ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡ ಈ ಬ್ಯೂಟಿ ಯಾರು? ಪತ್ನಿ ನತಾಶಾ ಪ್ರತಿಕ್ರಿಯೆ ಏನು?

ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವೈಯಕ್ತಿಕ ಬದುಕಿನಲ್ಲಿ ಎಲ್ಲವೂ ಆಲ್‌ರೈಟ್ ಆಗಿಲ್ಲ. ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೊವಿಕ್ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಮಾತು ಕೇಳಿ ಬರುತ್ತಲೇ ಇದೆ. ಆದರೆ, ವಿಚ್ಛೇದನದ ಬಗ್ಗೆ ಈ ಜೋಡಿ ಇನ್ನೂ ಬಹಿರಂಗವಾಗಿ ಎಲ್ಲೂ ಹೇಳುಕೊಂಡಿಲ್ಲ.

ಒಂದ್ಕಡೆ ವಿಚ್ಛೇದನದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಜೊತೆ ಮತ್ತೊಬ್ಬ ಯುವತಿ ಕಾಣಿಸಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆ ಯುವತಿಯೊಂದಿಗೆ ಹಾರ್ದಿಕ್ ಪಾಂಡ್ಯ ಇರುವ ಫೋಟೊ ಹಾಗೂ ವಿಡಿಯೋ ಹರಿದಾಡುತ್ತಿದೆ. ಅಲ್ಲಿಂದ ಮತ್ತೆ ಹಾರ್ದಿಕ್ ಪಾಂಡ್ಯ ವಿಚ್ಚೇದನದ ಸುದ್ದಿ ಮುನ್ನೆಲೆಗೆ ಬಂದಿದೆ.

Hardik Pandya spotted with influencer Prachi Solanki amid divorce rumours with Natasa Stankovic

ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಜೊತೆಗಿರುವ ಆ ಯುವತಿ ಯಾರು? ಹಾರ್ದಿಕ್ ಪಾಂಡ್ಯ ಮನೆಯಲ್ಲಿ ಆ ಯುವತಿ ಕಾಣಿಸಿಕೊಂಡಿದ್ದು ಯಾಕೆ? ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ. ಅಸಲಿಗೆ ಹಾರ್ದಿಕ್ ಪಾಂಡ್ಯ ಜೊತೆ ಪೋಸ್ ಕೊಟ್ಟಿರುವ ಆ ಯುವತಿಯ ಹೆಸರು ಪ್ರಾಚಿ ಸೋಲಂಕಿ.

ಈ ಯುವತಿಯೊಂದಿಗೆ ಹಾರ್ದಿಕ್ ಪಾಂಡ್ಯ ಕೂಡ ಖುಷಿ ಖುಷಿಯಾಗಿಯೇ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರೂ ಮ್ಯಾಚಿಂಗ್ ಕಾಸ್ಟ್ಯೂಮ್‌ನಲ್ಲಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ವಿಚ್ಛೇದನದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹಾಟ್ ಬ್ಯೂಟಿಯೊಂದಿಗೆ ಕಾಣಿಸಿಕೊಂಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಹಾರ್ದಿಕ್ ಪಾಂಡ್ಯ ಹಾಗೂ ಪ್ರಾಚಿ ಸೋಲಂಕಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದವರಿಗೆ ಆ ಬ್ಯೂಟಿ ಯಾರು? ಆಕೆಯ ಹಿನ್ನೆಲೆಯೇನು? ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಮುಗಿಬಿದ್ದಿದ್ದಾರೆ. ಅಂದ್ಹಾಗೆ, ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿರುವ ಪ್ರಾಚಿ ಸೋಲಂಕಿ ಬೇರೆ ಯಾರೂ ಅಲ್ಲ ಆಕೆ ಪ್ರಸಿದ್ಧ ಮೇಕಪ್ ಕಲಾವಿದೆ.

Hardik Pandya spotted with influencer Prachi Solanki amid divorce rumours with Natasa Stankovic

ಪ್ರಾಚಿ ಸೋಲಂಕಿ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಪ್ರಾಚಿ ಸೋಲಂಕಿ ಕೇವಲ ಹಾರ್ದಿಕ್ ಪಾಂಡ್ಯ ಜೊತೆ ಅಷ್ಟೇ ಅಲ್ಲ, ಕೃನಾಲ್ ಪಾಂಡ್ಯ ಜೊತೆನೂ ಕಾಣಿಸಿಕೊಂಡಿದ್ದಾರೆ. ಆ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಷ್ಟೆಲ್ಲ ಆದರೂ ಪತ್ನಿ ನತಾಶಾ ಸ್ಟಾಂಕೋವಿಕ್ ಮಾತ್ರ ಈ ಬಗ್ಗೆ ಪ್ರತಿಕ್ರಿಯೆಯನ್ನು ಮಾತ್ರ ನೀಡಿಲ್ಲ.

ಈ ಫೋಟೊಗಳಲ್ಲಿ ಪ್ರಾಚಿ ಸೋಲಂಕಿ ಹಾಗೂ ಹಾರ್ದಿಕ್ ಪಾಂಡ್ಯ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಆದರೆ, ಹಾರ್ದಿಕ್ ಪಾಂಡ್ಯ ಹಾಗೂ ಪ್ರಾಚಿ ಸೋಲಂಕಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇನ್ನೊಂದು ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಗೆದ್ದ ಬಳಿಕವೂ ಪತ್ನಿ ನತಾಶಾ ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಪೋಸ್ಟ್ ಅನ್ನೂ ಹಾಕಿಲ್ಲ.

More from Filmibeat

English summary
Hardik Pandya spotted with social media influencer Prachi Solanki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X