ಬಳಕುವ ಬಳ್ಳಿಯಂತೆ ಇದ್ದ ಈ ಕೃಷ್ಣ ಸುಂದರಿಗೆ ಏನಾಯ್ತು, ಗುರುತೇ ಸಿಗದಷ್ಟು ಬದಲಾದ ಖ್ಯಾತ ನಟಿ !

ಮದುವೆಯಾದ ನಂತರ ಸಾಮಾನ್ಯವಾಗಿ ಚಿತ್ರರಂಗದಿಂದ ಅನೇಕ ನಾಯಕಿಯರು ದೂರವಾಗುತ್ತಾರೆ. ಮನೆ-ಗಂಡ-ಮಕ್ಕಳು ಎಂದು ಬ್ಯುಸಿಯಾಗುತ್ತಾರೆ. ಆ ಪೈಕಿ ಕೆಲವರು ತಮ್ಮ ಫಿಟ್ನೆಸ್ ಕಡೆ ಗಮನ ವಹಿಸುತ್ತಾರೆ. ಮೊದಲಿನಂತೆ ಪರ್ಫೆಕ್ಟ್ ಫಿಗರ್ ಮೇಂಟೇನ್ ಮಾಡಲು ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಇನ್ನು ಕೆಲವರು ಯಾವುದರ ಕಡೆ ಕೂಡ ಗಮನ ಕೊಡದೇ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಸೋಂಬೇರಿಗಳಾಗಿರುತ್ತಾರೆ. ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾರೆ.

ಇನ್ನು ಇದರ ನಡುವೆ ಮದುವೆಯಾದ ನಂತರ ಮಹಿಳೆಯರಿಗೆ ಅವರದ್ದೇ ಆದ ಸಮಸ್ಯೆಗಳು ಎದುರಾಗುತ್ತಾವೆ. ಅನೇಕರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ.

From Glam Diva to Unrecognizable Internet Shocked by Bipasha Basu s Unbelievable New Look

ತಾಯಿಯಾದ ನಂತರ ಸಾಮಾನ್ಯವಾಗಿ ಅನೇಕರು ದಪ್ಪ ಆಗ್ತಾರೆ. ಅದು ಸಹಜ. ಆದರೆ ಕೆಲವರು ಈ ವಿಚಾರವನ್ನ ಕಾಲೆಳೆಯಲು ಬಳಿಸಿಕೊಳ್ತಾರೆ. ಕುಂತಲ್ಲಿ.. ನಿಂತಲ್ಲಿ.. ದಪ್ಪ ಎಂದು ಹಂಗಿಸುತ್ತಾರೆ. ಇನ್ನೂ ಸೆಲೆಬ್ರಿಟಿ ಆದರೆ ಮುಗೀತು. ಅಡಿಗಡಿಗೂ ಅವಮಾನ ಮಾಡ್ತಾರೆ. ಟ್ರೋಲ್ ಮಾಡಿ ವಿಕೃತಿಯನ್ನು ಮೆರೆಯುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಸದ್ಯ ಬಿಪಾಶಾ ಬಸು ವಿಚಾರದಲ್ಲಿ ಕೂಡ ಇದೇ ಆಗ್ತಿದೆ.

ಹೌದು, ಬಿಪಾಶಾ ಬಸು. ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಕೃಷ್ಣ ಸುಂದರಿ. 'ಅಜ್ನಬೀ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಆ ನಂತರ ರಾಝ್.. ಫೀರ್ ಹೇರಾ ಫೇರಿ, ಓಂಕಾರ, ರೇಸ್, ನೋ ಎಂಟ್ರಿ, ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಗೆದ್ದು ಅಭಿಮಾನಿಗಳನ್ನು ಕೂಡ ಸಂಪಾದಿಸಿದ ಬಿಪಾಷಾ ಸದ್ಯ ತಮ್ಮ ಸಾಂಸಾರಿಕ ಜೀವನದಲ್ಲಿ ಖುಷಿಯಾಗಿದ್ದಾರೆ. ಒಂದು ದಶಕದಿಂದ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ.

ಇಂಥಾ ಬಿಪಾಶಾ ಬಸು ಸದ್ಯ ಗುರುತು ಹಿಡಿಯಲಾಗಷ್ಟು ಬದಲಾಗಿದ್ದಾರೆ. ಬಿಪಾಶಾ ಅವರನ್ನು ನೋಡಿದ ಅನೇಕರು ನಮ್ಮನ್ನು ವರ್ಷಗಳ ಹಿಂದೆ ಮರಳು ಮಾಡಿದ್ದ ಚೆಲುವೆ ಇವ್ರೇನಾ ಎಂದು ಗೊಂದಲಕ್ಕೀಡಾಗಿದ್ದಾರೆ. ಇನ್ನು ಬಿಪಾಶಾ ಬಸು ಅವರ ಈ ಲುಕ್ ಸದ್ಯ ಟ್ರೋಲಿಗರಿಗೆ ಆಹಾರವಾಗಿದ್ದು ಅನೇಕರು ಬಿಪಾಶಾ ಬಸು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಬಿಪಾಶಾ ಬಸು ಅವರನ್ನು ನಿಂದಿಸುತ್ತಿದ್ದಾರೆ. ಬಾಡಿ ಶೇಮಿಂಗ್ ಮಾಡುತ್ತಿದ್ದಾರೆ.

ಬಿಪಾಶಾ ಬಸು ತಮ್ಮ ದಿನನಿತ್ಯ ವರ್ಕೌಟ್ ಮುಗಿಸಿಕೊಂಡು ಬರುವ ಸಮಯದಲ್ಲಿ ಪಾಪರಾಜಿಗಳು ಬಿಪಾಶಾ ಅವರನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಆನ್‌ ಲೈನ್‌ನಲ್ಲಿ ವಿಡಿಯೋಗಳನ್ನು ಹರಿ ಬಿಟ್ಟಿದ್ದಾರೆ. ಇನ್ನು ಪಾಪರಾಜಿಗಳನ್ನು ನೋಡುತ್ತಿದ್ದಂತೆಯೇ ಗಾಬರಿಗೊಳಗಾದಂತಾಗುವ ಬಿಪಾಶಾ ಬಸು ಆತುರ ಆತುರವಾಗಿ ಅಲ್ಲಿಂದ ಹೊರಟಿದ್ದಾರೆ. ಕಾರಿನಲ್ಲಿ ಕುಂತ ನಂತರ ಮುಖ ಮುಚ್ಚಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ.

ಸದ್ಯ ಬಿಪಾಶಾ ಬಸು ಅವರ ಈ ವಿಡಿಯೋ ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನುಳಿದಂತೆ ಬಿಪಾಶಾ ಬಸು 2016ರಲ್ಲಿ ಕರಣ್ ಸಿಂಗ್ ಗ್ರೋವರ್‌ ಅವರನ್ನು ಮದುವೆಯಾದರು. ಕರಣ್ ಸಿಂಗ್ ಗ್ರೋವರ್‌ಗೆ ಇದು ಮೂರನೇ ಮದುವೆಯಾಗಿದ್ದರೆ ಬಿಪಾಶಾ ಬಸು ಪಾಲಿಗೆ ಈ ಮದುವೆ ಮೊದಲನೇಯದ್ದು. ಇವರಿಬ್ಬರ ದಾಂಪತ್ಯಕ್ಕೆ ಈಗ 09 ವರ್ಷಗಳಾಗಿದ್ದು ಇಬ್ಬರಿಗೆ ದೇವಿ ಎಂಬ ಮುದ್ದಾದ ಹೆಣ್ಣುಮಗಳಿದ್ದಾಳೆ.

ಅಂದ್ಹಾಗೇ ಈ ಹಿಂದೆ ಬಿಪಾಶಾ ಬಸು ಒಂದೇ ಒಂದು ದಿನವೂ ವ್ಯಾಯಾಮಕ್ಕೆ ಬ್ರೇಕ್ ಹಾಕುತ್ತಿರಲಿಲ್ಲ. ಅದು ಚಿತ್ರೀಕರಣವೇ ಇರಲಿ ಊರು, ದೇಶ ಯಾವುದೇ ಆಗಿರಲಿ ಜೊತೆಗೆ ತಮ್ಮ ಫಿಟ್‌ನೆಸ್ ಟ್ರೈನರ್‌ರನ್ನು ಕರೆದುಕೊಂಡು ಹೋಗುತ್ತಿದ್ದರು. ಬಳುಕುವ ಬಳ್ಳಿಯಂತಿರಲು ಇದೇ ಕಾರಣ ಎಂದು ಕೂಡ ಹಿಂದೆ ಹೇಳಿದ್ದ ಬಿಪಾಶಾ ತಮ್ಮ ಫಿಟ್‌ನೆಸ್ ಡಿವಿಡಿಯನ್ನೂ ಕೂಡ ಹೊರತಂದಿದ್ದರು. ಆದರೆ ಈಗ ಬಿಪಾಶಾ ಬಸು ಗುರುತು ಸಿಗದಷ್ಟು ಬದಲಾಗಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದ್ದಾರೆ.

More from Filmibeat

English summary
Bollywood actress Bipasha Basu has recently shocked fans with her latest public appearance, looking drastically different from her earlier glamorous image. Photos of her transformation have gone viral on social media, with many users commenting that she looks almost unrecognizable.
Read more about: bipasha basu fitness actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X