For Quick Alerts
  ALLOW NOTIFICATIONS  
  For Daily Alerts

  'ಹಸೀ ತೋ ಪಸೀ' ಚಿತ್ರದಲ್ಲಿ ನಟಿಸಿದ್ದ ನಟ ಜಗೇಶ್ ಮುಕಾಟಿ ನಿಧನ

  |

  ಹಿಂದಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ಜಗೇಶ್ ಮುಕಾಟಿ (47) ಬುಧವಾರ ಆಸ್ಪತ್ರೆಯಲ್ಲಿ ನಿಧನರಾದರು.

  ಪ್ರಭಾಸ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ ತಮನ್ನಾ..? | Prabhas | Tamannaah Bhatia

  ಹಸೀ ತೋ ಪಸಿ, ಮನ್, ಶ್ರೀ ಗಣೇಶ್ ಮುಂತಾದ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಜಗೇಶ್ ಅವರನ್ನು ಕಳೆದ ಶುಕ್ರವಾರ ಮುಂಬೈನ ಜುಹುದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವು ವರ್ಷಗಳಿಂದ ಅವರು ಆಸ್ತಮಾ ಮತ್ತು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಹೆಚ್ಚು ದೈಹಿಕ ಕಸರತ್ತು ಮತ್ತು ಡಯಟ್ ಪಾಲಿಸುತ್ತಿದ್ದರು.

  ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆಗೆ ಶರಣುನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆಗೆ ಶರಣು

  ಲಾಕ್ ಡೌನ್ ಆರಂಭವಾದಾಗಿನಿಂದ ಅವರಿಗೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅವರ ಆಸ್ತಮಾ ತೀವ್ರವಾಗತೊಡಗಿತ್ತು. ಕಳೆದ ವಾರ ಅವರು ಉಸಿರಾಟದ ಸಮಸ್ಯೆಗೆ ತುತ್ತಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ತಾವು ಆಸ್ಪತ್ರೆಗೆ ದಾಖಲಾಗಿರುವುದನ್ನು ಯಾರಿಗೂ ಹೇಳಬಾರದು ಎಂದು ಸೂಚಿಸಿದ್ದರು. ಕೊರೊನಾ ವೈರಸ್ ಸಂಕಷ್ಟದ ಈ ಸಮಯದಲ್ಲಿ ಬೇರೆಯವರು ಕಷ್ಟಕ್ಕೆ ಸಿಲುಕುವುದು ಬೇಡ ಎನ್ನುವುದು ಅವರ ಕಾಳಜಿಯಾಗಿತ್ತು. ಬುಧವಾರ ಮಧ್ಯಾಹ್ನ 3 ಗಂಟೆಗೆ ಅವರು ಕೊನೆಯುಸಿರೆಳೆದರು. ನಿಯಮಾವಳಿಯಂತೆ ಅವರನ್ನು ಕೊರೊನಾ ವೈರಸ್ ತಪಾಷಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದಿತ್ತು ಎಂದು ಜಗೇಶ್ ಅವರ ಆಪ್ತರಾದ ನಟ ಸಂಜಯ್ ಗೊರಾಡಿಯಾ ತಿಳಿಸಿದ್ದಾರೆ.

  ಖ್ಯಾತ ನಟ ಮುರಳಿ ಶರ್ಮಾ ತಾಯಿ ನಿಧನಖ್ಯಾತ ನಟ ಮುರಳಿ ಶರ್ಮಾ ತಾಯಿ ನಿಧನ

  ಆಸ್ತಮಾ ಉಲ್ಬಣಗೊಂಡಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಬುಧವಾರ ಸಂಜೆ ಅವರ ಅಂತ್ಯಸಂಸ್ಕಾರ ನೆರವೇರಿತು. ಹಿಂದಿಯಲ್ಲದೆ ಅವರು ಗುಜರಾತಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ನಟಿಸಿದ್ದರು.

  English summary
  Actor Jagesh Mukati (47) who worked in Hindi film and television shows like Hasee Toh Phasee, mann passed away on Wednesday afternoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X