ಮೊದಲ ದಿನ ಆಲಿಯಾ ಭಟ್ ಕಮಾಯಿ ಎಷ್ಟು? 'ಸೂರ್ಯವಂಶಿ', '83' ಜೊತೆ ಸೇರಿದ 'ಗಂಗೂಬಾಯಿ'

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ 'ಗಂಗೂಬಾಯಿ ಕಾಠಿಯಾವಾಡಿ' ಅವತಾರವೆತ್ತಿದ ಆಲಿಯಾ ಭಟ್‌ಗೆ ಮೊದಲ ದಿನವೇ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಆಲಿಯಾ ಜೊತೆ ನಟಿಸಿರುವ ಅಜಯ್ ದೇವಗನ್, ವಿಜಯ್ ರಾಜ್, ಶಾಂತನೂ ಮಹೇಶ್ವರಿ ಈ ಬಹು ನಿರೀಕ್ಷೆಯ ಸಿನಿಮಾದಲ್ಲಿ ನಟಿಸಿದ್ದರು. ಫೆಬ್ರವರಿ 25 ರಂದು ನಟಿಸಿದ ಈ ಸಿನಿಮಾ ದಿಗ್ಗಜರೇ ನಟಿಸಿದ್ದರೂ, ಆಲಿಯಾ ಭಟ್ ಸಿನಿಮಾ ಅಂತಲೇ ಗುರುತಿಸಿಕೊಂಡಿತ್ತು. ಹೀಗಾಗಿ ಆಲಿಯಾ ಭಟ್ ಗೆದ್ದರೂ, ಸೋತರೂ ಎರಡೂ ಆಲಿಯಾ ಭಟ್‌ಗೆ ಸಲ್ಲುತ್ತದೆ.

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಆಲಿಯಾ ಭಟ್ ಅಚ್ಚರಿಯ ದಾಖಲೆ ಬರೆದಿದ್ದಾರೆ. ಸೂಪರ್‌ಸ್ಟಾರ್ ಸಿನಿಮಾಗಳು ಮೊದಲ ದಿನ ಗಳಿಕೆ ಮಾಡುವಷ್ಟು ಈ ಸಿನಿಮಾ ಕೂಡ ಮಾಡಿದೆ. ಬಾಲಿವುಡ್ ನಟಿಯೊಬ್ಬರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಮೊದಲ ದಿನ ಈ ಮಟ್ಟಿಗೆ ಗಳಿಕೆ ಕಂಡಿದ್ದು, ಇತ್ತೀಚೆಗಿನ ದಿನಗಳಲ್ಲಿ ಇರಲಿಲ್ಲ. ಅದಲ್ಲದೆ ಕೋವಿಡ್ ನಂತರದ ದಿನಗಳಲ್ಲಿ ತೆರೆಕಂಡ ಬಾಲಿವುಡ್‌ನ ಎರಡು ಸಿನಿಮಾ ಸೂರ್ಯವಂಶಿ ಹಾಗೂ 83 ಮೊದಲ ದಿನದ ಗಳಿಕೆಯ ಜೊತೆ ಗಂಗೂಬಾಯಿ ಕಾಠಿಯಾವಾಡಿ ಕೂಡ ಗುರುತಿಸಿಕೊಂಡಿದೆ.

'ಗಂಗೂಬಾಯಿ' ಮೊದಲ ದಿನದ ಗಳಿಕೆ ಎಷ್ಟು?

'ಗಂಗೂಬಾಯಿ' ಮೊದಲ ದಿನದ ಗಳಿಕೆ ಎಷ್ಟು?

'ಗಂಗೂಬಾಯಿ ಕಾಠಿಯಾವಾಡಿ' ನಿರೀಕ್ಷೆ ಹುಟ್ಟಿಸಲು ಎರಡು ಕಾರಣವಿದೆ. ಮೊದಲನೆಯದು ಸಂಜಯ್ ಲೀಲಾ ಬನ್ಸಾಲಿ. ಎರಡನೆಯದು ಆಲಿಯಾ ಭಟ್. ಇಷ್ಟು ದಿನ ಗಂಗೂಬಾಯಿ ಸಿನಿಮಾದ ಪ್ರಚಾರದ ಪ್ರಮುಖ ಭಾಗವಾಗಿದ್ದು ಈ ಎರಡು ಹೆಸರುಗಳೇ. ಆದರೆ, ಇದರ ಜೊತೆ 'ಗಂಗೂಬಾಯಿ ಕಾಠಿಯಾವಾಡಿ' ಯಾರು ಅನ್ನುವ ಕುತೂಹಲ ಸಿನಿಮಾಗೆ ಪ್ಲಸ್ ಆಗಿದ್ದರಲ್ಲಿ ಅನುಮಾನವಿಲ್ಲ. ಈ ಕಾರಣಕ್ಕೆ ಆಲಿಯಾ ಭಟ್ ಅಭಿನಯದ ಈ ಚಿತ್ರದ ಮೇಲೆ ಬಾಲಿವುಡ್‌ ಮಂದಿ ಕಣ್ಣಿಟ್ಟಿದ್ದರು. ಅದರಂತೆ ಮೊದಲ ದಿನದ ಗಳಿಕೆ 10.50 ಕೋಟಿ ದಾಟಿದೆ.

ಆಲಿಯಾ ಕರಿಯರ್‌ನಲ್ಲೇ ದಾಖಲೆ ಕಲೆಕ್ಷನ್

ಆಲಿಯಾ ಕರಿಯರ್‌ನಲ್ಲೇ ದಾಖಲೆ ಕಲೆಕ್ಷನ್

ಆಲಿಯಾ ಭಟ್ ಸೋಲೊ ನಾಯಕಿಯಾಗಿ ನಟಿಸಿದ ಸಿನಿಮಾಗಳಲ್ಲಿ ಮೊದಲ ದಿನ ಅತೀ ಹೆಚ್ಚು ತಂದುಕೊಟ್ಟಿದ್ದು 'ಗಂಗೂಬಾಯಿ ಕಾಠಿಯಾವಾಡಿ'. ಈ ಗಳಿಕೆ ಬಾಲಿವುಡ್‌ನ ಬಿ ಗ್ರೇಡ್ ನಟರ ಮೊದಲ ಸಿನಿಮಾಗಳಿಗೆ ಸಮ. ಅಂದರೆ, ಬಾಲಿವುಡ್ ನಟರಷ್ಟೇ ಪವರ್‌ಫುಲ್ ಆಗಿ ಆಲಿಯಾ ಭಟ್ ಬೆಳೆದು ನಿಂತಿದ್ದಾರೆ ಅನ್ನುವುದನ್ನು ಈ ಸಿನಿಮಾ ಸಾಬೀತು ಮಾಡಿದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನ ಕೂಡ 10 ಕೋಟಿಗೂ ಅಧಿಕ ಹಣ ಗಳಿಸಿದೆ. ಆಲಿಯಾ ಭಟ್ ವೃತ್ತಿ ಬದುಕಿನಲ್ಲಿ ಹೊಸ ದಾಖಲೆ ಬರೆದಂತೆ.

'ಸೂರ್ಯವಂಶಿ', '83' ಸಾಲಿಗೆ ಸೇರಿದ ಆಲಿಯಾ ಗಳಿಕೆ

'ಸೂರ್ಯವಂಶಿ', '83' ಸಾಲಿಗೆ ಸೇರಿದ ಆಲಿಯಾ ಗಳಿಕೆ

ಗಂಗೂಬಾಯಿ ಕಾಠಿಯಾವಾಡಿ ಹೊಸ ದಾಖಲೆ ಬರೆದಿದೆ. ಕೊರೊನಾ ಸಾಂಕ್ರಾಮಿಕ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ. ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾ ಆಗಿದೆ. ಅಕ್ಷಯ್ ಕುಮಾರ್ ನಟಿಸಿದ 'ಸೂರ್ಯವಂಶಿ' ಸಿನಿಮಾ ಮೊದಲ ಸಿನಿಮಾ 26.29 ಕೋಟಿ ಗಳಿಸಿತ್ತು. ರಣ್‌ವೀರ್ ಸಿಂಗ್ ನಟಿಸಿದ '83' ಸಿನಿಮಾ 12.64 ಕೋಟಿ ಗಳಿಸಿತ್ತು. ಇದರ ಜೊತೆ ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ' 10.50 ಕೋಟಿ ಗಳಿಸಿದೆ. ಇದು ಕೊರೊನಾ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾ ಆಗಿದೆ.

ರಜೆ ದಿನಗಳಲ್ಲಿ 'ಗಂಗೂಬಾಯಿ' ರಿಲೀಸ್ ಆಗಿಲ್ಲ

ರಜೆ ದಿನಗಳಲ್ಲಿ 'ಗಂಗೂಬಾಯಿ' ರಿಲೀಸ್ ಆಗಿಲ್ಲ

ಅಕ್ಷಯ್ ಕುಮಾರ್ ನಟಿಸಿದ 'ಸೂರ್ಯವಂಶಿ' 2021ಕ್ಕೆ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿತ್ತು. ಹಾಗೇ ರಣ್‌ವೀರ್ ಸಿಂಗ್ ಅಭಿನಯದ '83' ಸಿನಿಮಾ ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆಯಾಗಿತ್ತು. ಆದರೆ, ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಸಿನಿಮಾ ಹಬ್ಬದ ದಿನಗಳಲ್ಲಿ ಬಿಡುಗಡೆಯಾಗಿಲ್ಲ. ಒಂದು ವೇಳೆ ರಜೆ ದಿನಗಳಲ್ಲಿ ಗಂಗೂಬಾಯಿ ಬಿಡುಗಡೆಯಾಗಿದ್ದರೆ ರಣ್‌ವೀರ್ ಸಿಂಗ್ ನಟಿಸಿದ '83'ಯನ್ನು ಗಳಿಸಿದ ಮೊದಲ ದಿನದ ಕಲೆಕ್ಷನ್‌ ಅನ್ನು ಹಿಂದಿಕ್ಕುತ್ತಿತ್ತು ಎನ್ನುತ್ತಿದೆ ಬಾಲಿವುಡ್.

More from Filmibeat

English summary
Gangubai Kathiawadi Day 1 Box Office Collection follows same league as 83 and Sooryavanshi. Akshay Kumar starrer Sooryavanshi day 1 collection 26.29crore, Ranveer Singh 83 day 1 collection 12.64crore and Gangubai Kathiawadi day1 collection 10.50crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X