Gadar 2 Box Office: ಕರ್ನಾಟಕದಲ್ಲೂ 'ಗದರ್ 2' ದಾಖಲೆ ಕಲೆಕ್ಷನ್.. ಇದರ ಮುಂದೆ 'ಜೈಲರ್' ಲೆಕ್ಕಕ್ಕಿಲ್ಲ!

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದವು. ದಕ್ಷಿಣ ಭಾರತದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್'. ಇನ್ನೊಂದು ಕಡೆ ಉತ್ತರ ಭಾರತದಲ್ಲಿ 'ಗದರ್ 2'. ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್ ಬಹಳ ದಿನಗಳ ತೆರೆಮೇಲೆ ಕಂಡ ಸಿನಿಮಾವಿದು.

ಈ ಎರಡೂ ಸಿನಿಮಾಗಳೂ ಬಾಕ್ಸಾಫೀಸ್ ಧೂಳೆಬ್ಬಿಸಿವೆ. ಸೌತ್‌ನಲ್ಲಿ 'ಜೈಲರ್' ದರ್ಬಾರ್ ನಡೆಸಿದ್ದರೆ, ಅತ್ತ ಉತ್ತರದಲ್ಲಿ 'ಗದರ್ 2' ಖದರ್ ಜೋರಾಗಿತ್ತು. ದೇಶ ಪ್ರೇಮದ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇರುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ.

gadar-2-box-office-collection-karnataka

ಬಾಲಿವುಡ್ ಸಿನಿಮಾ 'ಗದರ್ 2' ಸೈಲೆಂಟ್ ಆಗಿಯೇ ಕರ್ನಾಟಕದ ಬಾಕ್ಸಾಫೀಸ್ ಅನ್ನು ದೋಚಿದೆ. ಮೂರು ವಾರಗಳಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿಗೂ ಕಲೆಕ್ಷನ್ ಮಾಡಿದೆ. ಅಷ್ಟಕ್ಕೂ 'ಗದರ್ 2' ಇಷ್ಟೊಂದು ಕಲೆಕ್ಷನ್ ಮಾಡಿದ್ದು ನಿಜವೇ? ಈ ಪ್ರಶ್ನೆಗೆ ಜೀ ಸ್ಟುಡಿಯೋದ ಕರ್ನಾಟಕದ ವಿತರಕರೇ ಅಧಿಕೃತ ಮಾಹಿತಿಯನ್ನು ಹೊರ ಹಾಕಿದ್ದಾರೆ.

3 ವಾರಗಳಲ್ಲಿ 'ಗದರ್ 2' ಕಲೆಕ್ಷನ್ ಎಷ್ಟು?

ಬಾಲಿವುಡ್ ಸಿನಿಮಾ ಕರ್ನಾಟಕದಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡುತ್ತವೆ. ಹಾಗೇ 'ಗದರ್ 2' ಅದ್ಭುತ ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಮೊದಲ ಮೂರು ವಾರಗಳಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 20.65 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಜೀ ಸ್ಟುಡಿಯೋದ ಕರ್ನಾಟಕ ವ್ಯವಸ್ಥಾಪಕ ವಿತರಕ ಮಂಜುನಾಥ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಜೀ ಸ್ಟುಡಿಯೋ ವಿತರಣೆ ಮಾಡಿದ್ದು, ಜೈಲರ್‌ಗೆ ಪೈಪೋಟಿ ನೀಡಿದೆ. ಈ ಸಿನಿಮಾದ ಮೊದಲ ಮೂರು ವಾರದ ಕಲೆಕ್ಷನ್ ಹೀಗಿದೆ.

gadar-2-box-office-collection-karnataka

'ಗದರ್ 2' ಕಲೆಕ್ಷನ್

ಮೊದಲ ವಾರ ₹12.60 ಕೋಟಿ
2ನೇ ವಾರ ₹5.80 ಕೋಟಿ
3ನೇ ವಾರ ₹2.25 ಕೋಟಿ (3 ದಿನಗಳು)
ಒಟ್ಟು ₹20.65 ಕೋಟಿ

ಎಷ್ಟು ಸ್ಕ್ರೀನ್ಸ್‌? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಗದರ್: ಏಕ್‌ ಪ್ರೇಮ್ ಕಥಾ' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಅದೇ ಸಿನಿಮಾ ಮುಂದುವರೆದ ಭಾಗವಿದು. ಹೀಗಾಗಿ ಕರ್ನಾಟಕದಲ್ಲಿಯೇ ಮೊದಲ ವಾರ 300ಕ್ಕೂ ಅಧಿಕ ಸ್ಕ್ರೀನ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಹಾಗೇ 2ನೇ ವಾರ 210 ಸ್ಕ್ರೀನ್, ಮೂರನೇ ವಾರ 160 ಸ್ಕ್ರೀನ್‌ನಲ್ಲಿ ಪ್ರದರ್ಶನ ಕಂಡಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೈಸೂರು ಕರ್ನಾಟಕ ಭಾಗದಲ್ಲಿ ಸಿನಿಮಾಗೆ ಉತ್ತರ ರೆಸ್ಪಾನ್ಸ್ ಸಿಕ್ಕಿದೆ ಎಂದು ಜೀ ಸ್ಟುಡಿಯೋದ ಕರ್ನಾಟಕ ವ್ಯವಸ್ಥಾಪಕ ವಿತರಕ ಮಂಜುನಾಥ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಮಾಡಿದ ಸ್ಟ್ರಾಟಜಿ ಏನು?

ಸುಮಾರು 12 ದಿನಗಳಿಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಓಷನ್ ಮಾಡಲಾಗಿತ್ತು. ಇದರಲ್ಲಿ ಸುಮಾರು 47 ಸ್ಕ್ರೀನ್‌ಗಳು ಹೌಸ್‌ ಫುಲ್ ಆಗಿತ್ತು. ಕನ್ನಡ ಸಿನಿಮಾಗಳನ್ನೇ ಹೆಚ್ಚು ಪ್ರಸಾರ ಮಾಡುವ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಅಲ್ಲೂ ಕೂಡ ಉತ್ತಮ ಗಳಿಕೆ ಸಿಕ್ಕಿದೆ ಎನ್ನುತ್ತಾರೆ. ಸದ್ಯ ನಿರ್ಮಾಣ ಸಂಸ್ಥೆಗೆ ಈ ಸಿನಿಮಾದಿಂದ ಸುಮಾರು 11.49 ಕೋಟಿ ರೂಪಾಯಿ ಶೇರ್ ಕೇವಲ ಕರ್ನಾಟಕದಿಂದಲೇ ಬಂದಿದೆ.

24 ಗಂಟೆ ನಿರಂತರ ಶೋ

'ಗದರ್ 2' ಸಿನಿಮಾ ಸ್ವಾತಂತ್ರ್ಯ ದಿನದಂದು ಕೆಲವು ಚಿತ್ರಮಂದಿರಗಳಲ್ಲಿ ಸುಮಾರು 24 ಗಂಟೆಗಳ ನಿರಂತರ ಪ್ರದರ್ಶನ ಮಾಡಿದ್ದರು. ರಾತ್ರಿ 12 ಗಂಟೆಯಿಂದ ಶುರುವಾಗಿದ್ದ ಶೋ 24 ಗಂಟೆ ನಿರಂತರ ಪ್ರದರ್ಶನ ಮಾಡಲಾಗಿತ್ತು. ಬೇರೆ ಎಲ್ಲೂ ಅಲ್ಲ ಕರ್ನಾಟಕದಲ್ಲಿಯೇ. ಇದಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ ಎನ್ನುತ್ತಾರೆ ಮಂಜನಾಥ್. 'ಗದರ್ 2' ಉತ್ತರ ಭಾರತದಲ್ಲಷ್ಟೇ ಅಲ್ಲ. ಕರ್ನಾಟಕದಲ್ಲೂ ಉತ್ತಮ ಗಳಿಕೆ ಕಂಡಿದೆ. ಹೀಗಾಗಿ ಜೈಲರ್‌ಗೆ ಹೋಲಿಸಿದರೆ, 'ಗದರ್ 2' ಗಳಿಕೆ ತುಂಬಾನೇ ದೊಡ್ಡದು ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.

More from Filmibeat

English summary
Gadar 2 Box Office Collection In Karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X