ್ಯಕ್ತಿತ್ವವನ್ನೂ ಹೊಂದಿದ್ದರು. ಅವರ ಆ ವ್ಯಕ್ತಿತ್ವದ ನೆನಪೇ ಅವರ ಅಗಲಿಕೆ ನೋವು ತಂದಿದೆ. ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ'' ಎಂದು ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಟ್ವೀಟ್ ಮಾಡಿದ್ದಾರೆ.

  Profile: ಕಾಳಿ ದೇವಿ ಉಪಾಸಕ, ಕಾಂಗ್ರೆಸ್ ಕಟ್ಟಾಳು ಪ್ರಣಬ್ ದಾದಾ

  ನಮ್ಮ ಅತ್ಯುತ್ತಮ ನೆನಪುಗಳಲ್ಲಿ ಒಬ್ಬರು

  ನಮ್ಮ ಅತ್ಯುತ್ತಮ ನೆನಪುಗಳಲ್ಲಿ ಒಬ್ಬರು

  ''ಎಂತಹ ಆಘಾತಕಾರಿ ಸುದ್ದಿ, ನಮ್ಮ ಅತ್ಯುತ್ತಮ ನೆನಪುಗಳಲ್ಲಿ ಪ್ರಣಬ್ ಮುಖರ್ಜಿ ಒಬ್ಬರು ಹಾಗೂ ಸಂಪೂರ್ಣ ಸಂಭಾವಿತ ವ್ಯಕ್ತಿಯಾಗಿದ್ದರು'' ಎಂದು ಬಾಲಿವುಡ್ ನಟಿ ಕಂಗನಾ ಸಂತಾಪ ಸೂಚಿಸಿದ್ದಾರೆ.

  ಸಂತಾಪ ಸೂಚಿಸಿದ ಪರಿಣಿತಿ

  ಸಂತಾಪ ಸೂಚಿಸಿದ ಪರಿಣಿತಿ

  ಮಾಜಿ ರಾಷ್ಟ್ರಪತಿ ಪ್ರಣ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಹಂಚಿಕೊಂಡಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ''ಅವರ ಆತ್ಮಕ್ಕೆ ಶಾಂತಿ'' ಕೋರಿದ್ದಾರೆ.

  ಒಬ್ಬ ಶ್ರೇಷ್ಠ ರಾಜಕಾರಣಿ

  ಒಬ್ಬ ಶ್ರೇಷ್ಠ ರಾಜಕಾರಣಿ

  ''ಒಬ್ಬ ಶ್ರೇಷ್ಠ ರಾಜಕಾರಣಿ. ನಮ್ಮ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿ ಅವರ ಅಗಲಿಕೆಯಿಂದ ದುಃಖಿಸುತ್ತಿರುವ ಸ್ನೇಹಿತರು ಮತ್ತು ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟಿ ಮಾಧುರಿ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

  English summary
  Mohanlal, kamal haasan, kangana ranaut condolences to Former President Pranab Mukherjee death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X