ಮತ್ತೊಂದು ಅಪರೂಪದ ಸಾಧನೆ ಮಾಡಿದ ನಟ ಅಕ್ಷಯ್ ಕುಮಾರ್

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಟ ಅಕ್ಷಯ್ ಕುಮಾರ್. 2019ರ ಜೂನ್‌ನಿಂದ 2020ರ ಮೇ ಅವಧಿಯಲ್ಲಿ ಅಕ್ಷಯ್ ಕುಮಾರ್ 48.5 ಮಿಲಿಯನ್ ಡಾಲರ್ (366 ಕೋಟಿ ರೂ) ವೇತನ ಪಡೆದಿದ್ದು, ಈ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿದ್ದಾರೆ.

Recommended Video

Akshay Kumar only Indian in the top 100 richest celebrities list | Akshay Kumar | Forbes

22 ವರ್ಷದ ಸಾಹಸೋದ್ಯಮಿ ಕೈಲಿ ಜೆನ್ನರ್ ಈ ಅವಧಿಯಲ್ಲಿ 590 ಮಿಲಿಯನ್ ಡಾಲರ್ (4,453 ಕೋಟಿ ರೂ) ಸಂಪಾದಿಸುವ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೈಲಿ ಅವರ ಸಂಬಂಧಿ ರಾಪ್ಪರ್ ಕನ್ಯೆ ವೆಸ್ಟ್ 170 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೊರತುಪಡಿಸಿ ಭಾರತದ ಬೇರೆ ಯಾವ ಸೆಲೆಬ್ರಿಟಿ ಕೂಡ ಸ್ಥಾನ ಪಡೆದಿಲ್ಲ. ಮುಂದೆ ಓದಿ...

ಟಾಪ್ ಹತ್ತರ ಪಟ್ಟಿಯಲ್ಲಿರುವವರು

ಟಾಪ್ ಹತ್ತರ ಪಟ್ಟಿಯಲ್ಲಿರುವವರು

ಟೆನ್ನಿಸ್ ಆಟಗಾರ ರೋಜರ್ ಫೆಡರರ್, ಫುಟ್ಬಾಲ್ ತಾರೆಯರಾದ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೊನಲ್ ಮೆಸ್ಸಿ, ಹಾಸ್ಯ ಕಲಾವಿದ ಟೇಲರ್ ಪೆರ್ರಿ, ಫುಟ್ಬಾಲ್ ಆಟಗಾರ ನೇಯ್ಮರ್, ನಿರೂಪಕ ಹೋವರ್ಡ್ ಸ್ಟರ್ನ್ ಮತ್ತು ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಟಾಪ್ ಹತ್ತರ ಸ್ಥಾನದಲ್ಲಿದ್ದಾರೆ.

ಅಕ್ಷಯ್ ಕುಮಾರ್ ಸಂಪಾದನೆ ಎಷ್ಟು?

ಅಕ್ಷಯ್ ಕುಮಾರ್ ಸಂಪಾದನೆ ಎಷ್ಟು?

52 ವರ್ಷದ ನಟ ಅಕ್ಷಯ್ ಕುಮಾರ್, ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ನಾಲ್ಕನೆಯವರಾಗಿದ್ದು, 2018ರ ಜೂನ್ 1ರಿಂದ 2019ರ ಜೂನ್ 1ರ ಅವಧಿಯಲ್ಲಿ 65 ಮಿಲಿಯನ್ ಡಾಲರ್ (466 ಕೋಟಿ ರೂ) ವೇತನ ಪಡೆದಿದ್ದರು.

ಖ್ಯಾನಾಮರು ಹಿಂದಕ್ಕೆ

ಖ್ಯಾನಾಮರು ಹಿಂದಕ್ಕೆ

ಹಾಲಿವುಡ್‌ನ ಖ್ಯಾತ ನಟರಾದ ವಿಲ್ ಸ್ಮಿತ್, ಜೆನಿಫರ್ ಲೋಪೆಜ್ ಮತ್ತು ಗಾಯಕಿ ರಿಹಾನ್ನಾ ಅವರನ್ನು ಹಿಂದಿಕ್ಕಿ ಅಕ್ಷಯ್ ಕುಮಾರ್ 52ನೇ ಸ್ಥಾನ ಪಡೆದುಕೊಂಡಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು, ಕಲಾವಿದರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಕೂಡ ಅಕ್ಷಯ್ ಕುಮಾರ್ ಅತಿ ಹೆಚ್ಚು ಪ್ರಮಾಣದಲ್ಲಿ ದೇಣಿಗೆ ನೀಡಿದ್ದರು.

19 ಸ್ಥಾನ ಕುಸಿತ

19 ಸ್ಥಾನ ಕುಸಿತ

ವಿಶೇಷವೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಟರಾಗಿದ್ದರೂ, ಅಕ್ಷಯ್ ಕುಮಾರ್ 19 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 33ನೇ ಸ್ಥಾನದಲ್ಲಿದ್ದರು.

More from Filmibeat

English summary
Bollywood actor Akshay Kumar the only one Indian actor to feature in Forbes list of highest paid celebrities of 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X