ಹೊಸ ಹೀರೋ ಸಿನಿಮಾ 'ಸೈಯಾರ' ನೋಡಲು ಡ್ರಿಪ್ ಹಾಕೊಂಡು ಬಂದ ಭಗ್ನ ಪ್ರೇಮಿ; ಇಲ್ಲಿದೆ ವಿಡಿಯೋ
ಕೆಲವು ಸಿನಿಮಾಗಳೇ ಹಾಗೇ ಸಿನಿಪ್ರೇಮಿಗಳನ್ನು ಹುಚ್ಚರಂತೆ ಕಾಡಿಬಿಡುತ್ತೆ. ಅದರಲ್ಲೂ ಕೆಲವು ಲವ್ ಸ್ಟೋರಿಗಳು ಕಣ್ಣಲ್ಲಿ ನೀರು ತರಿಸುತ್ತವೆ. ಇಂತಹ ಸಾಕಷ್ಟು ಸಿನಿಮಾಗಳು ಈ ಹಿಂದೆ ಬಂದು ಹೋಗಿವೆ. ಕೆಲವರು ಆ ಸಿನಿಮಾಗಳನ್ನು ತಮ್ಮ ಲೈಫ್‌ಗೆ ನೇರವಾಗಿ ಕನೆಕ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಸಿನಿಮಾ ನೋಡುವುದಕ್ಕೆ ಬಂದ ಪ್ರೇಕ್ಷಕನ ಲವ್ ಬ್ರೇಕಪ್ ಆಗಿದ್ದರೆ ಮಾತ್ರ ಮುಗಿದೇ ಹೋಯ್ತು. ಥಿಯೇಟರ್‌ನಲ್ಲಿಯೇ ಹೈಡ್ರಾಮ ಆಗಿಬಿಡುತ್ತೆ.
ಸದ್ಯ ಬಾಲಿವುಡ್ ಸಿನಿಮಾವೊಂದು ಇಂತಹದ್ದೇ ಕ್ರೇಜ್ ಹುಟ್ಟಾಕುತ್ತಿದೆ. ಬಾಲಿವುಡ್‌ನ ಬ್ರೇಕಪ್ ಸ್ಟೋರಿ ಸ್ಪೆಷಲಿಸ್ಟ್ ಮೋಹಿತ್ ಸೂರಿ ಹೊಸ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಆ ಸಿನಿಮಾವೇ 'ಸೈಯರಾ'. ಹೊಸ ಪ್ರತಿಭೆ ಅಹಾನ್ ಪಾಂಡೆ, ಅನೀತ್ ಪಡ್ಡಾ ನಟಿಸಿರುವ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಈ ಸಿನಿಮಾ ಕೂಡ ಭಗ್ನ ಪ್ರೇಮದ ಕಥೆಯನ್ನೇ ಹೇಳುತ್ತಿದೆ.

ಈ ಹಿಂದೆ ಮೋಹಿತ್ ಸೂರಿ ಯುವ ಸಮುದಾಯದ ಹೃದಯ ಕದ್ದಿದ್ದ 'ಆಶಿಕಿ 2' ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ಭಗ್ನ ಪ್ರೇಮದ ಕಥೆ ಬ್ರೇಕಪ್ ಆದ ಮನ ತಟ್ಟಿದೆ. ಅದ್ಯಾವ ಮಟ್ಟಿಗೆ ಅಂದರೆ, ಭಗ್ನ ಪ್ರೇಮಿಯೊಬ್ಬ ಈ ಸಿನಿಮಾ ನೋಡುವುದಕ್ಕೆ ಕೈಯಲ್ಲಿ ಹಾಕಿದ ಐವಿ ಡ್ರಿಪ್ ಹಿಡಿದು ಕೊಂಡೇ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಇದು ನಿಜ. ಕಳೆದ ಕೆಲವು ಗಂಟೆಗಳಿಂದ ಈ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟ್ಟಿಗರು ಯುವಕನಿಗೆ ಬುದ್ದಿವಾದ ಹೇಳುವವರೆಗೂ ಬಂದು ನಿಂತಿದ್ದಾರೆ. ಡಿಸೈನ್, ಡಿಸೈನ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ, ಐವಿ ಡ್ರಿಪ್ ಹಾಕೊಂಡು ಥಿಯೇಟರ್‌ಗೆ ಬಂದು 'ಸೈಯಾರಾ' ಸಿನಿಮಾ ನೋಡಿದ ವ್ಯಕ್ತಿ ಹೆಸರು ಫೈಸಲ್. ಆತ ಕೂಡ ಆರ್ಟಿಸ್ಟ್ ಎಂದು ಹೇಳಿಕೊಂಡಿದ್ದಾನೆ. ಐವಿ ಡ್ರಿಪ್ ಹಾಕಿಕೊಂಡು ಸಿನಿಮಾ ವೀಕ್ಷಕಿಸುವ ವೇಳೆ ಆತನಿಗೆ ಗೆಳೆಯ ಸಾಥ್ ಕೊಟ್ಟಿದ್ದಾನೆ. ಈ ಸಿನಿಮಾ ನೋಡಿ ಭಗ್ನ ಪ್ರೇಮಿ ಭಾವುಕನಾಗಿದ್ದ ಎಂದು ಇಂಡಿಯಾ ಟು ಡೇ ವರದಿ ಮಾಡಿದೆ. ಡ್ರಿಪ್ ಹಾಕೊಂಡು ಸಿನಿಮಾ ನೋಡಿದ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಒಬ್ಬರೊಬ್ಬರಾಗಿಯೇ ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಡ್ರಿಪ್ ಹಾಕೊಂಡು ಸಿನಿಮಾ ನೋಡುವ ಬಂದ ಯುವಕನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಗೆಟಿವ್ ಕಮೆಂಟ್‌ಗಳನ್ನು ಮಾಡಿದ್ದರೆ, ಮತ್ತೆ ಕೆಲವರು ಯುವಕನಿಗೆ ಬುದ್ದಿ ಮಾತುಗಳನ್ನು ಹೇಳಿದ್ದಾರೆ. "ನಿನಗೆ ಈಗ ಹುಷಾರಿಲ್ಲ. ದೇವರನ್ನು ನೆನಪಿಸಿಕೋ, ಸೈಯಾರಾದಿಂದ ಕೆಲಸ ಆಗುವುದಿಲ್ಲ" ಎಂದು ನೆಟ್ಟಿಗರೊಬ್ಬರು ಬುದ್ದಿವಾದ ಹೇಳಿದ್ದಾರೆ. ಇನ್ನೊಬ್ಬರು "ಆಸ್ಪತ್ರೆಯಿಂದ ನೇರವಾಗಿ ಸಿನಿಮಾ ನೋಡುವುದಕ್ಕೆ ಬಂದು ಬಿಟ್ಯಾ? ಇಷ್ಟೊಂದು ಶ್ರದ್ಧೆನಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು 'ಸೈಯಾರಾ' ಬಾಲಿವುಡ್‌ಗೆ ಅನಿರೀಕ್ಷಿತ ಯಶಸ್ಸು ಸಿಕ್ಕಿದೆ. ಇಂತಹದ್ದೊಂದು ಸಕ್ಸಸ್ ಅನ್ನು ಸಿನಿಮಾ ನಿರೀಕ್ಷೆ ಮಾಡಿರಲಿಲ್ಲ. ಅದ್ಬುತವಾದ ಚಿತ್ರಕಥೆ, ಟಿಪಿಕಲ್ ಬಾಲಿವುಡ್ ಶೈಲಿಯ ಸಿನಿಮಾ, ಮಾರ್ಕೆಟಿಂಗ್ ಎಲ್ಲವೂ ವರ್ಕ್ ಆಗಿವೆ. ಮೋಹಿತ್ ಸೂರಿ ನಿರ್ದೇಶಿಸಿದ ಮತ್ತೊಂದು ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಿನ್ನೆ (ಜುಲೈ 20) ಒಂದೇ ದಿನ ಸುಮಾರು 37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಮೂರು ದಿನಗಳಲ್ಲಿ ₹83 ಕೋಟಿ ರೂಪಾಯಿಯನ್ನು (nett) ಕಲೆ ಹಾಕಿದೆ. ಇನ್ನು ಕೆಲವೇ ದಿನಗಳಲ್ಲಿ ₹100 ಕೋಟಿ ಕ್ಲಬ್ ಸೇರಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ.


Click it and Unblock the Notifications











