ಬಾಲಿವುಡ್ ಅಂಗಳದಲ್ಲಿ ಫಿಲ್ಮ್ ಫೇರ್ ಸಂಭ್ರಮ: ಪ್ರಶಸ್ತಿ ಪಡೆದವರ ಫುಲ್ ಲಿಸ್ಟ್ ಇಲ್ಲಿದೆ!
ಬಾಲಿವುಡ್‌ನಲ್ಲಿ ಅವಾರ್ಡ್ ಕಾರ್ಯಕ್ರಮಗಳ ಸೀಸನ್ ಆರಂಭ ಆಗಿದೆ. ಅದರಲ್ಲೂ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ನಿನ್ನೆ(ಏಪ್ರಿಲ್ 28) ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸಲ್ಮಾನ್ ಖಾನ್.
ಸಲ್ಮಾನ್ ಖಾನ್ ನಡೆಸಿಕೊಟ್ಟ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿ 'ಗಂಗೂಬಾಯಿ ಕಾಠಿಯಾವಾಡಿ' ಹಾಗೂ 'ಬದಾಯಿ ದೊ' ಸಿನಿಮಾಗಳು ಅತೀ ಹೆಚ್ಚು ಪ್ರಶಸ್ತಿಯನ್ನು ಬಾಚಿಕೊಂಡಿವೆ.

ಆಲಿಯಾ ಭಟ್ ಅತ್ಯುತ್ತಮ ನಟಿ, ರಾಜ್‌ಕುಮಾರ್ ರಾವ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇತ್ತ ಟಬು ಹಾಗೂ ಭೂಮಿ ಪಡ್ನೇಕರ್ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೇ ಸಂಜಯ್ ಮಿಶ್ರಾ ಅತ್ಯುತ್ತಮ ನಟ (ಕ್ರಿಟಿಕ್ಸ್) ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಜೀವನಮಾನ ಸಾಧನೆ ಪ್ರಶಸ್ತಿ ಪ್ರೇಮ್ ಚೋಪ್ರಾಗೆ ಸಿಕ್ಕಿದೆ. ಉಳಿದಂತೆ ಯಾರಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿದೆ ಅನ್ನೋ ಸಂಪೂರ್ಣ ಪಟ್ಟಿ ಇಲ್ಲಿದೆ.
68ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ
| ಅತ್ಯುತ್ತಮ ಸಿನಿಮಾ | ಗಂಗೂಬಾಯಿ ಕಾಠಿಯಾವಾಡಿ |
| ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್) | ಬದಾಯಿ ದೊ |
| ಅತ್ಯುತ್ತಮ ನಟ | ರಾಜ್‌ಕುಮಾರ್ ರಾವ್ (ಬದಾಯಿ ದೊ) |
| ಅತ್ಯುತ್ತಮ ನಟಿ | ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ) |
| ಅತ್ಯುತ್ತಮ ನಟ(ಕ್ರಿಟಿಕ್ಸ್) | ಸಂಜಯ್ ಮಿಶ್ರಾ (ವಧ್) |
| ಅತ್ಯುತ್ತಮ ನಟಿ(ಕ್ರಿಟಿಕ್ಸ್) | ಭೂಮಿ ಪಡ್ನೇಕರ್ (ಬದಾಯಿ ದೊ),ಟಬು (ಭೂಲ್ ಭುಲಯ್ಯ 2) |
| ಅತ್ಯುತ್ತಮ ನಿರ್ದೇಶಕ | ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಾಠಿಯಾವಾಡಿ) |
| ಅತ್ಯುತ್ತಮ ಪೋಷಕ ನಟ | ಅನಿಲ್ ಕಪೂರ್ (ಜುಗ್ ಜುಗ್ ಜಿಯೋ) |
| ಅತ್ಯುತ್ತಮ ಪೋಷಕ ನಟಿ | ಶೀಬಾ ಚಡ್ಡಾ (ಬದಾಯಿ ದೊ) |
| ಅತ್ಯುತ್ತಮ ಸಂಗೀತ | ಪ್ರೀತಂ (ಬ್ರಹ್ಮಾಸ್ತ್ರ 1) |
| ಅತ್ಯುತ್ತಮ ಡೈಲಾಗ್ | ಪ್ರಕಾಶ್ ಕಪಾಡಿಯಾ & ಉತ್ಕರ್ಷಿನಿ ವಸಿಷ್ಠ (ಗಂಗೂಬಾಯಿ ಕಾಠಿಯಾವಾಡಿ) |
| ಅತ್ಯುತ್ತಮ ಚಿತ್ರಕಥೆ | ಅಕ್ಷತ್ ಗಿಲ್ಡಿಯಾಲ್, ಸುಮನ್ ಅಧಿಕಾರಿ & ಹರ್ಷವರ್ಧನ್ ಕುಲ್ಕರ್ಣಿ (ಬದಾಯಿ ದೊ) |
| ಅತ್ಯುತ್ತಮ ಡೆಬ್ಯೂ ನಟ | ಅಂಕುಶ್ ಗೆಡಂ (ಜುಂಡ್) |
| ಅತ್ಯುತ್ತಮ ಡೆಬ್ಯೂ ನಟಿ | ಆಂಡ್ರಿಯಾ ಕೆವಿಚುಸಾ (ಅನೆಕ್) |
| ಅತ್ಯುತ್ತಮ ಡೆಬ್ಯೂ ನಿರ್ದೇಶಕ | ಜಸ್ಪಾಲ್ ಸಿಂಗ್ ಸಂಧು & ರಾಜೀವ್ ಬರ್ನ್‌ವಾಲ್ (ವಧ್) |
| ಅತ್ಯುತ್ತಮ ಸಾಹಿತ್ಯ | ಅಮಿತ್ ಭಟ್ಟಾಚಾರ್ಯ (ಕೇಸರಿಯಾ, ಬ್ರಹ್ಮಾಸ್ತ್ರ 1) |
| ಅತ್ಯುತ್ತಮ ಗಾಯಕ | ಅರಿಜಿತ್ ಸಿಂಗ್ (ಕೇಸರಿಯಾ, ಬ್ರಹ್ಮಾಸ್ತ್) |
| ಅತ್ಯುತ್ತಮ ಗಾಯಕಿ | ರಂಗೀಸಾರಿ (ಜುಗ್ ಜುಗ್ ಜಿಯೋ) |
| ಅತ್ಯುತ್ತಮ ಅತ್ಯುತ್ತಮ ವಿಎಫ್‌ಎಕ್ಸ್ | DNEG & ರಿಡಿಫೈನ್ (ಬ್ರಹ್ಮಾಸ್ತ್ರ 1) |
| ಅತ್ಯುತ್ತಮ ಸಂಕಲನ | ನಿನಾದ್ ಖಾನೋಲ್ಕರ್ (ಆಕ್ಷನ್ ಹೀರೋ) |
| ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ | ಶೀತಲ್ ಶರ್ಮಾ (ಗಂಗೂಬಾಯಿ ಕಾಠಿಯಾವಾಡಿ) |
| ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ | ಸುಬ್ರತಾ ಚಟರ್ಜಿ (ಬ್ರಹ್ಮಾಸ್ತ್ರ 1) |
| ಅತ್ಯುತ್ತಮ ಸೌಂಡ್ ಡಿಸೈನ್ | ಬಿಸ್ವದೀಪ್ ದೀಪಕ್ ಚಟರ್ಜಿ (ಬ್ರಹ್ಮಾಸ್ತ್ರ) |
| ಅತ್ಯುತ್ತಮ ಬ್ಯಾಕ್‌ಗ್ರೌಂಡ್ ಸ್ಕೋರ್ | ಸಂಚಿತ್ ಬಲ್ಹರಾ ಮತ್ತು ಅಂಕಿತ್ ಬಲ್ಹಾರ (ಗಂಗೂಬಾಯಿ ಕಾಠಿಯಾವಾಡಿ) |
| ಅತ್ಯುತ್ತಮ ಸಾಹಸ | ಪರ್ವೇಜ್ ಶೇಕ್ ವಿಕ್ರಮ್ ವೇದ |
| ಜೀವಮಾನ ಸಾಧನೆ | ಹಿರಿಯ ನಟ ಪ್ರೇಮ್ ಚೋಪ್ರಾ |
| ಆರ್‌ಡಿ ಬರ್ಮನ್ ಅವಾರ್ಡ್ | ಜಾಹ್ನವಿ ಶ್ರೀಮಾನ್ಕರ್ (ಧೋಲಿಯಾ ಗಂಗೂಬಾಯಿ ಕಾಠಿಯಾವಾಡಿ) |


Click it and Unblock the Notifications











