ಧರ್ಮೇಂದ್ರಗೆ ಮರಣೋತ್ತರ 'ಪದ್ಮವಿಭೂಷಣ'; ಪ್ರಶಸ್ತಿ ಸ್ವೀಕರಿಸುವ ವೇಳೆ ಹೇಮಾ ಮಾಲಿನಿ ಭಾವುಕ..ಪುತ್ರಿ ಕಣ್ಣೀರು
ಬಾಲಿವುಡ್‌ನ ಹೀ-ಮ್ಯಾನ್ ಎಂದೇ ಜನಪ್ರಿಯರಾಗಿದ್ದ ಧರ್ಮೇಂದ್ರ ಕೆಲವು ದಿನಗಳ ಹಿಂದಷ್ಟೇ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದರು. ಅವರ ಅಗಲಿಕೆ ಬಳಿಕ ಭಾರತದ ಅತ್ಯುನ್ನತ 'ಪದ್ಮವಿಭೂಷಣ' ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ದಿವಂಗತ ನಟ ಸುದೀರ್ಘ ಕಾಲ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು.
ಇಂದು (ಮೇ 25) ದೆಹಲಿಯಲ್ಲಿ 2026ನೇ ಸಾಲಿನ ಮೊದಲ ಹಂತದ ದೇಶದ ಅತ್ಯುತ್ತನ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಈ ವೇಳೆ ದಿವಂಗತ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ 'ಪದ್ಮವಿಭೂಷಣ' ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಪತಿ ಧರ್ಮೇಂದ್ರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ನಟಿ ಹೇಮಾ ಮಾಲಿನಿ ಭಾವುಕರಾಗಿದ್ದರು. ಈ ವೇಳೆ ತಾಯಿಯೊಂದಿಗೆ ಈ ಸಮಾರಂಭಕ್ಕೆ ಬಂದಿದ್ದ ಪುತ್ರಿ ಅಹಾನಾ ಡಿಯೋಲ್ ಕೂಡ ತಂದೆಯನ್ನು ನನೆದು ಕಣ್ಣೀರು ಹಾಕಿದರು. ಈ ದೃಶ್ಯ ಸಿನಿಮಾ ಪ್ರೇಮಿಗಳ ಕಣ್ಣುಗಳನ್ನು ಒದ್ದೆಯಾಗಿಸಿವೆ.
ಇಂದು (ಮೇ 25) ಮೊದಲ ಹಂತದ ಪ್ರದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ಲಿಸ್ಟ್‌ನಲ್ಲಿ ಧರ್ಮೇಂದ್ರ ಅವರ ಹೆಸರು ಕೂಡ ಇತ್ತು. ಹೀಗಾಗಿ ಹೇಮಾ ಮಾಲಿನಿ ಹಾಗೂ ಅವರ ಪುತ್ರಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ನಟಿ ಹೇಮಾ ಮಾಲಿನಿ ಕಣ್ಣುಗಳಲ್ಲಿ ನೀರು ಕಾಣಿಸಿಕೊಂಡಿತ್ತು. ನೀರು ತುಂಬಿದ ಕಣ್ಣುಗಳಲ್ಲೇ ಕೈ ಮುಗಿದುಕೊಂಡು ವೇದಿಕೆಯ ಕಡೆಗೆ ಹೆಜ್ಜೆ ಹಾಕಿ ಬರುತ್ತಿರುವ ದೃಶ್ಯ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಹೇಮಾ ಮಾಲಿನಿ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ "ಈ ಸಮಾರಂಭ ನನಗೆ ಅತ್ಯಂತ ಭಾವುಕ ಕ್ಷಣ. ನನ್ನ ಜೊತೆ ಅಹಾನಾ ಇದ್ದಾಳೆ. ಇಶಾ ಕೂಡ ಬರಬೇಕಿತ್ತು. ಆದರೆ, ಅವಳಿಗೆ ಸಾಧ್ಯವಾಗಿಲ್ಲ. ಇನ್ನು ಸನ್ನಿ ಡಿಯೋಲ್, ಬಾಬಿ ಡಿಯೋಲ್ ಸೇರಿದಂತೆ ಇಡೀ ಕುಟುಂಬಕ್ಕೆ ಈ ಪ್ರಶಸ್ತಿ ಸಮಾರಂಭದ ಬಗ್ಗೆ ಗೊತ್ತಿದೆ. ನಮ್ಮೆಲ್ಲರಿಗೂ ಇದೊಂದು ಹೆಮ್ಮೆಯ ಕ್ಷಣ" ಎಂದು ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದರು.

ಪದ್ಮ ವಿಭೂಷಣ ಭಾರತ ರತ್ನ ನಂತರದ ಎರಡನೇ ಅತ್ಯುನ್ನತ ಪ್ರಶಸ್ತಿ. ಕಲೆ, ಸಾಹಿತ್ಯ, ವಿಜ್ಞಾನ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಧರ್ಮೇಂದ್ರಗೆ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications