2026 ಮೊದಲಾರ್ಧ ಆವರಿಸಿಕೊಂಡ ಸಂಜಯ್ ದತ್; ಜನವರಿಯಿಂದ ಜೂನ್‌ವರೆ ರಿಲೀಸ್ ಆಗ್ತಿರೋ ಸಿನಿಮಾಗಳಿವು!
ಬಾಲಿವುಡ್‌ನ ಖಳನಾಯಕ್ ಸಂಜಯ್ ದತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ 2026 ಸಂಜು ಬಾಬಾಗೆ ಲಕ್ಕಿ ವರ್ಷ. ಯಾಕಂದ್ರೆ, 2026 ಜನವರಿಯಿಂದ ಜೂನ್‌ವರೆಗೂ ಮೊದಲ ಆರು ತಿಂಗಳು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿವೆ. ಈ ವರ್ಷದಲ್ಲಿ ಅತೀ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಗೆ ಸಂಜಯ್ ದತ್ ಪಾಲಾಗೋದು ಗ್ಯಾರಂಟಿ ಆಗಿದೆ.
ಸಂಜಯ್ ದತ್‌ಗೆ ಕೇವಲ ಬಾಲಿವುಡ್ ಅಷ್ಟೇ ಅಲ್ಲ. ಪರಭಾಷೆಯ ಸಿನಿಮಾಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಹಿಂದಿ ಜೊತೆಗೆ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಹಾಗಂತ ಕೇವಲ ಸಿನಿಮಾಗಳಲ್ಲಿ ನಟಿಸಿದ್ದಷ್ಟೇ ಅಲ್ಲ. ಸಂಜಯ್ ದತ್ ಯಾವ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೋ ಅವುಗಳಲ್ಲಿ ಬಹುತೇಕ ಸಿನಿಮಾಗಳು ಹಿಟ್ ಆಗಿವೆ.

ಇನ್ನು 2026ನಲ್ಲಿ ಸಂಜಯ್ ದತ್ ಸಿನಿಮಾಗಳು ಬಿಡದಂತೆ ತಿಂಗಳೊಂದು ರಿಲೀಸ್ ಆಗಿವೆ. ಫೆಬ್ರವರಿ ಒಂದು ತಿಂಗಳು ಬಿಟ್ಟರೆ, ಜನವರಿಯಿಂದ ಜುಲೈವರೆಗೂ ಒಂದೊಂದು ಸಿನಿಮಾ ರಿಲೀಸ್‌ಗೆ ಲೈನಪ್ ಆಗಿವೆ. ಹಾಗಿದ್ದರೆ, ಜನವರಿಯಿಂದ ಏಪ್ರಿಲ್‌ವರೆಗೆ ಯಾವ್ಯಾವ ಸಿನಿಮಾ ರಿಲೀಸ್ ಆಗಿವೆ? ಮುಂದೆ ಯಾವೆಲ್ಲ ಸಿನಿಮಾಗಳು ಇವೆ ಅನ್ನೋದು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
ಜನವರಿ To ಮಾರ್ಚ್ ರಿಲೀಸ್
'ಕೆಜಿಎಫ್ 2'ನಲ್ಲಿ ಸಂಜಯ್ ದತ್ ಅಧೀರನಾಗಿ ಕಂಡಿದ್ದೇ ಕಂಡಿದ್ದು ಸಿನಿಮಾಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತರದಿಂದ ದಕ್ಷಿಣದವರೆಗೂ ಫಿಲ್ಮ್ ಮೇಕರ್ಸ್ ಸಂಜಯ್ ದತ್ ಅವರದ್ದೇ ಜಪ ಮಾಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಜಯ್ ದತ್ ಅವರಿಗೆ ವಿಶೇಷ ಪಾತ್ರಗಳು, ಗೆಟಪ್‌ಗಳು ಸಿಗುತ್ತಿವೆ. ಪ್ರೇಕ್ಷಕರು ಕೂಡ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಆಫರ್ ಸಿಗುತ್ತಿದೆ.
ಇನ್ನು 2026ರ ಜನವರಿ ತಿಂಗಳಲ್ಲಿ ಪ್ರಭಾಸ್ ನಟಿಸಿದ 'ರಾಜಾ ಸಾಬ್' ಸಿನಿಮಾ ರಿಲೀಸ್ ಆಗಿತ್ತು. ಸಂಜಯ್ ದತ್ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದೇ ಹೋದರೂ, ಸಂಜಯ್ ದತ್ ಹೈಲೈಟ್ ಆಗಿದ್ದರು. ಫೆಬ್ರವರಿಯಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಲಿಲ್ಲ. ಆದರೆ, ಮಾರ್ಚ್ ತಿಂಗಳಲ್ಲಿ ಸಂಜಯ್ ದತ್ ವೃತ್ತಿ ಬದುಕಿನಲ್ಲೇ ಬಿಗ್ ಸಿನಿಮಾ 'ಧುರಂಧರ್ 2' ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಎಸ್‌ಎಸ್‌ಪಿ ಚೌಧರಿ ಅಸ್ಲಾಮ್ ಪಾತ್ರದಲ್ಲಿ ಮಿಂಚಿದ್ದರು.

ಏಪ್ರಿಲ್ To ಜುಲೈ ರಿಲೀಸ್
ಇನ್ನು ಏಪ್ರಿಲ್ ತಿಂಗಳಿನಲ್ಲೂ ಸಂಜಯ್ ದತ್ ಸಿನಿಮಾ ರಿಲೀಸ್ ಆಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ ದಿ ಡೆವಿಲ್'. ಇನ್ನೇನು ಈ ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾದಲ್ಲಿ ಧಕ್ ದೇವ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಏಪ್ರಿಲ್ 30ಕ್ಕೆ 'ಕೆಡಿ' ರಿಲೀಸ್ ಆಗುತ್ತಿದೆ. ಇನ್ನು ಮೇ ತಿಂಗಳಲ್ಲಿ ಸಂಜಯ್ ದತ್ ಅವರು 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ಮೇ 1ರಂದು 'ರಾಜಾ ಶಿವಾಜಿ'. ಇದರಲ್ಲಿ ಅಫ್ಜಲ್ ಖಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಮೇ 8 ರಂದು 'ಆಖರಿ ಸವಾಲ್' ರಿಲೀಸ್ ಆಗುತ್ತಿದೆ. ಇದರಲ್ಲಿ ಪ್ರೊಫೆಸರ್ ಗೋಪಾಲ್ ನಡ್ಕರ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಜೂನ್ ತಿಂಗಳು 19ಕ್ಕೆ 'ಕಾಕ್‌ಟೇಲ್ 2' ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 26ಕ್ಕೆ 'ವೆಲ್‌ಕಮ್ ಟು ದಿ ಜಂಗಲ್' (Welcome 3) ರಿಲೀಸ್ ಆಗುತ್ತಿದೆ. ಇದರೊಂದಿಗೆ ಜುಲೈನಲ್ಲಿ 'ಧಮಾಲ್ 4' ಕೂಡ ಬಿಡುಗಡೆಯಾಗಲಿದೆ. ಒಟ್ನಲ್ಲಿ ಜನವರಿಯಿಂದ ಜುಲೈವರೆಗೆ ಸಂಜಯ್ ನಟಿಸಿದ 8 ಸಿನಿಮಾಗಳು ರಿಲೀಸ್ ಆಗಲಿವೆ.


Click it and Unblock the Notifications