ರಾಮೋಜಿ ಫಿಲ್ಮ್ ಸಿಟಿಯನ್ನೇ ಮೀರಿಸುತ್ತಾ ಅಂತರಾಷ್ಟ್ರೀಯ ಫಿಲ್ಮ್ ಸಿಟಿ? ಬೋನಿ ಕಪೂರ್ ಪ್ಲ್ಯಾನ್ ಏನು?

ಬಾಲಿವುಡ್ ಮಂದಿ ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಅಂತರಾಷ್ಟ್ರೀಯ ಫಿಲ್ಮ್ ಸಿಟಿಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರ ಹಾಗೂ ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವೆಲಪ್‌ಮೆಂಟ್ ಪ್ರಾಧಿಕಾರ ಮೆಗಾ ಡೀಲ್‌ಗೆ ಸಹಿ ಹಾಕಿದೆ. ಸುಮಾರು ₹15,100 ಕೋಟಿ ರೂಪಾಯಿಯಲ್ಲಿ ಈ ಅಂತರಾಷ್ಟ್ರೀಯ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ.

ವಿಶೇಷ ಅಂದರೆ, ಈ ಫಿಲ್ಮ್ ಸಿಟಿಯನ್ನು ನಿರ್ಮಾಣದ ಮುಂದಾಳತ್ವವನ್ನು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ವಹಿಸಿಕೊಂಡಿದ್ದಾರೆ. ಬಾಲಿವುಡ್‌ಗೆ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಬೋನಿ ಕಪೂರ್ ಈಗ ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಭುತಾನಿ ಇನ್‌ಫ್ರಾ ಬೆಂಬಲಿತ ಸಂಸ್ಥೆ ಬೇವ್ಯೂ ಪ್ರಾಜೆಕ್ಟ್ಸ್ ಈ ಅಂತರಾಷ್ಟ್ರೀಯ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುತ್ತಿದೆ.

Filmmaker Boney Kapoor building International Film City in Noida in UP

ಇತ್ತೀಚೆಗೆ ಬೋನಿ ಕಪೂರ್ ಹಾಗೂ ಭೂತಾನಿ ಗ್ರೂಪ್‌ನ ಆಶಿಶ್ ಭೂತಾನಿ ಯುಪಿಯ ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವೆಲಪ್‌ಮೆಂಟ್ ಪ್ರಾಧಿಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಸಲಿಗೆ ಅಂತರಾಷ್ಟ್ರೀಯ ಫಿಲ್ಮ್ ಸಿಟಿಯನ್ನು ಎಂಟು ವರ್ಷಗಳಲ್ಲಿ ಮುಗಿಸುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಆರಂಭದಲ್ಲಿ ಸಿನಿಮಾರಂಗ ಬೇಕಿರುವ ಸೌಕರ್ಯಗಳು ಹಾಗೂ ಸಿನಿಮಾ ಇನ್‌ಸ್ಟಿಟ್ಯೂಟ್ ಅನ್ನು ಮುಂದಿನ ಮೂರು ವರ್ಷಗಳಲ್ಲಿ ಮುಗಿಸಲು ಮುಂದಾಗಿದೆ.

ಯುಪಿಯ ನೋಯ್ಡಾದಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಸಿಟಿಯನ್ನು ಸುಮಾರು ಒಂದು ಸಾವಿರ ಎಕರೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 230 ಎಕರೆಯನ್ನು ಡೆವಲಪ್ ಮಾಡಲಾಗುತ್ತಿದೆ. 220 ಎಕರೆಯನ್ನು ಕಮರ್ಷಿಯಲ್ ಬಳಕೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ಉಳಿದ 780 ಎಕರೆಯನ್ನು ಕೈಗಾರಿಕೆಯ ಬಳಕೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ 10 ಸಾವಿರ ಮಂದಿಗೆ ಕೆಲಸ ಸೃಷ್ಟಿಯಾಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

ಅಷ್ಟಕ್ಕೂ ಅಂತರಾಷ್ಟ್ರೀಯ ಫಿಲ್ಮ್ ಸಿಟಿಯಲ್ಲಿ ಏಳು ಜೋನ್‌ಗಳನ್ನು ಮಾಡಲಾಗುತ್ತಿದೆ. 60 ಎಕರೆಯಲ್ಲಿ ಪ್ರೊಡಕ್ಷನ್ ಹಾಗೂ ಸ್ಟುಡಿಯೋಗೆ ಮೀಸಲಿಡಲಾಗಿದೆ. ಹಾಗೇ 20 ಎಕರೆಯನ್ನು ಯುನಿವರ್ಸಿಟಿಗೆ ಮೀಸಲಿಡಲಾಗಿದೆ. ಇನ್ನು 15 ಎಕರೆಯಲ್ಲಿ ಫ್ಯಾಕ್ಟರಿ ಹಾಗೂ ಕರಕುಶಲ ಪ್ರದೇಶ ಎಂದು ಮೀಸಲಿಡಲಾಗಿದೆ. 10 ಎಕರೆಯನ್ನು ಆಡಳಿತ ಕಛೇರಿ ಹಾಗೂ ಕ್ರಿಯೇಟಿವ್ ಹಬ್ ಆಗಿ ಮೀಸಲಿಡಲಾಗಿದೆ.

Filmmaker Boney Kapoor building International Film City in Noida in UP

ಭಾರತದ ಏಕೈಕ ಬೃಹತ್ ಫಿಲ್ಮ್ ಸ್ಟುಡಿಯೋ ರಾಮೋಜಿ ಫಿಲ್ಮ್ ಸಿಟಿಗೆ ನೋಯ್ಡಾ ಅಂತರಾಷ್ಟ್ರೀಯ ಫಿಲ್ಮ್ ಸಿಟಿ ಪೈಪೋಟಿ ಕೊಡಬಹುದು. ದಕ್ಷಿಣ ಭಾರತ ಅಷ್ಟೇ ಅಲ್ಲ, ಬಾಲಿವುಡ್ ಮಂದಿ ಕೂಡ ರಾಮೋಜಿ ಫಿಲ್ಮ್ ಸಿಟಿಗೆ ಬಂದು ಶೂಟಿಂಗ್ ಮಾಡುತ್ತಿದ್ದರು. ಆದರೆ, ಇನ್ನು ಮೂರು ವರ್ಷಗಳಲ್ಲಿ ವಿನೂತನವಾಗಿ ನಿರ್ಮಾಣವಾಗುತ್ತಿರುವ ಫಿಲ್ಮ್ ಸಿಟಿ ಕಡೆ ಬಾಲಿವುಡ್ ಮಂದಿ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.

ಹಾಗೇ ಉತ್ತರ ಭಾರತದ ಸಿನಿಮಾರಂಗಗಳಿಗೆ ನೋಯ್ಡಾ ಫಿಲ್ಮ್ ಸಿಟಿ ಹೆಚ್ಚು ಅನುಕೂಲಕಾರಿಯಾಗಬಹುದು. ಹಿಂದಿ ಅಷ್ಟೇ ಅಲ್ಲದೆ ಮರಾಠಿ, ಬೆಂಗಾಲಿ ಬೋಜ್‌ಫುರಿ ಸಿನಿಮಾಗಳು ನೋಯ್ಡಾ ಅಂತರಾಷ್ಟ್ರೀಯ ಫಿಲ್ಮ್ ಸಿಟಿಯನ್ನು ಹೆಚ್ಚಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಇವೆ. ಒಟ್ನಲ್ಲಿ ರಾಮೋಜಿ ಫಿಲ್ಮ್ ಸಿಟಿ ಜೊತೆ ಮತ್ತೊಂದು ಬೃಹತ್ ಫಿಲ್ಮ್ ಸಿಟಿ ನಿರ್ಮಾಣ ಆಗುತ್ತಿದೆ.

More from Filmibeat

English summary
Boney Kapoor building International Film City
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X