For Quick Alerts
  ALLOW NOTIFICATIONS  
  For Daily Alerts

  ಹ್ಯಾಪಿ ಮ್ಯಾರೀಡ್ ಲೈಫ್ ಮಿಸ್ಟರ್ ಅಂಡ್ ಮಿಸಸ್ ಅಹುಜಾ

  By Harshitha
  |

  ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆನಂದ್ ಅಹುಜಾ ಇಂದು ತಮ್ಮ ಬ್ಯಾಚುಲರ್ ಲೈಫ್ ಗೆ ಬೈ ಬೈ ಹೇಳಿದ್ದಾರೆ. ಇವತ್ತು ತಮ್ಮ ಮನದೊಡತಿ ಬಾಲಿವುಡ್ ನಟಿ ಸೋನಂ ಕಪೂರ್ ರವರೊಂದಿಗೆ ಆನಂದ್ ಅಹುಜಾ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಇಂದು ಮಧ್ಯಾಹ್ನ ಮುಂಬೈನ ಬಾಂದ್ರಾದಲ್ಲಿ ಇರುವ Rockdale ಬಂಗಲೆಯಲ್ಲಿ ಸೋನಂ ಕಪೂರ್ - ಆನಂದ್ ಅಹುಜಾ ವಿವಾಹ ಮಹೋತ್ಸವ ಜರುಗಿತು. ಸಿಖ್ ಸಂಪ್ರದಾಯದಂತೆ ಸೋನಂ-ಆನಂದ್ ಹೊಸ ಬಾಳಿಗೆ ಅಡಿಯಿಟ್ಟರು.

  ಸೋನಂ ಕಪೂರ್-ಆನಂದ್ ಅಹುಜಾ ವಿವಾಹಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಾಲಿವುಡ್ ನ ಖ್ಯಾತನಾಮರು ಸಾಕ್ಷಿ ಆದರು. ಈಗಷ್ಟೇ ನಿಮ್ಮ ಫಿಲ್ಮಿಬೀಟ್ ಗೆ ಲಭ್ಯವಾಗಿರುವ ಸೋನಂ ಕಪೂರ್-ಆನಂದ್ ಅಹುಜಾ ಅವರ ಮದುವೆಯ ಲೇಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ...

  ಮೇಡ್ ಫಾರ್ ಈಚ್ ಅದರ್

  ಮೇಡ್ ಫಾರ್ ಈಚ್ ಅದರ್

  ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ ಸಂತಸದಲ್ಲಿರುವ ಕ್ಷಣ ಕ್ಯಾಮರಾ ಕಂಗಳಲ್ಲಿ ಸೆರೆ ಆಗಿರುವುದು ಹೀಗೆ..

  ಹೊಸ ಬಾಳಿಗೆ ಅಡಿಯಿಟ್ಟ ನಟಿ ಸೋನಂ ಕಪೂರ್-ಆನಂದ್ ಅಹುಜಾಹೊಸ ಬಾಳಿಗೆ ಅಡಿಯಿಟ್ಟ ನಟಿ ಸೋನಂ ಕಪೂರ್-ಆನಂದ್ ಅಹುಜಾ

  ಸಿಖ್ ಸಂಪ್ರದಾಯದಂತೆ ಮದುವೆ

  ಸಿಖ್ ಸಂಪ್ರದಾಯದಂತೆ ಮದುವೆ

  ಇಂದು ಬೆಳಗ್ಗೆ 11 ರಿಂದ 12.30 ರ ಸುಮಾರಿಗೆ ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಫೋಟೋ ಆಲ್ಬಂ: ನಟಿ ಸೋನಂ ಕಪೂರ್ ಕೈಯಲ್ಲಿ ಮದರಂಗಿ ರಂಗುಫೋಟೋ ಆಲ್ಬಂ: ನಟಿ ಸೋನಂ ಕಪೂರ್ ಕೈಯಲ್ಲಿ ಮದರಂಗಿ ರಂಗು

  ಕೆಂಪು ಲೆಹಂಗಾ ಧರಿಸಿದ್ದ ಸೋನಂ

  ಕೆಂಪು ಲೆಹಂಗಾ ಧರಿಸಿದ್ದ ಸೋನಂ

  ಗೋಲ್ಡನ್ ಲೋಟಸ್ ಎಂಬ್ರಾಯಿಡರಿ ಮಾಡಲಾಗಿರುವ ಕೆಂಪು ಬಣ್ಣದ ಲೆಹಂಗಾ ತೊಟ್ಟು ಸೋನಂ ಕಪೂರ್ ಕಂಗೊಳಸಿದ್ರೆ, ಕ್ರೀಮ್ ಕಲರ್ ಕುರ್ತಾ ಧರಿಸಿ ಆನಂದ್ ಅಹುಜಾ ಮಿಂಚಿದರು.

  ಇಂದು ಸಂಜೆ ನಡೆಯಲಿದೆ ಆರತಕ್ಷತೆ

  ಇಂದು ಸಂಜೆ ನಡೆಯಲಿದೆ ಆರತಕ್ಷತೆ

  ಇಂದು ಸಂಜೆ ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ರಿಸೆಪ್ಷನ್ ನಡೆಯಲಿದೆ.

  ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.!ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.!

  ಆನಂದ್ ಅಹುಜಾ ಯಾರು.?

  ಆನಂದ್ ಅಹುಜಾ ಯಾರು.?

  ನಟಿ ಸೋನಂ ಕಪೂರ್ ಕೈಹಿಡಿದಿರುವ ಆನಂದ್ ಅಹುಜಾ ದೆಹಲಿ ಮೂಲದ ಬಿಸಿನೆಸ್ ಮ್ಯಾನ್. Bhane ಎಂಬ ಫ್ಯಾಶನ್ ಲೇಬಲ್ ಹೊಂದಿರುವ ಆನಂದ್ ಅಹುಜಾ ದೆಹಲಿ ಆದ್ಯಂತ ಶೋರೂಮ್ ಗಳನ್ನು ಹೊಂದಿದ್ದಾರೆ. ಇದಲ್ಲದೇ, ಶಾಹಿ ಎಕ್ಸ್ ಪೋರ್ಟ್ಸ್ ಎಂಬ ಕಂಪನಿಗೂ ಆನಂದ್ ಅಹುಜಾ ಮ್ಯಾನೇಜಿಂಗ್ ಡೈರೆಕ್ಟರ್.

  English summary
  Bollywood Actress Sonam Kapoor got married to Anand Ahuja today (May 8th) in Mumbai. Check out the pictures of Bride Sonam Kapoor and Bridegroom Anand Ahuja here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X