Filmfare Awards 2024: ಜವಾನ್, ಅನಿಮಲ್, ಸ್ಯಾಮ್ ಬಹದ್ದೂರ್‌ಗೆ ಹೆಚ್ಚು ಪ್ರಶಸ್ತಿ
ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಆರಂಭ ಆಗಿದೆ. 2024ನೇ ಸಾಲಿನ 69ನೇ ಫಿಲ್ಮ್‌ಫೇರ್ ಪ್ರಶಸ್ತಿ ಎರಡು ದಿನಗಳ ಕಾಲ ನಡೆಯುತ್ತಿದೆ. ನಿನ್ನೆ (ಜನವರಿ 27)ರಂದು ಮೊದಲ ದಿನ ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಗುಜರಾತಿನ ಪ್ರವಾಸೋದ್ಯಮ ಇಲಾಖೆ ಜೊತೆ ಸೇರಿಕೊಂಡು 2024ರ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಆರಂಭ ಆಗಿದೆ. ಮೊದಲ ದಿನ ತಾಂತ್ರಿಕ ವಿಭಾಗದ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಮೊದಲ ದಿನ ವಿಎಫ್‌ಎಕ್ಸ್, ಸಂಕಲನ, ಹಿನ್ನಲೆ ಸಂಗೀತ, ಧ್ವನಿ ವಿನ್ಯಾಸ, ಪ್ರೊಡಕ್ಷನ್ ಡಿಸೈನ್, ಕಾಸ್ಟ್ಯೂಮ್ ಡಿಸೈನ್, ಛಾಯಾಗ್ರಹಣ, ನೃತ್ಯ ಸಂಯೋಜನೆ, ಸಾಹಸ ನಿರ್ದೇಶನ ವಿಭಾಗದಲ್ಲಿ ಗೆದ್ದವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಶಾರುಖ್ ಖಾನ್ ಸಿನಿಮಾ 'ಜವಾನ್', ರಣ್‌ಬೀರ್ ಕಪೂರ್ ಸಿನಿಮಾ 'ಅನಿಮಲ್' ಹಾಗೂ ವಿಕ್ಕಿ ಕೌಶಲ್ ನಟಿಸಿದ 'ಸ್ಯಾಮ್ ಬಹದ್ದೂರ್' ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿ ಬಂದಿದೆ.
ಹಿನ್ನೆಲೆ ಸಂಗೀತ, ಸೌಂಡ್ ಡಿಸೈನ್ ಪ್ರಶಸ್ತಿ ಅನಿಮಲ್‌ಗೆ ಸಿಕ್ಕಿದರೆ, ವಿಎಫ್‌ಎಕ್ಸ್ ಹಾಗೂ ಅತ್ಯುತ್ತಮ ಆಕ್ಷನ್ ಪ್ರಶಸ್ತಿ 'ಜವಾನ್' ಪಾಲಾಗಿದೆ. ಹಾಗೇ ಪ್ರೊಡಕ್ಷನ್ ಡಿಸೈನ್, ಕಾಸ್ಟ್ಯೂಮ್ ಡಿಸೈನ್ ವಿಕ್ಕಿ ಕೌಶಲ್ ಸಿನಿಮಾ 'ಸ್ಯಾಮ್ ಬಹದ್ದೂರ್'ಗೆ ಧಕ್ಕಿದೆ. ಫಿಲ್ಮ್ ಫೇರ್‌ನ ತಾಂತ್ರಿಕ ವಿಭಾಗದ ಪ್ರಶಸ್ತಿಯ ಸಂಪೂರ್ಣ ಪಟ್ಟಿ ಇಲ್ಲಿದೆ.
69ನೇ ಫಿಲ್ಮ್ ಫೇರ್ ತಾಂತ್ರಿಕ ವಿಭಾಗದ ಪ್ರಶಸ್ತಿ ಪಟ್ಟಿ
ಅತ್ಯುತ್ತಮ VFX- ರೆಡ್ ಚಿಲ್ಲಿಸ್, 'ಜವಾನ್'
ಅತ್ಯುತ್ತಮ ಹಿನ್ನೆಲೆ ಸಂಗೀತ - ಹರ್ಷವರ್ಧನ್ ರಾಮೇಶ್ವರ್, 'ಅನಿಮಲ್'
ಅತ್ಯುತ್ತಮ ಸಂಕಲನ - ಜಸ್ಕುನ್ವರ್ ಸಿಂಗ್ ಕೊಹ್ಲಿ ಮತ್ತು ವಿಧು ವಿನೋದ್ ಚೋಪ್ರಾ, '12th ಫೇಲ್ ಸಿನಿಮಾ'
ಅತ್ಯುತ್ತಮ ಧ್ವನಿ ವಿನ್ಯಾಸ -ಕುನಾಲ್ ಶರ್ಮಾ,'ಸ್ಯಾಮ್ ಬಹದ್ದೂರ್' ಮತ್ತು ಸಿಂಕ್ ಸಿನಿಮಾ,'ಅನಿಮಲ್'
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ, 'ಸ್ಯಾಮ್ ಬಹದ್ದೂರ್'
ಅತ್ಯುತ್ತಮ ವಸ್ತ್ರ ವಿನ್ಯಾಸ - ಸಚಿನ್ ಲವ್ಲೇಕರ್, ದಿವ್ವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್, 'ಸ್ಯಾಮ್ ಬಹದ್ದೂರ್'
ಅತ್ಯುತ್ತಮ ಛಾಯಾಗ್ರಹಣ - ಅವಿನಾಶ್ ಅರುಣ್ ಧಾವರೆ, 'ಥ್ರೀ ಆಫ್ ಅಸ್'
ಅತ್ಯುತ್ತಮ ನೃತ್ಯ ಸಂಯೋಜನೆ - ಗಣೇಶ್ ಆಚಾರ್ಯ, ಹಾಡು: ವಾಟ್ ಜುಮ್ಕಾ?, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'
ಅತ್ಯುತ್ತಮ ಆಕ್ಷನ್ - ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್, 'ಜವಾನ್'
ಇಂದು (ಜನವರಿ 28) ಅತ್ಯುತ್ತಮ ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ, ಕಥೆ, ಚಿತ್ರಕಥೆ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಈ ವೇಳೆ ಬಾಲಿವುಡ್‌ನ ದಿಗ್ಗಜರು ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ನಿನ್ನೆಗಿಂತಲೂ (ಜನವರಿ 27) ಇಂದಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೆಚ್ಚೆಚ್ಚು ಮನರಂಜನೆಯನ್ನು ನಿರೀಕ್ಷಿಸಬಹುದಾಗಿದೆ.


Click it and Unblock the Notifications











