ಈ ಬಾಲಿವುಡ್ ಸಾಯಿ ಪಲ್ಲವಿ ಮೇಲೆ ಕ್ರಶ್: "ಪೋನ್ ನಂ ಇದೆ.. ಮಾತಾಡೋ ಧೈರ್ಯವಿಲ್ಲ" ಎಂದ ನಟ
ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅದೆಷ್ಟೋ ಹುಡುಗರ ಕನಸಿನ ರಾಣಿ. ತಮ್ಮ ಜೀವನದಲ್ಲಿ ಇಂತಹ ಹುಡುಗಿ ಬರಲಿ ಅಂತ ಅದೆಷ್ಟು ಮಂದಿ ಅದೆಲ್ಲೆಲ್ಲಿ ಹರಕೆ ಹೊತ್ತುಕೊಂಡಿದ್ದಾರೋ ಗೊತ್ತಿಲ್ಲ. ಈ ನಟಿಯನ್ನು ನೆನೆದು ಅದೆಷ್ಟು ಮಂದಿ ತಲೆಕೆಡಿಸಿಕೊಂಡಿದಾರೋ..
ಹೀಗೆ ಸಾಯಿ ಪಲ್ಲವಿ ಮೇಲಿನ ಕ್ರಶ್‌ಗೆ ಅದೆಷ್ಟು ಮಂದಿ ಹುಚ್ಚರಂತಾಗಿದ್ದಾರೋ ಗೊತ್ತಿಲ್ಲ. ಆದರೆ, ಫಾರ್ ಎ ಚೇಂಜ್ ಬಾಲಿವುಡ್ ನಟನೊಬ್ಬನಿಗೆ ಸಾಯಿ ಪಲ್ಲವಿ ಮೇಲೆ ಕ್ರಶ್ ಆಗಿಬಿಟ್ಟಿದೆ. ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ.

ಸಾಯಿ ಪಲ್ಲವಿ ಉಳಿದ ನಟಿಯರಿಗಿಂತ ಭಿನ್ನ. ಗ್ಲಾಮರಸ್ ರೋಲ್‌ಗಳಿಂದ ಅಭಿಮಾನಿಗಳನ್ನು ಸಂಪಾಧಿಸಿಲ್ಲ. ತನ್ನ ಸಹಜ ಸೌಂದರ್ಯದಿಂದ, ಟ್ರೆಡಿಷನಲ್ ಲುಕ್‌ನಿಂದಲೇ ಫ್ಯಾನ್ಸ್ ಹೃದಯ ಗೆದ್ದಿದ್ದಾರೆ. ಬಾಲಿವುಡ್ ನಟ ಕೂಡ ಈಕೆಯ ಸರಳತೆಗೆ ಕರಗಿ ಹೋಗಿದ್ದಾನೆ. ಅಷ್ಟಕ್ಕೂ ಸಾಯಿ ಪಲ್ಲವಿ ಮೇಲೆ ಕ್ರಶ್ ಆಗಿದೆ ಅಂತ ಹೇಳಿದ ಆ ಬಾಲಿವುಡ್ ನಟ ಯಾರು? ಏನು ಹೇಳಿದ್ದಾನೆ? ಅವನ ಹಿನ್ನೆಲೆಯೇನು? ಅಂತ ತಿಳಿಯಲು ಮುಂದೆ ಓದಿ.
"ಸಾಯಿ ಪಲ್ಲವಿ ಮೇಲೆ ಕ್ರಶ್ ಆಗಿದೆ"
ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ. ಮಲಯಾಳಂನ 'ಪ್ರೇಮಂ' ಸಿನಿಮಾದಿಂದ ಫೇಮಸ್ ಆದ ನಟಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದಾದ್ಯಂತ ಈಕೆಗೆ ಅಭಿಮಾನಿಗಳಿದ್ದಾರೆ. ಸಾಯಿ ಪಲ್ಲವಿಯನ್ನು ಮನಸಾರೆ ಇಷ್ಟ ಪಡುವವವರಿದ್ದಾರೆ. ಈಗ ಬಾಲಿವುಡ್ ನಟನಿಗೂ ಸಹಜ ಸುಂದರಿ ಇಷ್ಟ ಆಗಿಬಿಟ್ಟಿದ್ದಾರೆ.

ಸಾಯಿ ಪಲ್ಲವಿ ಮೇಲೆ ಕ್ರಶ್ ಆಗಿರೋ ಆ ನಟ ಮತ್ಯಾರೂ ಅಲ್ಲ ಗುಲ್ಶನ್ ಗ್ರೋವರ್. ಬಾಲಿವುಡ್‌ನಲ್ಲಿ ತನ್ನದೇ ವಿಭಿನ್ನ ಹಾದಿ ಹಿಡಿದು ಯಶಸ್ಸು ಕಂಡಿರುವ ನಟ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಬಗ್ಗೆ ಮುಕ್ತವಾಗಿ ಮಾತಾಡಿದ್ದು, ಆಕೆ ಕ್ರಶ್ ಆಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾನೆ. ಈ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ.
ಗುಲ್ಶನ್ ದೇವಯ್ಯ ಹೇಳಿದ್ದೇನು?
" ಸಾಯಿ ಪಲ್ಲವಿ ಬಗ್ಗೆ ನನಗೆ ಸಿಕ್ಕಾಪಟ್ಟೆ ಕ್ರಶ್ ಆಗಿದೆ. ಕೆಲವು ದಿನಗಳಿಂದ ಇದು ನಡೆಯುತ್ತಿದೆ. ನನ್ನ ಬಳಿ ಅವರ ನಂಬರ್ ಕೂಡ ಇದೆ. ಆದರೆ, ಅವಳ ಹತ್ತಿರ ಹೋಗುವಷ್ಟು ಶಕ್ತಿ ನನಗಿಲ್ಲ. ಅವರು ತುಂಬಾ ಒಳ್ಳೆಯ ಡ್ಯಾನ್ಸರ್ ಹಾಗೂ ಆಕ್ಟರ್. ನನಗೆ ಇದು ಕೇವಲ ಕ್ರಶ್ ಅಂತ ಅನಿಸುತ್ತಿದೆ ಅಷ್ಟೇ" ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ.
" ನಾನು ಕೆಲವೊಮ್ಮೆ ಅವರಿಂದ ವ್ಯಾಮೋಹಕ್ಕೆ ಒಳಗಾಗುತ್ತೇನೆ. ಅವರು ಒಳ್ಳೆಯ ನಟಿ. ಮುಂದೊಂದು ದಿನ ನನ್ನ ಜೀವನದಲ್ಲಿ ಅವರೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತೆ ಎಂದು ಅಂದುಕೊಂಡಿದ್ದೇನೆ. ಅದು ನನಗೆ ಖುಷಿ ಕೊಡುತ್ತೆ ಅಂದುಕೊಂಡಿದ್ದೇನೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಏನು ಮಾಡುತ್ತೇನೆ ಅನ್ನೋದೂ ಪ್ರಶ್ನೆನೂ ಇದೆ." ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ.
ಸಾಯಿ ಪಲ್ಲವಿ ಕೈಯಲ್ಲಿಸ ಬಿಗ್ ಪ್ರಾಜೆಕ್ಟ್
ಸಾಯಿ ಪಲ್ಲವಿ ಇತ್ತೀಚೆಗಿನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿಲ್ಲ. 'ಗಾರ್ಗಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದ್ದರೂ, ಆ ಸಿನಿಮಾ ಗೆಲ್ಲಲಿಲ್ಲ. ಈಗ ಕಮಲ್ ಹಾಸನ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನೊಂದು ಕಡೆ ಗುಲ್ಶನ್ ದೇವಯ್ಯ ಕೈಯಲ್ಲೂ ಸಾಲು ಸಾಲು ಪ್ರಾಜೆಕ್ಟ್‌ಗಳಿವೆ. 'ಹಂಟರ್', 'ಹೇಟ್ ಸ್ಟೋರಿ' ಅಂತ ಸಿನಿಮಾಗಳಲ್ಲಿ ನಟಿಸಿರೋ ಈ ನಟ ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ 'ಘೋಸ್ಟ್ ಸ್ಟೋರಿಸ್'ನಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











