ಬಾಲಿವುಡ್ ನಟ ಗೋವಿಂದನ ಮನೆಯಲ್ಲಿ 20 ದಿನ ಇದ್ದ ಸಚಿವರ ಮಗಳು; ಪತ್ನಿ ಬಾಯ್ಬಿಟ್ಟ ಸತ್ಯವೇನು?

ಬಾಲಿವುಡ್ ನಟ ಗೋವಿಂದ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದ ನಟ. ಇವರೊಂದಿಗೆ ನಟಿಸುವುದಕ್ಕೆ ನಟಿಯರು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಗೋವಿಂದ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗುತ್ತಿತ್ತು. ಅಂತಹ ಕಾಲದಲ್ಲಿ ಈ ನಟನನಿಗಾಗಿ ಪ್ರಾಣ ಬಿಡುತ್ತಿದ್ದ ಲೇಡಿ ಫ್ಯಾನ್ಸ್‌ಗೇನು ಕಮ್ಮಿಯಿರಲಿಲ್ಲ. ಭಾರತದಲ್ಲಿ ಇಂತಹ ಅಭಿಮಾನಿಗಳು ಸಾಮಾನ್ಯ. ಈ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತೆ.

ತಮ್ಮ ನೆಚ್ಚಿನ ತಾರೆಯೊಂದಿಗೆ ಆಟೋಗ್ರಾಫ್‌ಗಾಗಿಯೋ, ಒಂದು ಸೆಲ್ಫಿಗಾಗಿಯೋ, ಇಲ್ಲ ಫೋಟೋ ತೆಗೆಸಿಕೊಳ್ಳುವುದಕ್ಕಾಗಿಯೋ ಹಾತೊರೆಯುತ್ತಿರುತ್ತಾರೆ. ಗೋವಿಂದಗಾಗಿ ಇಂತಹ ಒಂದು ಅಭಿಮಾನಿ ವರ್ಗವಿತ್ತು. ಈ ನಟ ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ಅಭಿಮಾನಿಗಳಷ್ಟೇ ಅಲ್ಲ ಬಾಲಿವುಡ್ ನಟಿಯರೂ ಕೂಡ ಒಳಗೊಳಗೆ ಇಷ್ಟ ಪಡುತ್ತಿದ್ದರು.

Govinda s wife Sunita Ahuja said that the minister s daughter stayed in their house for 20 days

ಅದಾಗಲೇ ಬಾಲಿವುಡ್‌ನಲ್ಲಿ ಕೆಲವು ಕುಟುಂಬಗಳು ಬಾಲಿವುಡ್‌ ಅನ್ನು ಆಳುತ್ತಿದ್ದವು. ಇಂತಹ ಹೆವಿ ಕಾಂಪಿಟೇಷನ್ ಮಧ್ಯೆ ಗೋವಿಂದ ಪುಟಿದೆದ್ದಿದ್ದರು. ಕಪೂರ್, ಖಾನ್ ಕುಟುಂಬ ಸ್ಟಾರ್ ನಡುವೆ ಈ ನಟ ಸೆಟೆದು ನಿಂತಿದ್ದ. ಯಶಸ್ಸು ಇವರವನ್ನು ಆ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಈ ನಟನ ಮೇಲೆ ಸಚಿವರ ಮಗಳೊಬ್ಬಳಿಗೆ ಸಿಕ್ಕಾಪಟ್ಟೆ ಪ್ರೀತಿ ಹುಟ್ಟಿತ್ತು. ಹೀಗಾಗಿ 20 ದಿನಗಳ ಕಾಲ ಗೋವಿಂದನ ಮನೆಯಲ್ಲಿಯೇ ಇದ್ದಳು ಎಂದು ಸ್ವತ: ಪತ್ನಿಯೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಘಟನೆ ಏನು ಅಂತ ತಿಳಿಯಲು ಮುಂದೆ ಓದಿ.

86ರಲ್ಲಿ ಗೋವಿಂದಾ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆದರೆ, ಈ ಸಾಗರದಲ್ಲಿ ನೆಲೆಯೂರುವುದು ಅಷ್ಟು ಸುಲಭದ್ದಾಗಿರಲಿಲ್ಲ. ಒಂದಿಷ್ಟು ಲವ್‌ ಸ್ಟೋರಿ, ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿದ್ದರು. ಆದರೆ, ಅವರ ವೃತ್ತಿ ಬದುಕನ್ನು ಉತ್ತುಂಗಕ್ಕೆ ಏರಿಸಿದ್ದು ಕಾಮಿಡಿ ಸಿನಿಮಾಗಳ ಮೂಲಕ. ರಾಜಾ ಬಾಬು, ಕೂಲಿ ನಂ. 1. ಹೀರೋ ನಂ. 1, ದೀವಾನಾ ಮಸ್ತಾನಾ, ದುಲ್ಹೆ ರಾಜಾ, ಬಡೇ ಮಿಯಾ ಚೋಟಾ ಮಿಯಾ, ಜೋಡಿ ನಂ. 1 ಅಂತಹ ಸಿನಿಮಾಗಳ ಭರ್ಜರಿ ಹಿಟ್ ಆಗಿದ್ದವು. ಗೋವಿಂದನಾ ಕಾಮಿಡಿ ದೃಶ್ಯಗಳಿಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದರು.

ಒಂದೇ ದಿನ ಗೋವಿಂದ ಎರಡು ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡಿದ್ದು ಕೂಡ ಇದೆ. ಅಷ್ಟೊಂದು ಬ್ಯುಸಿಯಾಗಿದ್ದ ನಟನ ಜೊತೆ ಬಾಲಿವುಡ್ ನಾಯಕಿಯರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಆದರೆ, ಗೋವಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಒಂದು ಬಳಿಕ ಪತ್ನಿ ಸುನೀತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ಅವರ ವೃತ್ತಿ ಬದುಕು ಮತ್ತಷ್ಟು ಎತ್ತರಕ್ಕೆ ಹೋಗಿತ್ತು. ಗೋವಿಂದ ಪೀಕ್‌ನಲ್ಲಿ ಇದ್ದಾಗ ಬಾಲಿವುಡ್ ನಟಿ ನೀಲಂ ಕೊಠಾರಿ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆಂಬ ಸುದ್ದಿ ಕೂಡ ಹಬ್ಬಿತ್ತು. ಈ ಗಾಳಿ ಸುದ್ದಿಯ ಬಗ್ಗೆ ಗೋವಿಂದ ತನ್ನ ಪತ್ನಿಯ ಬಳಿ ಹೇಳಿಕೊಂಡಿದ್ದರಂತೆ.

Govinda s wife Sunita Ahuja said that the minister s daughter stayed in their house for 20 days

ಗೋವಿಂದ ಅವರ ಪತ್ನಿ ಸುನೀತಾ ಸಂದರ್ಶನವೊಂದರಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ರಿವೀಲ್ ಮಾಡಿದ್ದರು. ಸಚಿವರ ಮಗಳೊಬ್ಬರು ತಮ್ಮ ಮನೆಯಲ್ಲಿ ಸುಮಾರು 20 ದಿನಗಳ ಕಾಲ ಕೆಲಸದವಳಾಗಿ ಇದ್ದಳು ಎಂದು ಹೇಳಿದ್ದರು. ಗೋವಿಂದ ಹಾಗೂ ಸುನೀತಾ ಇಬ್ಬರೂ ಮದುವೆಯಾದ ಬಳಿಕ ಒಬ್ಬ ಹುಡುಗಿ ಬಂದ ಮನೆ ಕೆಲಸದವಾಗಿ ಸೇರಿಕೊಂಡಿದ್ದಳು. ಗೋವಿಂದರನ್ನು ನೋಡುವುದಕ್ಕೆ ನಿದ್ದೆನೇ ಮಾಡದೆ ಕಾಯುತ್ತಿರುವುದಾಗಿ ಹೇಳಿದ್ದಳು. ಆ ಬಳಿಕ ಸುನೀತಾ ಅವರಿಗೆ ಆ ಹುಡುಗಿ ಯಾರು ಅನ್ನೋದು ರಹಸ್ಯ ಗೊತ್ತಾಗಿತ್ತು.

ಆಕೆ ಬಾಲಿವುಡ್ ನಟ ಗೋವಿಂದರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದರು. ಗೋವಿಂದ ಜೊತೆ ಹಗಲು, ರಾತ್ರಿ ಎನ್ನದೆ ಇರುವುದಕ್ಕೆ ಬಯಸುತ್ತಿದ್ದಳು ಎಂಸು ಸುನೀತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಬಳಿಕ ಈ ವಿಷಯ ಸಚಿವರಿಗೆ ಗೊತ್ತಾಗುತ್ತಿದ್ದಂತೆ ನಾಲ್ಕು ಕಾರುಗಳಲ್ಲಿ ಬಂದು ಅವಳನ್ನು ಕರೆದುಕೊಂಡು ಹೋಗಿದ್ದರೆಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ "ಗೋವಿಂದರನ್ನು ಹುಡುಕಿಕೊಂಡು ಬಂದಿದ್ದ ಸಚಿವರ ಯಾರು?" ಎಂದು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Govinda's wife, Sunita Ahuja, said that the minister's daughter stayed in their house for 20 days.
Read more about: govinda wife love affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X