ದೀಪಿಕಾ ಪಡುಕೋಣೆಯನ್ನು ಬಲವಂತಾಗಿ ಚುಂಬಿಸುತ್ತಿದ್ದ ಆ ನಿರ್ದೇಶಕ ಯಾರು? ಮತ್ತೆ ಆ ವಿಡಿಯೋ ವೈರಲ್
ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇದರ ಜೊತೆ ಪ್ರಭಾಸ್ ಜೊತೆ ನಟಿಸಿದ 'ಕಲ್ಕಿ 2898AD' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಂಡಿದೆ. ಈ ಮಧ್ಯೆ ದೀಪಿಕಾ ಪಡುಕೋಣೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾದ ಬೆನ್ನಲ್ಲೇ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆಯಾಗಿದೆ. ಸದ್ಯ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಿರ್ದೇಶಕನೊಬ್ಬ ದೀಪಿಕಾ ಪಡುಕೋಣೆಗೆ ಬಲವಂತವಾಗಿ ಚುಂಬಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆಗೆ ಬಲವಂತಾಗಿ ಮುತ್ತು ಕೊಟ್ಟಿದ್ದ ನಿರ್ದೇಶಕ ಹೋಮಿ ಅದಾಜಾನಿಯಾ. ಈತ 'ಫೈಂಡಿಂಗ್ ಫ್ಯಾನಿ' ಸಿನಿಮಾದ ನಿರ್ದೇಶಕ. ದೀಪಿಕಾ ಪಡುಕೋಣೆ ನಟಿಸಿದ 'ಫೈಂಡಿಂಗ್ ಫ್ಯಾನಿ' ಹಾಗೂ 'ಕಾಕ್‌ಟೈಲ್' ಈ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ದೀಪಿಕಾಗೆ ನಿರ್ದೇಶಕ ಬಲವಂತವಾಗಿ ಚುಂಬಿಸಿದ್ದ ಎಂದು ಸುದ್ದಿಯಾಗಿತ್ತು.
'ಫೈಂಡಿಂಗ್ ಫ್ಯಾನಿ' ಹಾಗೂ 'ಕಾಕ್‌ಟೈಲ್' ಈ ಎರಡು ಸಿನಿಮಾಗಳ ಪ್ರತ್ಯೇಕ ಪ್ರಚಾರದ ಸಮಯದಲ್ಲಿ ಈ ನಿರ್ದೇಶಕ ಬಲವಂತವಾಗಿ ಮುತ್ತಿಟ್ಟಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ಹೋಮಿ ಅದಾಜಾನಿಯಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರು ನಿರ್ದೇಶಕನ ವಿರುದ್ಧ ಟೀಕೆ ಮಾಡಿದ್ದರು. ಅದೇ ಮತ್ತೆ ವೈರಲ್ ಮಾಡುತ್ತಿದ್ದಾರೆ.
'ಫೈಂಡಿಂಗ್ ಫ್ಯಾನಿ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆಯ ಅಭಿನಯವನ್ನು ಬೇರೆ ಬೇರೆಯಾಗಿ ತೋರಿಸಲಾಗಿದೆ. ಈ ವೇಳೆ ಸಿನಿಮಾ ಸದ್ದು ಮಾಡುವುದಕ್ಕಿಂತ ಈ ಬಲವಂತದ ಚುಂಬನವೇ ಹೆಚ್ಚು ಸದ್ದು ಮಾಡಿತ್ತು. ಈ ಹಿಂದೆನೇ ಆಗಿದ್ದ ವರದಿ ಪ್ರಕಾರ, ಸಿನಿಮಾದ ನಿರ್ದೇಶಕ ಹೋಮಿ ಅದಾಜಾನಿಯಾ ಕುಡಿದಿದ್ದು, ಬಲವಂತವಾಗಿ ದೀಪಿಕಾ ಪಡುಕೋಣೆ ಕೆನ್ನೆಗೆ ಮುತ್ತಿಟ್ಟರು. ವಿಚಿತ್ರ ಅಂದರೆ, ಈ ಘಟನೆ ಮಾಧ್ಯಮಗಳ ಮುಂದೆ ನಡೆದಿತ್ತು.
ಇಂತಹ ಪರಿಸ್ಥಿತಿಯ ಹೊರತಾಗಿಯೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಬಗ್ಗೆನೂ ಅಂದು ಚರ್ಚೆಯಾಗಿತ್ತು. ನಿರ್ದೇಶಕ ಬಲವಂತವಾಗಿ ಚುಂಬಿಸುತ್ತಿದ್ದರೆ, ನಟಿ ದೀಪಿಕಾ ಪಡುಕೋಣೆ ಮಾತ್ರ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದರು. ಕ್ಯಾಮರಾ ಮುಂದು ಖುಷಿಯಾಗಿರುವಂತೆಯೇ ಪೋಸ್ ಕೊಟ್ಟಿದ್ದರು. ಇದು ಆ ಪರಿಸ್ಥಿತಿಯಿಂದ ಪಾರಾಗುವುದಕ್ಕೆ ಹಾಗೆ ಮಾಡಿದರಾ? ಏನು ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ.
ಅದೇ ರೀತಿ 'ಕಾಕ್‌ಟೇಲ್' ಸಿನಿಮಾದ ಸ್ಕ್ರೀನಿಂಗ್ ವೇಳೆನೂ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ವೇಳೆ ಕೂಡ ದೀಪಿಕಾ ಪಡುಕೋಣೆ ಹಿಂದಿನಿಂದ ಬಂದು ಚುಂಬಿಸಿದ್ದರು. ಮಾಧ್ಯಮದೊಂದಿಗೆ ಮಾತನಾಡುವಾಗ ದೀಪಿಕಾ ಅವರ ಭುಜದ ಮೇಲೆ ಕೈ ಹಾಕಿ ನಿಂತಿದ್ದರು. ಇದು ಯಾಕೋ ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ.
ಈ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಹರಿದಾಡುತ್ತಿದೆ. ಇದು ಆಕ್ರೋಶವನ್ನು ಹುಟ್ಟುಹಾಕಿದ್ದು, ನೆಟಿಜನ್‌ಗರು ಹೋಮಿ ಅದಾಜಾನಿಯಾ ವರ್ತನೆಯನ್ನು ಮತ್ತೆ ಟೀಕಿಸಿದ್ದಾರೆ.


Click it and Unblock the Notifications











