2023ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಭಾರತದ ಸಿನಿಮಾಗಳ ಪಟ್ಟಿ ಇಲ್ಲಿದೆ
2023ನೇ ಸಾಲಿನಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲಾಗಿರುವ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಭಾರತದ 10 ಸಿನಿಮಾ ಪಟ್ಟಿಯಲ್ಲಿ ಬಾಲಿವುಡ್, ತೆಲುಗು ಹಾಗೂ ತಮಿಳು ಸಿನಿಮಾಗಳಿವೆ. ಇದರಲ್ಲಿ ಶಾರುಖ್ ಖಾನ್ ಸಿನಿಮಾ ಟಾಪ್ ಲಿಸ್ಟ್‌ನಲ್ಲಿದೆ.
ಈ ವರ್ಷ ಅಗ್ರಸ್ಥಾನಕ್ಕೆ ಶಾರುಖ್ ಖಾನ್ ಹಾಗೂ ಸನ್ನಿ ಡಿಯೋಲ್ ನಡುವೆ ಪೈಪೋಟಿ ನಡೆದಿತ್ತು. ಇದರಲ್ಲಿ ಶಾರುಖ್ ಖಾನ್ ಸಿನಿಮಾ ಅಂತಿಮವಾಗಿ ಟಾಪ್ ಸ್ಥಾನ ಅಲಂಕರಿಸಿದೆ. ಟಾಪ್‌ನಲ್ಲಿ ಇರುವ ಮೊದಲ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದವು. ಇನ್ನು ಕೆಲವು ಸಿನಿಮಾಗಳು ವಿವಾದಗಳಿಂದ ಸುದ್ದಿಯಲ್ಲಿದ್ದವು.

ಮೊದಲ ಮೂರು ಸ್ಥಾನದಲ್ಲಿ ಕ್ರಮವಾಗಿ 'ಜವಾನ್', 'ಗದರ್ 2' ಹಾಗೂ ಹಾಲಿವುಡ್ ಸಿನಿಮಾ 'ಓಪನ್‌ಹೈಮರ್' ಸ್ಥಾನವನ್ನು ಪಡೆದುಕೊಂಡಿವೆ. ಈ ಮೂರು ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿವೆ. ಶಾರುಖ್ ಖಾನ್ ಜವಾನ್ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸಿದ್ದರೆ, ಗದರ್ 2 ಮೂಲಕ ಬಾಲಿವುಡ್‌ಗೆ ಮತ್ತೆ ಕಮ್‌ಬ್ಯಾಕ್ ಮಾಡಿದ್ದ ಸನ್ನಿ ಡಿಯೋಲ್ ಕೂಡ ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದರು.
ಇನ್ನು ಹಾಲಿವುಡ್ ಸಿನಿಮಾ 'ಓಪನ್‌ಹೈಮರ್' ಭಾರತದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಭಾರತದ ಸಿನಿಮಾಗಳಿಗೆ ಪೈಪೋಟಿ ನೀಡುವಲ್ಲಿ ಇದು ಯಶಸ್ವಿಯಾಗಿತ್ತು. ಇದರೊಂದಿಗೆ ಪ್ರಭಾಸ್ ಸಿನಿಮಾ 'ಆದಿಪುರುಷ್' ನಾಲ್ಕನೇ ಸ್ಥಾನದಲ್ಲಿದೆ. ರಾಮಾಯಣ ಕಥೆಯನ್ನು ತೆರೆಮೇಲೆ ತರಲು ಹೊರಟಿದ್ದ ಈ ಸಿನಿಮಾ ಗ್ರಾಫಿಕ್ಸ್ ಹಾಗೂ ಡೈಲಾಗ್‌ಗಳ ವಿವಾದದಿಂದ ಹೆಚ್ಚು ಚರ್ಚೆಯಲ್ಲಿತ್ತು. ಅಂದ್ಹಾಗೆ ಗೂಗಲ್ ರಿಲೀಸ್ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

ಗೂಗಲ್ ಟಾಪ್ 10 ಸಿನಿಮಾಗಳು
1 ಜವಾನ್
2 ಗದರ್ 2
3 ಓಪನ್‌ಹೈಮರ್
4 ಆದಿಪುರುಷ್
5 ಪಠಾಣ್
6 ದಿ ಕೇರಳ ಸ್ಟೋರಿ
7 ಜೈಲರ್
8 ಲಿಯೋ
9 ಟೈಗರ್ 3
10 ವಾರಿಸು
ಶಾರುಖ್ ಖಾನ್ ಕಮ್‌ಬ್ಯಾಕ್ ಮಾಡಿದ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಲೂಟಿ ಮಾಡಿತ್ತು. ಕಮ್‌ಬ್ಯಾಕ್ ಸಿನಿಮಾದಿಂದಾನೇ ಕಿಂಗ್ ಖಾನ್ ಬಾಲಿವುಡ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದರು. ಇದು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಭಾರತದ ಐದನೇ ಸಿನಿಮಾ ಆಗಿದೆ.
ಹಾಗೇ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' 6ನೇ ಸ್ಥಾನದಲ್ಲಿ ಇದೆ. 'ದಿ ಕಾಶ್ಮೀರ್ ಫೈಲ್ಸ್' ನಂತಯೇ ಈ ಸಿನಿಮಾ ಕೂಡ ವಿವಾದವನ್ನು ಸೃಷ್ಟಿಸಿತ್ತು. ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದರು. ಕೆಲವಡೆ ವಿರೋಧವೂ ವ್ಯಕ್ತವಾಗಿತ್ತು.
ಇನ್ನು ಏಳನೇ ಸ್ಥಾನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾ 'ಜೈಲರ್' ಇದೆ. ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡಿದ್ದ ರಜನಿ ಹಾಗೂ ನೆಲ್ಸನ್ ದಿಲೀಪ್ ಕುಮಾರ್‌ಗೆ ಸೂಪರ್‌ಸಕ್ಸಸ್ ತಂದುಕೊಟ್ಟಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 700 ಕೋಟಿ ರೂಪಾಯಿ ಗಳಿಕೆ ಕಂಡ ಸಿನಿಮಾವಿದು. ದಳಪತಿ ವಿಜಯ್ ಸಿನಿಮಾ 'ಲಿಯೋ' ಎಂಟನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ 'ಟೈಗರ್ 3' 9ನೇ ಸ್ಥಾನದಲ್ಲಿದೆ. 10ನೇ ಸ್ಥಾನದಲ್ಲಿ ದಳಪತಿ ವಿಜಯ್ ನಟನೆಯ ಸಿನಿಮಾ 'ವಾರಿಸು' ಇದೆ.


Click it and Unblock the Notifications











