"5 ವರ್ಷ ಇರ್ಫಾನ್ ಜೊತೆ ಡೇಟಿಂಗ್.. ಗೌತಮ್ ಗಂಭೀರ್ ಮಿಸ್ ಕಾಲ್ ಕೊಡ್ತಿದ್ದ": ಹೊಸ ಬಾಂಬ್ ಸಿಡಿಸಿದ ಪಾಯಲ್ ಘೋಷ್!
ನಟಿ ಪಾಯಲ್ ಘೋಷ್ ಕೆಲ ಬಾಲಿವುಡ್ ಮಂದಿಗೆ ಹಾಗೂ ಕ್ರಿಕೆಟ್ ಆಟಗಾರರಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಯಾವಾಗ ಬೇಕಾದ್ರೂ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುವ ಈ ನಟಿ ಇಂದು (ಡಿಸೆಂಬರ್ 1) ಒಂದರ ಹಿಂದೊಂದು ಟ್ವೀಟ್‌ಗಳನ್ನು (X) ಮಾಡಿದ್ದಾರೆ. ಸಿನಿಮಾ ಹಾಗೂ ಕ್ರಿಕೆಟ್ ದಿಗ್ಗಜರ ಬಗ್ಗೆ ಗಂಭೀರ್ ಆರೋಪ ಮಾಡಿದ್ದಾರೆ.
ಪಾಯಲ್ ಘೋಷ್ ಮಾಡಿದ ಸರಣಿ ಟ್ವೀಟ್‌ಗಳಲ್ಲಿ (X) ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್, ಗೌತಮ್ ಗಂಭೀರ್ ಬಗ್ಗೆ ಗಂಭೀರ್ ಆರೋಪ ಮಾಡಿದ್ದಾರೆ. ಹಾಗೇ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿರ್ದೇಶಕ ಅನುರಾಗ್ ಕಶ್ಯಪ್ ಬಗ್ಗೆನೂ ಆರೋಪ ಮಾಡಿದ್ದಾರೆ. ಇದು ಬಾಲಿವುಡ್ ಜಗತ್ತಿನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ಪಾಯಲ್ ಘೋಷ್ ಯಾರ ಬಗ್ಗೆ ಏನೇನು ಆರೋಪ ಮಾಡಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

"ಇರ್ಫಾನ್ ಜೊತೆ ಐದು ವರ್ ಡೇಟಿಂಗ್"
ವಿಶ್ವಕಪ್ 2023ಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರೋ ಮೊಹಮ್ಮದ್ ಶಮಿಯನ್ನು ಮದುವೆಯಾಗುವುದಾಗಿ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಈಗ ಆ ಹೇಳಿಕೆ ಬಗ್ಗೆ ನೆಟ್ಟಿಗರಿಗೆ ಸ್ಪಷ್ಟತೆ ನೀಡಿದ್ದು, ತಮಾಷೆಗಾಗಿ ಟ್ವೀಟ್ ಮಾಡಿದ್ದೆ ಎಂದು ಹೇಳಿದ್ದಾರೆ. ಈ ವೇಳೆ "ನಾನು ಯಾವುದೇ ಶಮಿ-ವಾಮಿಯನ್ನು ಮದುವೆಯಾಗುವುದಿಲ್ಲ. ನಾನು ಸಾಮಾನ್ಯ ಹುಡುಗನನ್ನು ಮದುವೆ ಆಗಲು ಇಷ್ಟಪಡುತ್ತೇನೆ. ನಾನು ಇರ್ಫಾನ್ ಪಠಾಣ್ ಜೊತೆ ಐದು ವರ್ಷ ಡೇಟ್ ಮಾಡಿದ್ದೆ. ಆದರೆ, ಅದು ಮುರಿದುಬಿತ್ತು. ಇನ್ನು ಯಾರನ್ನೂ ಸುಲಭವಾಗಿ ನಂಬೋಲ್ಲ" ಎಂದು ಡೇಟ್ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
"ಗೌತಮ್ ಗಂಭೀರ್ ಮಿಸ್ ಕಾಲ್"
ಇರ್ಪಾನ್ ಪಠಾಣ್ ಜೊತೆ ಡೇಟಿಂಗ್ ಬಗ್ಗೆ ಮಾತಾಡಿದ್ದ ನಟಿ, ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಗ್ಗೆನೂ ಟ್ವೀಟ್ ಮಾಡಿದ್ದಾರೆ. "ಗೌತಮ್ ಗಂಭೀರ್ ಮತ್ತು ಅಕ್ಷಯ್ ಕುಮಾರ್ ಎಲ್ಲರೂ ನನ್ನ ಹಿಂದೆ ಇದ್ದರು. ಆದರೆ, ನಾನು ಮಾತ್ರ ಇರ್ಫಾನ್ ಪಠಾಣ್‌ರನ್ನು ಪ್ರೀತಿಸುತ್ತಿದ್ದೆ ಎಂದಿದ್ದಾರೆ. ಈ ವೇಳೆ "ಗೌತಮ್ ಗಂಭೀರ್ ನನಗೆ ನಿರಂತರವಾಗಿ ಮಿಸ್‌ಕಾಲ್ ನೀಡುತ್ತಿದ್ದರು. ಈ ವಿಷಯ ಇರ್ಫಾನ್ ಪಠಾಣ್‌ಗೆ ಚೆನ್ನಾಗಿ ತಿಳಿದಿತ್ತು. ಅವರು ನನಗೆ ಬರೋ ಪ್ರತಿ ಪೋನ್ ಕಾಲ್ ಅನ್ನೂ ಪರಿಶೀಲಿಸುತ್ತಿದ್ದರು. ಬರೋಡಾದ ಪಂದ್ಯ ನಡೆಯುತ್ತಿದ್ದ ವೇಳೆ ಇರ್ಫಾನ್ ಭೇಟಿಯಾಗಲು ಪೂನಾಗೆ ಹೋಗಿದ್ದೆ. ಆಗ ಯೂಸುಫ್ ಭಾಯ್, ಹಾರ್ದಿಕ್,ಕುನಾಲ್ ಪಾಂಡ್ಯ ಅವರಿಗೂ ಈ ವಿಷಯವನ್ನು ಇರ್ಫಾನ್ ಹೇಳಿದ್ದರು" ಎಂದು ಪಾಯಲ್ ಟ್ವೀಟ್ ಮಾಡಿದ್ದಾರೆ.

"ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದ"
ಈ ಹಿಂದೆ ಕೂಡ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅನುರಾಗ್ ಕಶ್ಯಪ್ ನನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದರು. ಈಗ ಮತ್ತೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಆರೋಪ ಮಾಡಿದ್ದಾರೆ. " ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಅಕ್ಷಯ್ ಕುಮಾರ್ ನನ್ನೊಂದಿಗೆ ಯಾವಾಗಲೂ ಅಸಭ್ಯವಾಗಿ ವರ್ತಿಸಿಲ್ಲ. ಎಂತಹ ದೊಡ್ಡ ಸ್ಟಾರ್, ನಾನು ಯಾವಾಗಲೂ ಅವರನ್ನು ಗೌರವಿಸುತ್ತೇನೆ. ಅನುರಾಗ್ ಕಶ್ಯಪ್ ನಟ ಅಕ್ಷಯ್ ಕುಮಾರ್‌ನ ಶೂಗೂ ಸರಿಸಮಾನರಲ್ಲ." ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.
"ನಾನು ಅನಾರೋಗ್ಯಕ್ಕೀಡಾಗಿದ್ದೆ"
ಪಾಯಲ್ ಘೋಷ್ ಮಾಡಿದ ಸರಣಿ ಟ್ವೀಟ್‌ನಲ್ಲಿ ಇರ್ಪಾನ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಇರ್ಫಾನ್ ಜೊತೆ ಬ್ರೇಕಪ್ ಆದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದೆ ಎಂದಿದ್ದಾರೆ. " ಹೇ ಇರ್ಫಾನ್.. ನನ್ನ ಬಗ್ಗೆ ಮಾತಾಡು.. ಎಷ್ಟು ದಿನ ಮೊಸರು ಬಾಯಲ್ಲಿಟ್ಟುಕೊಂಡು ಕೂರುತ್ತೀಯ..? ನಮ್ಮಿಬ್ಬರ ಬ್ರೇಕಪ್ ಬಳಿಕ ನನ್ನ ಆರೋಗ್ಯ ಕೆಟ್ಟಿತ್ತು. ನಾನು ವರ್ಷಗಟ್ಟಲೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆದರೆ ನನ್ನ ಹೃದಯದಿಂದ ನಾನು ಬಯಸುವ ಏಕೈಕ ವ್ಯಕ್ತಿ ಇರ್ಫಾನ್ ಪಠಾಣ್ ಎಂಬುದು ಅಕ್ಷರಶ: ನಿಜ." ಎಂದು ಹೇಳಿದ್ದಾರೆ.


Click it and Unblock the Notifications











