#MeToo: ಅಮಿತಾಬ್ ಬಚ್ಚನ್ ಟಾರ್ಗೆಟ್ ಮಾಡಿದ ಕೇಶ ವಿನ್ಯಾಸಕಿ ಸ್ವಪ್ನಾ

Recommended Video

ಅಮಿತಾಬ್ ಬಚ್ಚನ್ ಟಾರ್ಗೆಟ್ ಮಾಡಿದ ಕೇಶ ವಿನ್ಯಾಸಕಿ ಸ್ವಪ್ನಾ ಭವಾನಿ | FILMIBEAT KANNADA

#MeToo ಅಭಿಯಾನದಲ್ಲಿ ಬಾಲಿವುಡ್ ದಿಗ್ಗಜ ನಟ, ನಿರ್ದೇಶಕ, ನಿರ್ಮಾಪಕರ ಹೆಸರುಗಳು ಸಿಕ್ಕಿಹಾಕಿಕೊಂಡಿದೆ. ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿ, ವಿಕಾಸ್ ಭಾಲ್, ಸಾಜಿದ್ ಖಾನ್, ಅಲೋಕ್ ನಾಥ್, ಸುಭಾಷ್ ಘಾಯ್ ಅಂತಹ ಖ್ಯಾತನಾಮರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ಈಗ ಬಿಟೌನ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮೀಟೂ ಅಭಿಯಾನದಲ್ಲಿ ಸಿಲುಕಿಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿರುವ ಲೀವಿಂಗ್ ಲೆಂಜೆಂಡ್ ಬಿಗ್ ಬಿ ಹೆಸರು ಈಗ ಟಾರ್ಗೆಟ್ ಆಗಿದೆ.

ಹೌದು, ಇತ್ತೀಚಿಗಷ್ಟೆ ಅಮಿತಾಬ್ ಬಚ್ಚನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ವೇಳೆ ಮಾತನಾಡಿದ್ದ ಬಿಗ್ ಬಿ ಮಹಿಳೆಯ ಪರ ಬೆಂಬಲ ಸೂಚಿಸಿದ್ದರು. ಆದ್ರೀಗ, ಬಾಲಿವುಡ್ ಖ್ಯಾತ ಹೇರ್ ಸ್ಟೈಲಿಸ್ಟ್ ಸ್ವಪ್ನಾ ಭವಾನಿ ಅಮಿತಾಬ್ ಹೆಸರನ್ನ ಪ್ರಸ್ತಾಪಿಸಿ ಅಚ್ಚರಿ ನೀಡಿದ್ದಾರೆ. ಅಷ್ಟಕ್ಕೂ, ಅಮಿತಾಬ್ ಹೆಸರು ಯಾಕೆ ಬಂತು.? ಬಚ್ಚನ್ ಮೇಲೆ ಬಂದಿರುವ ಆರೋಪವೇನು.? ಮುಂದೆ ಓದಿ......

ಬಚ್ಚನ್ ಮುಖವಾಡ ಕಳಚಿ ಬೀಳಲಿದೆಯಂತೆ

ಬಚ್ಚನ್ ಮುಖವಾಡ ಕಳಚಿ ಬೀಳಲಿದೆಯಂತೆ

ಬಾಲಿವುಡ್ ಇಂಡಸ್ಟ್ರಿಯ ಸೆಲೆಬ್ರಿಟಿ ಕೇಶವಿನ್ಯಾಸಕಿ ಸ್ವಪ್ನಾ ಭವಾನಿ ಮೀಟೂ ಅಭಿಯಾನಕ್ಕೆ ಕುರಿತಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಬಗ್ಗೆ ಆಘಾತಕಾರಿ ವಿಷ್ಯ ಪ್ರಸ್ತಾಪಿಸಿದ್ದಾರೆ. ಸರ್ ಬಚ್ಚನ್ ಅವರ ಕರಾಳಮುಖ ಸದ್ಯದಲ್ಲೇ ಬಯಲಾಗಿದೆ ಕಾದು ನೋಡಿ ಎಂದು ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಅಮಿತಾಬ್ ಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.

ಕಾಯಿತ್ತೀರಿ ಬಚ್ಚನ್ ಸರ್

''ನಿಮ್ಮ ಪಿಂಕ್​ ಸಿನಿಮಾ ಬಿಡುಗಡೆಯಾಗಿ ಹೋಗಿದೆ. ನೀವೊಬ್ಬ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದು, ಸದ್ಯದಲ್ಲೇ ಆ ಇಮೇಜ್​ ಕೂಡ ಹೋಗಲಿದೆ. ನಿಮ್ಮ ಬಗೆಗಿನ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ಆಗ ನೀವು ನಿಮ್ಮ ಉಗುರು ಕಚ್ಚಿಕೊಳ್ಳುತ್ತೀರಿ, ಯಾಕೆಂದರೆ ಕಚ್ಚಲು ಉಗುರು ಸಾಕಾಗುವುದಿಲ್ಲ'' ಎಂದು ಟ್ವೀಟ್​ ಮಾಡಿದ್ದಾರೆ.

ಬಿಗ್ ಬಿ ಕೂಡ ಕಿರುಕುಳ ನೀಡಿದ್ದಾರಂತೆ.!

ಇನ್ನು ಬಚ್ಚನ್ ಬಗ್ಗೆ ಆರೋಪ ಮಾಡಿದ್ದಕ್ಕೆ ಅಭಿಮಾನಿಗಳು ಕಿಡಿಕಾರಿದರು. ನೀವು ಪ್ರಚಾರಕ್ಕಾಗಿ ಹೀಗೆ ಆರೋಪ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಸ್ವಪ್ನಾ ''ಅಮಿತಾಬ್​ ಬಚ್ಚನ್​ ಅವರ ಲೈಂಗಿಕ ದೌರ್ಜನ್ಯದ ಕತೆಗಳನ್ನು ನಾನು ಕೇಳಿದ್ದೇನೆ. ಆ ಮಹಿಳೆಯರು ಅದನ್ನೆಲ್ಲ #MeToo ಚಳವಳಿಯಡಿ ಹೇಳುತ್ತಾರೆ ಎಂಬ ನಂಬಿಕೆಯಿದೆ. ಅವರ ಕಪಟತನ ಹೊರಬರಲಿದೆ'' ಎಂದು ಇನ್ನೊಂದು ಟ್ವೀಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

#MeToo ಬಗ್ಗೆ ಅಮಿತಾಬ್ ಹೇಳಿದ್ದೇನು.?

#MeToo ಬಗ್ಗೆ ಅಮಿತಾಬ್ ಹೇಳಿದ್ದೇನು.?

''ಯಾವ ಮಹಿಳೆಯರೂ ಹೀಗೆ ದೌರ್ಜನ್ಯಕ್ಕೆ ಒಳಗಾಗಬಾರದು. ಅದರಲ್ಲೂ ಅವರು ಕೆಲಸ ಮಾಡುವ ಸ್ಥಳದಲ್ಲಿ ಯಾರಾದರೂ ಅವರ ಜತೆ ಅನುಚಿತವಾಗಿ ವರ್ತಿಸಿದರೆ ಅಂಥವರಿಗೆ ಶಿಕ್ಷೆಯಾಗಲೇಬೇಕು'' ಎಂದು ಅಮಿತಾಬ್ ಬಚ್ಚನ್ ಹೇಳಿದ್ದರು.

ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ಬಚ್ಚನ್ ಹೆಸರು ಹೇಳ್ತಾರಾ.?

ಬಚ್ಚನ್ ಹೆಸರು ಹೇಳ್ತಾರಾ.?

#MeToo ಅಭಿಯಾನದಲ್ಲಿ ಘಟಾನುಘಟಿ ವ್ಯಕ್ತಿಗಳ ಹೆಸರು ಬಯಲಾಗಿದೆ. ಆದ್ರೆ, ಯಾವುದಕ್ಕೂ ಸಾಕ್ಷಿ ಇಲ್ಲ. ಬಟ್, ನಾನಾ ಪಾಟೇಕರ್ ವಿರುದ್ಧದ ಆರೋಪಕ್ಕೆ ಮಾತ್ರ ತನುಶ್ರೀ ದತ್ತಾ ದೂರು ನೀಡಿದ್ದಾರೆ. ಇನ್ನುಳಿದಂತೆ ಎಲ್ಲವೂ ಆರೋಪವಾಗಿದೆ. ಈಗ ಅಮಿತಾಬ್ ಬಚ್ಚನ್ ಅಂತಹ ನಟನ ಮೇಲೆ ಆರೋಪ ಬಂದ್ರೆ ನಿಜಕ್ಕೂ ಈ ಅಭಿಯಾನದ ಸ್ವರೂಪವೇ ಬದಲಾಗಬಹುದು. ಮತ್ತಷ್ಟು ದೊಡ್ಡ ಚರ್ಚೆಯಾಗಬಹುದು. ಆದ್ರೆ, ಬಿಗ್ ಬಿ ಹೆಸರನ್ನ ಯಾರ್ ಹೇಳ್ತಾರೆ.? ಗೊತ್ತಿಲ್ಲ.

More from Filmibeat

English summary
In the wake of the Me Too movement, several Bollywood big-wigs have been named. celebrity hairstylist Sapna Bhavnani took to Twitter to attack veteran actor Amitabh Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X