ಜನಪ್ರಿಯ ಗಾಯಕನ ಮೇಲೆ ಗುಂಡಿನ ದಾಳಿ; ಜಸ್ಟ್ ಮಿಸ್.. ಪೊಲೀಸರಿಂದ ತನಿಖೆ ಶುರು
ಇತ್ತೀಚೆಗೆ ದುಷ್ಕರ್ಮಿಗಳು ಗಾಯಕರನ್ನು ಗುರಿಯಾಗಿಸಿಟ್ಟು ಹಲ್ಲೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲ ಬಳಿಕ ಮತ್ತೊಬ್ಬ ಗಾಯಕನ ಮೇಲೆ ಹಲ್ಲೆ ಮಾಡಲಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಯುವ ಗಾಯಕರ ಮೇಲೆ ಹಲ್ಲೆ ಮಾಡುವುದು ಜಾಸ್ತಿಯಾಗಿದೆ. ಈಗ ಹರಿಯಾಣದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಅಲ್ಲಿನ ಜನಪ್ರಿಯ ಗಾಯಕನ ಮೇಲೆ ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ.
ಹರಿಯಾಣದ ಜನಪ್ರಿಯ ಗಾಯಕ ರಾಹುಲ್ ಫಜಿಲ್‌ಪುರಿಯಾ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಆತಂಕದ ವಾತಾರವಣ ಸೃಷ್ಟಿಯಾಗಿದೆ. ಕಾರಿನಲ್ಲಿ ದುಷ್ಕರ್ಮಿಗಳು ಗಾಯಕ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಆದರೆ, ಗಾಯಕನ ಅದೃಷ್ಟು ಚೆನ್ನಾಗಿತ್ತು. ಈ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಗಾಯಕ ಸುರಕ್ಷಿತವಾಗಿ ಇದ್ದಾರೆಂದು ವರದಿಯಾಗಿವೆ.

ಹರಿಯಾಣದ ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ಗುರುಗ್ರಾಮದ ಸದರ್ನ್ ಫೆರಿಫೆರಲ್ ಸಮೀಪದ ಬಾದ್‌ಶಾಪುದಲ್ಲಿ ಪ್ರಯಾಣ ಮಾಡುತ್ತಿದ್ದರು, ಈ ವೇಳೆ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸುತ್ತಮುತ್ತಲಿನ ಮಂದಿಯನ್ನು ಬೆಚ್ಚಿಬೀಳಿಸಿದೆ. ಅಸಲಿಗೆ ಗಾಯಕ ಹತ್ಯೆಗೆ ಕಾರಣವೇನು? ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ವಿರುದ್ಧ ಯಾರಿಗಾದರೂ ದ್ವೇಷವಿತ್ತೇ? ಈ ಎಲ್ಲಾ ಪ್ರಶ್ನೆಗಳಿಗೂ ಪೊಲೀಸರಿಂದ ಉತ್ತರ ಹುಡುಕುವುದಕ್ಕೆ ತನಿಖೆಯನ್ನ ಆರಂಭಿಸಿದ್ದಾರೆ.
ರಾಹುಲ್ ಹರಿಯಾಣ ಸೇರಿದಂತೆ ಬಾಲಿವುಡ್ ಮಂದಿಗೂ ಚಿರಪರಿಚಿತ. ಪಂಜಾಬಿ ಗಾಯಕರಂತೆ ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಡುವ ರಾಹುಲ್ ಹೆಚ್ಚಾಗಿ ರ್‍ಯಾಪರ್ ಸಾಂಗ್‌ಗಳನ್ನೇ ಹಾಡುತ್ತಾರೆ. ಹೀಗಾಗಿ ಇವರನ್ನು ಇಷ್ಟ ಪಡುವವರಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಹರಿಯಾಣ, ಪಂಜಾಬ್ ಹಾಗೂ ಹಿಂದಿ ಭಾಷೆಯನ್ನು ಮಾತಾಡುವ ಪ್ರದೇಶಗಳಲ್ಲೆಲ್ಲ ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ಹಾಡುಗಳಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.
ಟಾಟಾ ಪಂಚ್ ಕಾರಿನಲ್ಲಿ ದುಷ್ಕರ್ಮಿಗಳು ಬಂದು ಗಾಯಕ ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ಮೇಲೆ ಏಕಾಏಕಿ ಗುಂಡಿನ ದಾಳಿಯನ್ನೇ ನಡೆಸಿದ್ದರು. ಈ ದಾಳಿಯಿಂದ ತಪ್ಪಿಸಿಕೊಂಡ ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ತನ್ನ ಕಾರಿನಲ್ಲಿ ಅಲ್ಲಿಂದ ಹೊರಟು ಹೋದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆಯನ್ನು ಮಾಡುತ್ತಿದ್ದಾರೆ. ಗಾಯಕ ರಾಹುಲ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇತ್ತೀಚೆಗೆ ಬಂದ ವರದಿ ಪ್ರಕಾರ,ಗಾಯಕ ರಾಹುಲ್ ಮೇಲೆ ಗುಂಡಿನ ದಾಳಿ ನಡೆದ ಒಂದು ಗಂಟೆಗಳ ಬಳಿಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಆದರೆ, ಗನ್‌ನಿಂದ ಶೂಟ್ ಮಾಡಿರುವುದಕ್ಕೆ ಇನ್ನೂ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರು ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ದುಷ್ಕರ್ಮಿಗಳು ಕಳೆದ ಹಲವು ದಿನಗಳಿಂದ ಗಾಯಕನ್ನು ಟಾರ್ಗೆಟ್ ಮಾಡುವುದಕ್ಕೆ ಪ್ಲಾನ್ ಮಾಡಿದ್ದರು ಎಂದು ಹೇಳಲಾಗಿದೆ.
ಇನ್ನು ರ್‍ಯಾಪರ್ ರಾಹುಲ್ ಫಜಿಲ್‌ಪುರಿಯಾ ಬಗ್ಗೆ ಹೇಳುವುದಾದರೇ ಹಾಡುಗಳಷ್ಟೇ ಫೇಮಸ್ ಅಲ್ಲ. ಇನ್‌ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ಸುಮಾರು 1.2 ಮಿಲಿಯನ್ ಬೆಂಬಲಿಗರು ಇದ್ದಾರೆ. ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ.


Click it and Unblock the Notifications











