ಭಾರತದ ಎರಡನೇ ಶ್ರೀಮಂತ ನಟಿ ಐಶ್ವರ್ಯಾ ರೈ ಬಳಿ ಎಷ್ಟು ಕೋಟಿ ಆಸ್ತಿಯಿದೆ? ಹಣ ಮೂಲ ಯಾವುದು ಗೊತ್ತೇ?

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಐಶ್ವರ್ಯಾ ರೈ ಕೌಟುಂಬಿಕ ಬದುಕಿನ ಬಗ್ಗೆ ಚರ್ಚೆಯಲ್ಲಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಈ ಮಧ್ಯೆ ಇಂದು (ನವೆಂಬರ್ 1) ಐಶ್ವರ್ಯಾ ರೈ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಐಶ್ವರ್ಯಾ ರೈ ಅಂದರೆ, ಸೌಂದರ್ಯ. ಸೌಂದರ್ಯ ಅಂದರೆ ಐಶ್ವರ್ಯಾ ರೈ ಅನ್ನುವ ವಾದವಿದೆ. ಒಂದು ಕಾಲದಲ್ಲಿ ಆಕೆಯ ಅಭಿಮಾನಿಗಳು ಮಾಜಿ ವಿಶ್ವ ಸುಂದರಿ ಅನ್ನುವ ಮಾತನ್ನೇ ಒಪ್ಪಿಕೊಳ್ಳುತ್ತಿರಲಿಲ್ಲ. ಐಶ್ವರ್ಯಾ ರೈ ಎವರ್‌ಗ್ರೀನ್ ಬ್ಯೂಟಿ ಅನ್ನುವುದು ಅವರ ವಾದವಾಗಿತ್ತು. ಕೆಲವು ದಿನಗಳಿಂದ ಅಷ್ಟೇ ಐಶ್ ಆರೋಗ್ಯ ಸಮಸ್ಯೆಯಿಂದ ಕೊಂಚ ದಪ್ಪಗಾಗಿ ಕಾಣುತ್ತಿದ್ದಾರೆ ಅಷ್ಟೇ.

Former miss world Aishwarya Rai Bachchan Net worth lavish lifestyle and earnings list

ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಬ್ಯೂಟಿಫುಲ್ ನಟಿಯಷ್ಟೇ ಅಲ್ಲ. ಈಕೆ ಭಾರತದ ಎರಡನೇ ಶ್ರೀಮಂತ ನಟಿ ಅನ್ನೋದು ನಿಮಗೆ ಗೊತ್ತಾ? ಆರಂಭದ ದಿನಗಳಲ್ಲಿ ಬಾಲಿವುಡ್‌ ನೆಲೆಯೂರುವುದಕ್ಕೆ ಪರದಾಡಿದ್ದರೂ, ನಂತರದ ದಿನಗಳಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಈಕೆಯನ್ನು ದುಬಾರಿ ನಟಿಯರ ಪಟ್ಟಿಯಲ್ಲಿ ಸೇರಿಸುತ್ತಾರೆ. ಹಾಗಿದ್ದರೆ, ಐಶ್ವರ್ಯಾ ಬಳಿ ಇರುವ ಆಸ್ತಿ ಎಷ್ಟು? ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಸಿನಿಮಾಗೆಷ್ಟು ಸಂಭಾವನೆ? ಜಾಹೀರಾತಿಗೆಷ್ಟು ಸಂಭಾವನೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮಣಿರತ್ನಂ ಸಿನಿಮಾದಿಂದ ಜರ್ನಿ ಆರಂಭ

ವಿಶ್ವ ಸುಂದರಿ ಪಟ್ಟ ಗೆಲ್ಲುತ್ತಿದ್ದಂತೆ ಐಶ್ವರ್ಯಾ ರೈಗೆ ಬಾಲಿವುಡ್‌ನಿಂದ ಆಫರ್ ಬಂದಿರಲಿಲ್ಲ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ ಈಕೆ ಮೊದಲು ಅವಕಾಶ ಕೊಟ್ಟಿದ್ದರು. ಅವರೇ ನಿರ್ದೇಶಿಸಿದ 'ಇರುವರ್' ಐಶ್ವರ್ಯಾ ನಟಿಸಿದ ಮೊದಲ ಸಿನಿಮಾ. ಇದು ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಬಾಲಿವುಡ್‌ಗೆ ಪಯಣ ಬೆಳೆಸಿದ್ದರು. 'ಔರ್ ಪ್ಯಾರ್ ಹೋಗಯಾ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆನಂತರ 'ತಾಲ್', 'ಧೂಮ್ 2', 'ದೇವದಾಸ್', 'ಹಮ್ ದಿ ದೇ ಚುಕೆ ಸನಮ್' ಅಂತಹ ಸಿನಿಮಾಗಳು ಸೂಪರ್‌ಸ್ಟಾರ್ ಪಟ್ಟಕ್ಕೇರಿಸಿದ್ದವು. ಇತ್ತೀಚೆಗೆ ಮಣಿರತ್ನಂ ನಟಿಸಿದ ಪೊನ್ನಿಯಿನ್ ಸೆಲ್ವನ್ 1 & 2ನಲ್ಲಿ ನಟಿದ್ದರು. ಅದು ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಿತ್ತು.

ಭಾರತದ 2ನೇ ಶ್ರೀಮಂತ ನಟಿ

ಐಶ್ವರ್ಯಾ ರೈ ಬಾಲಿವುಡ್‌ನ ಎರಡನೇ ಶ್ರೀಮಂತ ನಟಿ. ಈ ವರ್ಷ ಹುರುನ್ ಪ್ರಕಟಿಸಿದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಐಶ್ವರ್ಯಾ ರೈ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಆಸ್ತಿಯ ಮೌಲ್ಯ 850 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಮೊದಲೇ ಸ್ಥಾನದಲ್ಲಿ ಜೂಹಿ ಚಾವ್ಲಾ ಇದ್ದು, ಇವರ ಆಸ್ತಿಯ ಮೌಲ್ಯ 4600 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಐಶ್ವರ್ಯಾ ರೈ ಸಿನಿಮಾ, ಜಾಹೀರಾತು ಹಾಗೂ ಬ್ಯುಸಿನೆಸ್‌ನಿಂದ ಕೋಟಿ ಲೆಕ್ಕದಲ್ಲಿ ಹಣ ಇವರ ಖಜಾನೆ ಸೇರುತ್ತೆ.

Former miss world Aishwarya Rai Bachchan Net worth lavish lifestyle and earnings list

ಎಲ್ಲಿಂದ ಬರುತ್ತೆ ಹಣ?

ಐಶ್ವರ್ಯಾ ರೈ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ಕಮ್ಮಿ ಅಂದರೂ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆಂದು ವರದಿಯಾಗಿದೆ. ಒಂದು ಕಾಲದಲ್ಲಿ ಐಶ್ವರ್ಯಾ ರೈ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಹಾಗೇ ಜಾಹೀರಾತುಗಳಿಗೂ ಭಾರಿ ಸಂಭಾವನೆ ಪಡೆಯುತ್ತಾರೆ. ಅಂತರಾಷ್ಟ್ರೀಯ ಮಟ್ಟದ ಜಾಹೀರಾತುಗಳನ್ನು ಒಪ್ಪಿಕೊಳ್ಳುವ ಐಶ್, ಒಂದು ದಿನಕ್ಕೆ 5 ರಿಂದ 6 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಎನ್ನಲಾಗಿದೆ. ಹಾಗೇ ಹೆಲ್ತ್‌ಕೇರ್ ಕ್ಷೇತ್ರದಲ್ಲಿ 5 ಕೋಟಿ ರೂಪಾಯಿ ಹಾಗೂ ಏರ್ ಕ್ವಾಲಿಟಿ ಸ್ಟಾರ್ಟ್‌ಅಪ್‌ಗಳಲ್ಲಿ 1 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಕಾರು- ಬಂಗಲೆ ಪಟ್ಟಿ

ಐಶ್ವರ್ಯಾ ರೈ ಮುಂಬೈನ ಬಾಂದ್ರಾದಲ್ಲಿ 5 ಬೆಡ್‌ರೂಮ್‌ ಫ್ಲಾಟ್ ಅನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ 21 ಕೋಟಿ ರೂಪಾಯಿ. ಹಾಗೇ ದುಬೈನಲ್ಲಿ ಐಷಾರಾಮಿ ಬಂಗಲೆ ಇದೆ. ಇದರ ಬೆಲೆ 15 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇನ್ನು 6.95 ಕೋಟಿ ರೂಪಾಯಿಯ ರೋಲ್ಸ್ ರಾಯ್ಸ್ ಘೋಸ್ಟ್, 1 ಕೋಟಿ 34 ಲಕ್ಷದ ಔಡಿ ಎ8ಎಲ್, 1.98 ಕೋಟಿ ರೂಪಾಯಿಯ ಮರ್ಸಿಡೀಸ್ ಬೆನ್ಜ್‌, 2.84 ಕೋಟಿ ರೂಪಾಯಿಯ ಲಕ್ಸಸ್ ಎಲ್‌ಎಕ್ಸ್ 570 ಇದೆ.

More from Filmibeat

English summary
Former Miss World Aishwarya Rai Bachchan Net worth lifestyle and earnings list;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X